ಆಷಾಡ ಶುಕ್ರವಾರಕ್ಕೆ ವಿಐಪಿ ದರ್ಶನಕ್ಕೆ 2 ಸಾವಿರ ರೂ ಟಿಕೆಟ್ ನಿಗದಿ ಆದೇಶ ಹಿಂಪಡೆಯದಿದ್ದರೇ ಜಿಲ್ಲಾಡಳಿತಕ್ಕೆ ಕಪ್ಪು ಪಟ್ಟಿ ಪ್ರದರ್ಶನ:ಇಂಗಲಗುಪ್ಪೆ ಕೃಷ್ಣೇಗೌಡ

ನಂದಿನಿ ಮನುಪ್ರಸಾದ್ ನಾಯಕ್

ಆಷಾಡ ಶುಕ್ರವಾರಕ್ಕೆ ವಿಐಪಿ ದರ್ಶನಕ್ಕೆ 2 ಸಾವಿರ ರೂ ಟಿಕೆಟ್ ನಿಗದಿ ಮಾಡುವ ರಾಜ್ಯ ಸರ್ಕಾರ ಈ ಆದೇಶವನ್ನು ಹಿಂಪಡೆಯದಿದ್ದರೇ ಜಿಲ್ಲಾಡಳಿತಕ್ಕೆ ಕಪ್ಪು ಪಟ್ಟಿ ಪ್ರದರ್ಶನ ಮಾಡುವುದಾಗಿ ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರಕ್ಕೆರೈತರ ಬೆನ್ನಿಗೆ ನಿಂತಿಲ್ಲ.ರೈತರಿಗೆ ಅಂತ ಏನನ್ನೂ ಮಾಡಿಲ್ಲ.ಬೇರೆಯದರಲ್ಲಿ ತೋರುವ ಆಸಕ್ತಿಯನ್ನ ರೈತ ಮೇಲೆ ಇಲ್ಲ.
ಬಿಟ್ಟಿ ಭಾಗ್ಯಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ.ಆಗಾಗಿ ಚಾಮುಂಡೇಶ್ವರಿ ತಾಯಿ ಭಕ್ತರಿಂದ ರಾಜ್ಯ ಸರ್ಕಾರ ಹಣ ಪೀಕಲು ಮುಂದಾಗಿದೆ.
ಚಾಮುಂಡೇಶ್ವರಿ ದೇವಾಲಯದ ನಿರ್ಮಾತೃಗಳಾದ ಮೈಸೂರಿನ ರಾಜ ಮಹಾರಾಜರು ಯಾವುದೇ ತಾರತಮ್ಯಗಳನ್ನು ಈ ಹಿಂದೆಯೂ ಹುಟ್ಟು ಹಾಕಿರಲಿಲ್ಲ, ಸರ್ಕಾರಗಳು ದೇವರ ದರ್ಶನದಲ್ಲಿ ತಾರತಮ್ಯ ಹುಟ್ಟು ಹಾಕುತ್ತಿವೆ. ಎಲ್ಲರಿಗೂ ಒಂದೇ ರೀತಿಯಲ್ಲಿ ದರ್ಶನ ಕಲ್ಪಿಸಬೇಕು.
ಚಾಮುಂಡಿ ಬೆಟ್ಟದಲ್ಲಿ ಸ್ಥಳೀಯ ನಿವಾಸಿಗಳಿಗೆ ಕುಡಿಯುವ ನೀರು, ಆಷಾಢದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ, ಇಲ್ಲಿ ಸುಸಜ್ಜಿತ ಶೌಚಾಲಯಗಳಾಗಲಿ, ಹೊರಗಿನಿಂದ ಬರುವವರಿಗೆ ಮಡಿಯಾಗಿ ದೇವರ ದರ್ಶನ ಮಾಡಲು ಸ್ನಾನದ ಗೃಹಗಳಾಗಲಿ ಇಲ್ಲವೇ ಇಲ್ಲ. ಈಗಿರುವ ಒಂದೇ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ 5 ರೂ ಹಾಗೂ ಮಲ ವಿಸರ್ಜನೆ 10 ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ಇದನ್ನು ಉಚಿತ ಮಾಡಬೇಕು. ಈಗ ಆಷಾಢದಲ್ಲಂತೂ ಲಕ್ಷಾಂತರ ಭಕ್ತಾದಿಗಳು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಸಮಯದಲ್ಲಿ ಸರ್ಕಾರ ಇವುಗಳ ಬಗ್ಗೆ ಗಮನ ಹರಿಸಿ ಮೂಲಭೂತ ಸೌಕರ್ಯಗಳನ್ನು ಈ ಕೂಡಲೇ ಕಲ್ಪಿಸಬೇಕು.
ಚಾಮುಂಡೇಶ್ವರಿ ಭಕ್ತರಿಂದಲೂ ಸುಲಿಗೆ ಮಾಡಲು ಮುಂದಾಗಿದ್ದು, ಕೂಡಲೇ 2 ಸಾವಿರ ರೂ. ವಿಐಪಿ ದರ್ಶನದ ಟಿಕೆಟ್ ರದ್ದು ಮಾಡಬೇಕು ಎಂದರು.

Leave a Reply

Your email address will not be published. Required fields are marked *