ನಂದಿನಿ ಮೈಸೂರು
ಆಗಸ್ಟ್ ತಿಂಗಳನ್ನು ವಿಶ್ವ ಸ್ತನಪಾನ ಮಾಸ ಎನ್ನಲಾಗುತ್ತಿದ್ದು ಈ ವೇಳೆ ಸ್ತನ್ಯಪಾನ ಜಾಗೃತಿ ಮೂಡಿಸುವ ಸಲುವಾಗಿ
ಮದರ್ ಹುಡ್ ಆಸ್ಪತ್ರೆ ವತಿಯಿಂದ ಮಾತೃತ್ವ ಮತ್ತು ಆರೋಗ್ಯವನ್ನು ಸಂಭ್ರಮಿಸುತ್ತ ಎಂಬ ಘೋಷವಾಕ್ಯದಡಿ ಬ್ರೆಸ್ಟ್ ಫೀಡಿಂಗ್ ವಾಕಥಾನ್ ಆಯೋಜಿಸಲಾಗಿತ್ತು.
ಅರಮನೆ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ ಮೈಸೂರು ಮಹಾರಾಣಿ ತ್ರಿಶಿಖಾ ಕುಮಾರಿ ಒಡೆಯರ್ ರವರು ಬಾವುಟ ಹಾರಿಸುವ ಮೂಲಕ ವಾಕಥಾನ್ ಗೆ ಚಾಲನೆ ನೀಡಿದರು.
ಕೋಟೆ ಆಂಜನೇಯ ದೇಗುಲದಿಂದ ಪ್ರಾರಂಭವಾದ ವಾಕಥಾನ್ ಚಾಮರಾಜ ಒಡೆಯರ್ ವೃತ್ತ, ಹಾರ್ಡಿಗ್ ವೃತ್ತದ ಮೂಲಕ ತೆರಳಿ ಮತ್ತೆ ಕೋಟೆ ಆಂಜನೇಯ ದೆವಲಯ ಆವರಣದಲ್ಲಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಡಾ.ಜಾವೀದ್ ನಯೀಮ್,ಡಾ.ಲಲಿತಾ,
ಎಫ್.ಬಿ.ಸಿ ಸಲಹಾ ತಜ್ಞೆ ಡಾ.ಸೋನಿಯಾ ಮಂದಪ್ಪ,ಡಾ.ಮಧುರಾ ಫಾಟಕ್,ಡಾ.ಚೇತನ್,ಎಚ್.ಆರ್.ಕೇಶವ್,ಸುಧೀಂದ್ರ,ಆಶಿಕಾ ಕುಶಾಲಪ್ಪ,ಮದರ್ ಹುಡ್ ಆಸ್ಪತ್ರೆಯ ಸೌಲಭ್ಯ ನಿರ್ದೇಶಕ ಸಂದೀಪ್ ಪಾಟೇಲ್ ಸೇರಿದಂತೆ ವೈದ್ಯರು,ಆಸ್ಪತ್ರೆ ಸಿಬ್ಬಂದಿಗಳ ಭಾಗಿಯಾಗಿದ್ದರು.