ಮೈಸೂರು:19 ಫೆಬ್ರವರಿ 2022
ನಂದಿನಿ ಮೈಸೂರು
ಹಿಜಾಬ್ ಹಾಗೂ ಕೇಸರಿ ಶಾಲಿನ ವಿವಾದ ಹಿನ್ನೆಲೆ ಹಿಂದೂ , ಮುಸಲ್ಮಾನ್ ಕ್ರೈಸ್ತ ಈ ಮೂರು ಧರ್ಮದ ಮುಖಂಡರನ್ನು ಒಳಗೊಂಡಂತೆ ರಾಷ್ಟ್ರೀಯ ಭಾವೈಕ್ಯತೆಯನ್ನು ಆಚರಿಸಲಾಯಿತು.
ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ನೇತೃತ್ವದಲ್ಲಿ
ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆ ಬಳಿ ಹಿಂದೂ ಮುಸಲ್ಮಾನ ಕ್ರೈಸ್ತ ಸಮುದಾಯದವರು ಪರಸ್ಪರ ಸಿಹಿ ವಿತರಿಸಿ ಅನಂತರ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಸೌಹಾರ್ದತೆ ಹಾಗೂ ಸಾಮರಸ್ಯ ಸಂದೇಶ ಸಾರಲಾಯಿತು.
ರಾಷ್ಟ್ರೀಯ ಭಾವೈಕ್ಯತೆ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದ ನಂತರ ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಸರ್ವಜನಾಂಗದ ಹಿತಕ್ಕಾಗಿ ಸಂವಿಧಾನದ ಆಶ್ರಯದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕು ದೊರೆತಿದೆ. ವಿವಿಧತೆಯಲ್ಲಿ ಏಕತೆ ಸೌಹಾರ್ದತೆ ಸಮಾನತೆ ಕಾಪಾಡಿಕೊಳ್ಳುವುದು ಸಾರ್ವಜನಿಕರ ಮತ್ತು ಸರ್ಕಾರದ ಕರ್ತವ್ಯ, ಅಂತದರಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡದ ಹಾಗೇ ಶಾಸಕಾಂಗ ಕಾರ್ಯಾಂಗ ನ್ಯಾಯಂಗ ನಿಭಾಯಿಸಬೇಕು ಅದರ ಕಾನೂನೂ ಆದೇಶದಂತೆ ನಾವೆಲ್ಲರೂ ಪಾಲಿಸಬೇಕು , ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳು ತುಂಬಿದೆ ಭಾರತದಲ್ಲಿ ಎಲ್ಲರಿಗೂ ಬದುಕುವ ಸಮಾನತೆಯ ಹಕ್ಕಿದೆ ಎಲ್ಲಾ ಧರ್ಮದವರು ಒಂದೇ ನಾವೆಲ್ಲರೂ ಸಹೋದರರು ಭಾರತೀಯರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸೌಹಾರ್ದತೆ ಕಾರ್ಯಕ್ರಮದಲ್ಲಿ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಮೂರ್ತಿ, ಸೇವಾದಲದ ಅಧ್ಯಕ್ಷ ರಾದ ಗಿರೀಶ್ ,ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ,ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಮೈಸೂರು ನ ಪದಾಧಿಕಾರಿಗಳು ,ಹಾರ್ಡ್ವಿಕ್ ಚರ್ಚ್ ಫಾದರ್ ಗುರುಶಾಂತು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ,ಯುವ ಕಾಂಗ್ರೆಸ್ ಪದಾಧಿಕಾರಿಗಳು ,ಎನ್ ಎಸ್ ಯುಐ ಪದಾಧಿಕಾರಿಗಳು ,ಕಾಂಗ್ರೆಸ್ ಮುಖಂಡರಾದ ರಾಜೇಶ್ ,ಸುನೀಲ್ ,
ಪವನ್ ಸಿದ್ದರಾಜು ,ವಿನಯ್ ಕಣಗಾಲ್ ,ಮಲ್ಲೇಶ್, ಕಿರಣ್ ,ಹಾಗೂ 3ಧರ್ಮದ
ಮುಖಂಡರುಗಳು ಮತ್ತು ಇತರರು ಹಾಜರಿದ್ದರು.