ಕಾಂಗ್ರೇಸ್ ಪಕ್ಷದಿಂದ ಚಾಮುಂಡಿ ಬೆಟ್ಟ ಗ್ರಾ.ಪಂ ಉಪಾಧ್ಯಕ್ಷರಾದ ವೈ ಎಸ್ ರವಿಕುಮಾರ್ ರವರಿಗೆ ಸನ್ಮಾನ

ನಂದಿನಿ ಮೈಸೂರು

ಚಾಮುಂಡಿ ಬೆಟ್ಟ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ವೈ ಎಸ್ ರವಿಕುಮಾರ್ ರವರಿಗೆ ಸನ್ಮಾನಿಸಲಾಯಿತು.

ಕೆಪಿಸಿಸಿ ಅಸಂಘಟಿತ ಕಾರ್ಮಿಕರ ರಾಜ್ಯ ಪದಾಧಿಕಾರಿಗಳು ಸೇರಿದಂತೆ ಕಾಂಗ್ರೇಸ್ ಪಕ್ಷದಿಂದ ರವಿಕುಮಾರ್ ರವರಿಗೆ ಮೈಸೂರು ಪೇಟಾ ತೊಡಿಸಿ ಹೂಗುಚ್ಚ ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ್ ರವರು ಕಳೆದ 20 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಬಂದಿದದ್ದೇನೆ.ಈಗ ಎಲ್ಲರೂ ಸೇರಿ ಚಾಮುಂಡಿ ಬೆಟ್ಟ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ನನ್ನನ್ನ ಆಯ್ಕೆ ಮಾಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ,ಅಂಗಡಿ ಮಳಿಗೆ ಸಮಸ್ಯೆ, ಪ್ಲ್ಯಾಸ್ಟಿಕ್ ಮುಕ್ತ ,ಪರಿಸರ ಸಂರಕ್ಷಣೆ ತಾವರೇ ಕಟ್ಟೆ ಗ್ರಾಮಕ್ಕೆ ಸ್ಮಶಾನ ಅಭಿವೃದ್ಧಿ ಮಾಡುವುದು ನನ್ನ‌ ಮುಖ್ಯ ಕೆಲಸವಾಗಿದೆ.
ನನ್ನ ಅಧಿಕಾರದ ಅವಧಿಯಲ್ಲಿ ಜನರಿಗೆ ಎಲ್ಲಾ ಸೌಲಭ್ಯ ಹಾಗೂ ಸುಸಜ್ಜಿತವಾಗಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರಲ್ಲದೇ ಸರ್ಕಾರದಲ್ಲಿ ಬರುವ ಯೋಜನೆ ಜನರ ಮನೆ ಬಾಗಿಲಿಗೆ ತಲುಪಿಸುವುದಾಗಿ ತಿಳಿಸಿದರು.

ನಂತರ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಶ್ರೀಪಾಲ್ ರವರು ಮಾತನಾಡಿ ರವಿಕುಮಾರ್ ರವರು ಚಾಮುಂಡಿ ಬೆಟ್ಟ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಚಾಮುಂಡಿ ಬೆಟ್ಟ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ಸಮಸ್ಯೆ ಗಳನ್ನ ರವಿಕುಮಾರ್ ಆಲಿಸಿ ಅವರಿಗೆ ಅನುಕೂಲ ಮಾಡಿಕೊಡಬೇಕು.ಪ್ಲ್ಯಾಸ್ಟಿಕ್ ಮುಕ್ತ ಚಾಮುಂಡಿ ಬೆಟ್ಟದ ಜೊತೆಗೆ ಕಸ ಮುಕ್ತ ಚಾಮುಂಡಿ ಬೆಟ್ಟವಾಗಿ ಮಾಡಬೇಕಿದೆ.ಸರ್ಕಾರ ಚಾಮುಂಡಿ ಬೆಟ್ಟ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ರವಿ ಎಸ್ ನಾಯಕ್,ಸುನೀಲ್ ನಾರಾಯಣ್,ಪಾಪಣ್ಣ,ಬಾಲಕೃಷ್ಣ, ಮಹದೇವ್,ರಂಗಸ್ವಾಮಿ,ಸುನೀಲ್,ಯೋಗೇಶ್ ಯಾಧವ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *