ನಂದಿನಿ ಮೈಸೂರು: ರೈತ ಕಲ್ಯಾಣದ ನಡಿಗೆ, ಅನ್ನದಾತರ ಅಭಿವೃದ್ಧಿ ಕಡೆಗೆ ಎಂಬ ಪ್ರಮಾಣದೊಂದಿಗೆ ಭಾನುವಾರ ರಾಜ್ಯ ರೈತ ಕಲ್ಯಾಣ ಸಂಘದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆ ನಡೆಯಿತು.
ನುಗು ಸರ್ಕಾರಿ ಅತಿಥಿ ಗೃಹದಲ್ಲಿ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್‍ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕಿನ ಪದಾಧಿಕಾರಿಗಳ ಕಾರ್ಯಕರ್ತರ ಕಾರ್ಯಕಾರಿಣಿ ಸಭೆಯಲ್ಲಿ ರೈತ ಕಲ್ಯಾಣದ ಮುಂದಿನ ಬೆಳವಣಿಗೆಯ ಬಗ್ಗೆ ಮತ್ತು ತಾಲೂಕಿನ ಅನ್ನದಾತರ ಅಭಿವೃದ್ಧಿಯ ಕುರಿತು ವಿಶೇಷವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಪದಾಧಿಕಾರಿಗಳಿಗೆ ಹಲವು ಮಹತ್ತರ ಜವಾಬ್ದಾರಿಯನ್ನು ವಹಿಸಲಾಯಿತಲ್ಲದೇ, ರೈತರ ಆರ್ಥಿಕ ಚೇತರಿಕೆ ಸೇರಿದಂತೆ ಸಾವಯವ ಕೃಷಿಗೆ ಪ್ರಾಮುಖ್ಯತೆ ನೀಡುವ ಸಂಬಂಧ ರೈತರಿಗೆ ಅರಿವು ಮೂಡಿಸಿ, ಜೈವಿಕ ಕೃಷಿಯತ್ತ ಒಲವು ತೋರುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪ್ರಮಾಣ ಮಾಡಿದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಮೂರ್ತಿ ಕೋಟೆ, ರಾಜ್ಯ ಪತ್ರಿಕಾ ಕಾರ್ಯದರ್ಶಿ ಹರೀಶ್.ಪಿ.ಗೌಡ, ರಾಜ್ಯ ಸಹ ಕಾರ್ಯದರ್ಶಿ ಕಂದಸ್ವಾಮಿ, ಹೆಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಉಮೇಶ್, ತಾಲೂಕು ಗೌರವಾಧ್ಯಕ್ಷ ದಾಸೇಗೌಡ, ತಾಲೂಕು ಯುವ ಘಟಕ ಅಧ್ಯಕ್ಷ ರವಿಕುಮಾರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷೆ ರತ್ನಮ್ಮ, ಕುಮಾರಿ, ಶಂಕರ್, ಶಶಿ, ಸುರೇಶ, ಮಹೇಶ್, ಬಸವರಾಜ್, ಹಲಿಗೆಗೌಡ ದೀಲಿಪ್, ಉಮೇಶ್, ನಂದೀಶ್, ನಾಗೇಶ್, ಶಿವಣ್ಣ, ನಾಗೇಂದ್ರ ಮತ್ತು ರಾಜು ಉಪಸ್ಥಿತರಿದ್ದರು.