ಮೈಸೂರು:19 ಫೆಬ್ರವರಿ 2022
ನಂದಿನಿ ಮೈಸೂರು
ಸಾಂಸ್ಕೃತಿಕ ನಗರಿಯ 112 ವರ್ಷ ಇತಿಹಾಸ ಹೊಂದಿರುವ ದಿ ಸಿಟಿ ಕೋ ಅಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಪಡುವಾರಹಳ್ಳಿ ಎಸ್ .ಬಿ ಶಿವ ಆಯ್ಕೆಯಾದರು.
ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿರುವ ಬ್ಯಾಂಕ್ ಕಚೇರಿಯಲ್ಲಿ ಚುನಾವಣಾಧಿಕಾರಿ ಪುನೀತ್, ಮಾಜಿ ಅಧ್ಯಕ್ಷ ಪ್ರಸನ್ನ. ಎನ್ ಲಕ್ಷ್ಮಣ್ ಶಿವ ರವರಿಗೆ ಅಧಿಕಾರ ಹಸ್ತಾಂತರಿಸಿದರು.
ಉಪಾಧ್ಯಕ್ಷರಾದ ಹೇಮಾ, ನಿರ್ದೇಶಕರಾದ ಮಧು, ಸ್ವರೂಪ್, ಅಶೋಕ್, ಸ್ವಾಮಿ ಸೇರಿದಂತೆ ಬ್ಯಾಂಕಿನ ಸದಸ್ಯರು ಶಿವ ರವರಿಗೆ ಹೂಗುಚ್ಚ ನೀಡಿ ಸಿಹಿ ತಿನಿಸಿ ಶುಭ ಹಾರೈಸಿದರು.
1910 ರಲ್ಲಿ ಪ್ರಾರಂಭಗೊಂಡು ಇಂದಿಗೆ 112 ವರ್ಷ ಪೂರೈಸಿರುವ ಈ ಬ್ಯಾಂಕ್ ಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸಂತೋಷವಾಗಿದೆ. ಇಂದು 25 ಸಾವಿರ ಮಂದಿ ಶೇರುದಾರರನ್ನು ಹೊಂದಿದ್ದು, ಇಂತಹ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬ್ಯಾಂಕ್ ನ ಹಿರಿಯರ ಕೋರಿಕೆಗೆ ಅನುಗುಣವಾಗಿ ಬ್ಯಾಂಕ್ ಸೇವೆಗಳನ್ನು ಕೆಳಗೆ ತರುವ ಪ್ರಯತ್ನವನ್ನು ಶೀಘ್ರ ದಲ್ಲೇ ಮಾಡಲಾಗುವುದು. ಜತೆಗೆ ಸಂಘದ ಸದಸ್ಯರಿಗೆ ಆರೋಗ್ಯ ಶಿಬಿರ ಸೇರಿ ಅಭಿವೃದ್ಧಿ ಪರ ಯೋಜನೆಗಳನ್ನು ನೀಡುವ ನಿಟ್ಟಿನಲ್ಲಿ ಒಗ್ಗಟ್ಟಿನಲ್ಲಿ ತೀರ್ಮಾನಿಸಲಾಗುವುದು ಎಂದು ನೂತನ ಅಧ್ಯಕ್ಷ ಶಿವ ರವರು ಹೇಳಿದರು.