ವರದಿ ಆಲಗೂಡು ರೇವಣ್ಣ
ತಿ.ನರಸೀಪುರ. ನ.19:-ಸರ್ಕಾರಿ ಶಾಲೆ ಉಳಿಯಬೇಕು ಎಂದು ಸರ್ಕಾರ ಒಂದು ಕಡೆ ಬೊಬ್ಬೆ ಹಾಕಿದರೆ ಮೊತ್ತೊಂದು ಕಡೆ ಸರ್ಕಾರಿ ಶಾಲೆ ನಶಿಸಿಲು ಸರ್ಕಾರಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೆ ಕಾರಣರಾಗಿದ್ದಾರೆ ಅನ್ನಿಸುತ್ತದೆ ಈ ಶಾಲೆಯ ಪರಿಸ್ಥಿತಿ ನೋಡಿದಾಗ.
ಪುರಸಭೆ ವ್ಯಾಪ್ತಿಯ ಗಣೇಶ ದೇವಸ್ಥಾನದ ಸನಿಹದಲ್ಲಿರುವ 60 ವರ್ಷಗಳ ಹಿಂದೆ ತೆರೆದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಅವನತಿಯ ಹಂಚಿನತ್ತ ಬಂದು ನಿತ್ತಿದೆ ಅದರ ಸಂರಕ್ಷಣೆಯ ಜವಬ್ದಾರಿ ಹೊರಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ನಮಗೆ ಸಂಬಂಧಿಸಿದಲ್ಲ ಎಂದು ಕುಳಿತಿದ್ದಾರೆ.
ಪ್ರಸ್ತುತ ಶಾಲೆ ಕನ್ನಡ ಮತ್ತು ಆಂಗ್ಲ ಭೋದನೆಯಲ್ಲಿ ನಡೆಯುತ್ತಿದ್ದು ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕೂಡ ಇದ್ದರು ಸಹ ಶಾಲೆಯ ದುರಸ್ಥಿ ಆಗಿಲ್ಲ ಬಡ ವಿದ್ಯಾರ್ಥಿಗಳು ಕಲಿಯುವ ಶಾಲೆ ಆಗಿರುವುದರಿಂದ ಶಿಕ್ಷಣ ಇಲಾಖೆ ಸಮೇತವಾಗಿ ಚುನಾಯಿತ ಪ್ರತಿನಿಧಿಗಳಿಗೂ ತಾತ್ಸಾರ ಮನೋಭಾವ ಹೊಂದಿದ್ದಾರೆ ಅನ್ನಬಹುದಾಗಿದೆ.
ಶಾಲೆಯ ಸ್ಥಿತಿ ಹೇಗಿದೆ ಎಂದರೆ ಶಾಲಾ ಕಟ್ಟಡದ ಮೇಲ್ ಚಾವಣಿ ಕಿತ್ತು ಬಿಳುತಿದೆ, ಮಳೆ ಬಂದರೆ ಕೊಠಡಿಗಳಲ್ಲಿ ನೀರು ಸೊರುತ್ತವೆ, ಪುಟ್ಟ ಕಂದಮ್ಮಗಳು ಆ ತಣ್ಣನೆಯ ನೆಲದ ಮೇಲೆ ಕುಳಿತು ಪಾಠ ಕೇಳಬೇಕಾಗಿದೆ ಶಾಲೆಯ ಸುತ್ತಲೂ ಗಿಡ ಬಳ್ಳಿ ಪೂದೆ ಬೆಳೆದು ನಿಂತ್ತಿದೆ,ಹಗಲಲ್ಲೂ ಸೊಳ್ಳೆ ಕಾಟ,ಶಾಲೆಯ ಪಕ್ಕದ ಚರಂಡಿ ಸ್ವಚ್ಚತೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ ಇದರ ಪರಿಮಳವನ್ನೆ ಸೇವಿಸಿ ಪಾಠ ಕೇಳಬೇಕು ಮತ್ತು ಬಿಸಿ ಊಟ ಮಾಡಬೇಕು ಇಷ್ಟೇಲ್ಲ ಅವವ್ಯವಸ್ಥೆ ಹೊಂದಿರುವ ಶಾಲೆಯಲ್ಲಿ ಬಡ ಮಕ್ಕಳ ಆರೋಗ್ಯ ಹೇಗಾಗಬಹುದು ಆ ಮಕ್ಕಳ ಆರೋಗ್ಯ ಕೆಟ್ಟರೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ.
