ನಂದಿನಿ ಮೈಸೂರು
ಕಮಲ್ ಪ್ರೊಡಕ್ಷನ್ಸ್ ಲಾಂಛನದ ಕವಿತಾ ಅರುಣ್ ಕುಮಾರ್ ನಿರ್ಮಿಸಿರುವ ಆರ್ಮುಗಂ ನಿರ್ದೇಶನದ ‘ರಂಗಿನ ರಾಟೆ’ ಚಿತ್ರ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ.
ರಾಜೀವ್ ರಾಥೋಡ್, ದುನಿಯಾ ರಶ್ಮಿ, ಸಂತೋಷ್ ಮಳವಳ್ಳಿ, ಭವ್ಯ, ರಾಂಗ್ ಕಾಲ್ ಚಂದ್ರು, ಮುರಳಿ ಮೋಹನ್, ಸ್ವಪ್ನ,ಗಣೇಶ್ ಮುಂತಾದವರು “ರಂಗಿನ ರಾಟೆ” ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸಂತೋಷ್ ಮಳವಳ್ಳಿ ಗೀತರಚನೆ, ಚಂದ್ರು ಓಬ್ಬಯ್ಯ ಸಂಗೀತ ನಿರ್ದೇಶನ, ರವಿ ಸುವರ್ಣ ಛಾಯಾಗ್ರಹಣ ಮತ್ತು ದಾಮೋದರ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ.
ಚಿತ್ರ ಬಿಡುಗಡೆ ಕುರಿತು ಚಿತ್ರತಂಡದ ಸದಸ್ಯರು ಮೈಸೂರಿನಲ್ಲಿ ಖುಷಿ ಹಂಚಿಕೊಂಡಿದ್ದಾರೆ.
ರಂಗಿನ ರಾಟೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ.ನಾನು ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಜೀವನ ಕೂಡ ರಾಟೆಯ ತರಹ ಸುತ್ತಿಸುತ್ತಿ ಮತ್ತೇ ಅಲ್ಲೇ ಬಂದು ನಿಲ್ಲುತ್ತದೆ. ಹಾಗಾಗಿ ಚಿತ್ರಕ್ಕೆ ‘ರಂಗಿನ ರಾಟೆ’ ಎಂದು ಶೀರ್ಷಿಕೆ ಇಡಲಾಗಿದೆ ಎಂದರು ನಾಯಕ ರಾಜೀವ್ ರಾಥೋಡ್. ನಾನು ಸಹ ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿರುವುದಾಗಿ ಭವ್ಯ ತಿಳಿಸಿದರು.
ಚಿತ್ರದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಈಗ ಚಿತ್ರ ಬಿಡುಗಡೆಯಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ಕವಿತಾ ಅರುಣ್ ಕುಮಾರ್ ತಿಳಿಸಿದರು.