ತಿ.ನರಸೀಪುರ:19 ಡಿಸೆಂಬರ್ 2021
ನಂದಿನಿ
ಬೆಳಗಾವಿಯಲ್ಲಿ ಕನ್ನಡ ಬಾವುಟ ಸುಟ್ಟು ಹಾಕಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ದ್ವಂಸ ಮಾಡಿದ ಹಿನ್ನಲೆ ತಿ.ನರಸೀಪುರ ತಾಲ್ಲೂಕಿನಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಮುದಾಯದ ಮುಖಂಡರಿಂದ ಸಭೆ ನಡೆಸಲಾಯಿತು.
ಪಟ್ಟಣದ ಮರೀಗೌಡ ಸ್ಮಾರಕ ಭವನದ ಆವರಣದಲ್ಲಿ ನಡೆದ ಸಭೆಯಲ್ಲಿ ರಾಯಣ್ಣ ಪ್ರತಿಮೆ ದ್ವಂಸಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಹೆಚ್ಚಾಗಿದೆ.ಭಾವೈಕ್ಯ ಸಂಕೇತವಾದ ನಾಡ ಧ್ವಜವನ್ನ ಕಿಡಿಗೇಡಿಗಳು ಸುಟ್ಟಿದ್ದಾರೆ.ಇತ್ತ ರಾಯಣ್ಣ ಪ್ರತಿಮೆ ಸಹ ದ್ವಂಸ ಮಾಡಿದ್ದಾರೆ.ಸರ್ಕಾರ ಯಾಕೆ ಕಣ್ಣು ಮುಚ್ಚಿ ಕುಳಿತಿದೆ.ಎಂಇಎಸ್ ಕಾರ್ಯಕರ್ತರ ಆಟ ಇನ್ನು ಕರ್ನಾಟಕದಲ್ಲಿ ನಡೆಯಲ್ಲ.ನಾಳೆ ನರಸೀಪುರ ನರಸೀಪುರ ತಾಲ್ಲೂಕಿನಲ್ಲಿ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮುಖಂಡ ಕನ್ನಡಪುಟ್ಟಸ್ವಾಮಿ ತಿಳಿಸಿದರು.
ಈ ಸಂದರ್ಭ ಮಾಜಿ ತಾಪಂ ಸದಸ್ಯ ರಮೇಶ್, ಸಂತೃಪ್ತಿಕುಮಾರ್,ಮಣಿಕಂಠರಾಜ್ ಗೌಡ, ಸೇರಿದಂತೆ ಅನೇಕರು ಹಾಜರಿದ್ದರು.