ನಂದಿನಿ ಮೈಸೂರು
ಮೈಸೂರು ನಗರ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ನೀರ್ ಸೇಠ್ ರವರು ಟಿಪ್ಪು ಪ್ರತಿಮೆಯ ಸ್ಥಾಪನೆ ಬಗ್ಗೆ ನೀಡಿದ ಹೇಳಿಕೆ ವಿರುದ್ಧವಾಗಿ ಹಾಸನ ಜಿಲ್ಲೆ, ಸಕಲೇಶಪುರದ ಬಜರಂಗದಳದ ಮುಖಂಡ ರಘು ಸಾರ್ವಜನಿಕ ಭಾಷಣದಲ್ಲಿ ಜೀವ ಬೆದರಿಕೆ ಹಾಕಿರುವುದನ್ನು ಖಂಡಿಸಿ ಈ
ಕೂಡಲೇ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪೋಲಿಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಮೈಸೂರು ಪೋಲಿಸ್ ಆಯುಕ್ತರ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಮುಖಂಡರು ರಘು ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮೈಸೂರು ನಗರ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ತಸ್ವೀರ್ ಸೇಥ್ ರವರು ಇತ್ತೀಚೆಗೆ ಟಿಪ್ಪುರವರ ಪ್ರತಿಮೆಯ ಸ್ಥಾಪನೆ ಮಾಡುತ್ತೇವೆಂದು ಹೇಳಿಕೆಯನ್ನು ನೀಡಿದ್ದ ಪ್ರತಿಕಾರವಾಗಿ ಹಾಸನ ಜಿಲ್ಲೆ ಸಕಲೇಶಪುರದ ಬಜರಂಗದಳದ ಮುಖಂಡ ರಘು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತ ಶಾಸಕರಿಗೆ ನೇರವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಶಾಸಕರಿಗೆ ೩ ಅಡಿ ೬ ಅಡಿ ಜಾಗವನ್ನು ಫಿಕ್ಸ್ ಮಾಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ.
ಈ ಕೂಡಲೇ ಬಜರಂಗದಳದ ಮುಖಂಡನಾದ ರಘು ಎಂಬುವನನ್ನು ಬಂಧಿಸಿ, ಕನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಸೈಯದ್ ಇಕ್ಬಾಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಸೈಯದ್ ಫಾರೋಕ್,
ಶಹಿನ್ ಷಾ,ವಸಿಂ, ಎಂ.ರಸೂಲ್,ರಾಜೇಶ್ ಸೇರಿದಂತೆ ಇತರರು ಜೊತೆಗಿದ್ದರು.