ಶೌಚಾಲಯ ನಿರ್ಮಾಣ ಮತ್ತು ಬಳಕೆಗೆ ಸ್ಚಚ್ಚ ಭಾರತ ಅಭಿಯಾನದಡಿಯಲ್ಲಿ ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಹಳೆ ಕಾಲದ ಕಿತ್ತೋಗಿರುವ ಹಾಗೂ ಭದ್ರತೆ ಇಲ್ಲದ ಕಲ್ನಾರ್ ಸೀಟ್ ನ ಶೌಚಾಲಯವನ್ನ ಹೆಣ್ಣು ಮಕ್ಕಳು ಬಳಸಬೇಕಾಗಿದೆ, ಇನ್ನೊಂದು ದುರ್ಧೈವ ಅಂದರೆ ಈ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಸಹ ಸಮರ್ಪಕವಾಗಿ ಇಲ್ಲ ಎಂಬುದು.
“ಪಟ್ಟಣದ ಹೃದಯ ಭಾಗದಲ್ಲಿರುವ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯೇ ಈ ಪರಿಸ್ಥಿತಿಯಲ್ಲಿ ಇದೆ ಎಂದರೆ ಗ್ರಾಮಾಂತರ ಪ್ರದೇಶದ ಶಾಲೆಗಳ ಪರಿಸ್ಥಿತಿ ಹೇಗಿರಬಾರದು, ದೀರ್ಘ ಕಾಲದಿಂದ ನರಸೀಪುರದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ ಇ ಓ ಮರಿಸ್ವಾಮಿ ಈ ಶಾಲೆಯತ್ತ ಬಂದೆ ಇಲ್ಲವ ಅಥವಾ ಗೊತ್ತಿದ್ದು ಸುಮ್ಮನಿದ್ದಾರಾ, ಕ್ಷೇತ್ರದ ಶಾಸಕರು, ಪುರಸಭೆಯ ಈ ವಾರ್ಡಿನ ಸದಸ್ಯರು ಹಾಗೂ ಪುರಸಭೆ ಅಧ್ಯಕ್ಷರಿಗೆ ಸರ್ಕಾರಿ ಶಾಲೆ ಬಗ್ಗೆ ಕಾಳಜಿ ಇಲ್ಲವಾ ಎಂಬ ಪ್ರಶ್ನೆ ಈ ಶಾಲೆ ನೋಡಿದಾಗ ನನ್ನನ್ನು ಕಾಡಿತು ನಮ್ಮ ಸೇವಾಶ್ರಯ ಫೌಂಡೇಶನ್ ಸಂಸ್ಥೆ ಸರ್ಕಾರಿ ಶಾಲೆ ಉಳಿಸುವ ಕೆಲಸವನ್ನು ಈಗಾಗಲೇ ಮಾಡುತಿದೆ ಈ ಶಾಲೆ ನಿರ್ವಹಣೆ ನಮ್ಮಿಂದ ಸಾಧ್ಯವಿಲ್ಲ ಎಂದು ಬಿ ಇ ಒ ಹೇಳಿಕೆ ನೀಡಿದರೆ ಇದರ ದುರಸ್ತಿ ಜವಬ್ದಾರಿ ನಮ್ಮ ಸಂಸ್ಥೆ ತೆಗೆದುಕೊಳ್ಳಲಿದೆ”
ಸೇವಾಶ್ರಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಆರ್.ಮಣಿಕಠ್ ರಾಜ್ ಗೌಡ