ನಂದಿನಿ ಮೈಸೂರು
ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಪಿ.ರಾಜೇಶ್ವರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೈಸೂರಿನ ಹೃದಯ ಭಾಗದಲ್ಲಿರುವ 117 ವರ್ಷಗಳ ಇತಿಹಾಸವಿರುವ ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್ ನಲ್ಲಿ ಮೊದಲಿಗೆ ನಿರ್ದೇಶಕರೇಲ್ಲ ಒಟ್ಟುಗೂಡಿ ಸಭೆ ನಡೆಸಿ ಸಭೆಯಲ್ಲಿ ಅಂತಿಮವಾಗಿ ಪಿ.ರಾಜೇಶ್ವರಿ ಅವರನ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಬ್ಯಾಂಕ್ ನೂತನ ಅಧ್ಯಕ್ಷೆ ರಾಜೇಶ್ವರಿ ಮಾತನಾಡಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ ನಿರ್ಧೆಶಕರುಗಳಿಗೆ ಧನ್ಯವಾದ ತಿಳಿಸುತ್ತೇನೆ ಈ ಹಿಂದೆ ನನ್ನ ತಾಯಿ ದಾಕ್ಷಾಯಿಣಿರವರು ಈ ಬ್ಯಾಂಕ್ ಅಧ್ಯಕ್ಷರಾಗಿದ್ದರು ಅವರ ಬಳಿಕ ಮಹಿಳೆಯರು ಯಾರು ಈ ಬ್ಯಾಂಕ್ ಅಧ್ಯಕ್ಷ ಸ್ಥಾನ ವಹಿಸಿರಲಿಲ್ಲ. ಇದೀಗ ನನಗೆ ಆ ಸ್ಥಾನ ದೊರಕಿರುವುದು ಮತ್ತಷ್ಟು ಸಂತಸ ತಂದಿದೆ ನನ್ನ ಅಧಿಕಾರ ಅವಧಿಯಲ್ಲಿ ಬ್ಯಾಂಕ್ ಏಳಿಗೆಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡರು,ನಗರ ಪಾಲಿಕೆ ಸದಸ್ಯ ಎಸ್ ಬಿ ಎಂ ಮಂಜು,ಪಡುವಾರಹಳ್ಳಿ ರಾಮಕೃಷ್ಣ,ರವಿ ರಾಜಕೀಯ,ರವಿಕುಮಾರ್ ಸೇರಿದಂತೆ ಬ್ಯಾಂಕಿನ ನಿರ್ದೇಶಕರು ಹಾಗೂ ಸದಸ್ಯರುಗಳು ರಾಜೇಶ್ವರಿ ಹಾಗೂ ಊಮಾಶಂಕರ್ ರವರಿಗೆ ಹೂಗುಚ್ಚ ನೀಡಿ ಸಿಹಿ ತಿನಿಸಿ ಶುಭ ಹಾರೈಸಿದರು.