ಮೈಸೂರು:6 ನವೆಂಬರ್ 2021
ನಂದಿನಿ
ಪ್ರೇಮಂ ಪೂಜ್ಯಂ ಒಂದು ದೃಶ್ಯಕಾವ್ಯ.ಸಾಮಾನ್ಯವಾಗಿ ಚಿತ್ರದಲ್ಲಿ ಪ್ರೀತಿ ಪ್ರೇಮ ಇದ್ದೇ ಇರುತ್ತದೆ.ಆದರೇ ಈ ಚಿತ್ರದಲ್ಲಿ ನಾನು ಹಿರೋಯಿನ್ ಟಚ್ಚು ಕೂಡ ಮಾಡಿಲ್ಲ.ಈ ಸಿನಿಮಾದಲ್ಲಿ ಹೆಣ್ಣನ್ನ ಪೂಜ್ಯ ಭಾವನೆಯಿಂದ ಚಿತ್ರೀಸಲಾಗಿದೆ.ಇದೇ ನ.12 ರಂದು ಚಿತ್ರ ತೆರೆಕಾಣಲಿದೆ ಎಂದು ನಟ ಪ್ರೇಮ್ ತಿಳಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು ಡಾ.ರಾಘವೇಂದ್ರರವರು ಚಿತ್ರದ ನಿರ್ದೇಶಕರಾಗಿದ್ದಾರೆ. ಸಿನಿಮಾ ಮಂಡ್ಯ, ಮಳವಳ್ಳಿಯಿಂದಲೇ ಪ್ರಾರಂಭವಾಗಿ, ಮೈಸೂರಿನಿಂದ ವಿಯೆಟ್ನಾಂ ವರೆಗೆ ಸುತ್ತುವರೆದಿದೆ. ಒಬ್ಬ ವ್ಯಕ್ತಿಯ 16 ರಿಂದ 45 ವರ್ಷದೊಳಗಿನ ನಡೆಯುವ ಜೀವನದ ಕಥೆಯನ್ನು ಹೊಂದಿದೆ. ಪ್ರೀತಿ, ಸಹಾಯ, ಸ್ನೇಹಿತರು, ಕುಟುಂಬ, ಇದೆಲ್ಲದರ ಹೊಸ ವ್ಯಾಖ್ಯಾನವನ್ನು ಈ ಚಿತ್ರಕ್ಕೆ ನೀಡಿದೆ. 2 ವರ್ಷಗಳಲ್ಲಿ ಅತ್ಯುತ್ತಮವಾದ ಚಿತ್ರ ತಯಾರಾಗಿದ್ದು, ಪ್ರೇಕ್ಷಕರು ಬೆಂಬಲಿಸಬೇಕು.ಪೂಜ್ಯನಿಯಾ ಭಾವನೆಯಿಂದ ಈ ಚಿತ್ರ ನಿರ್ಮಾಣವಾಗಿದೆ. ಎಲ್ಲರೂ ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸುವಂತೆ ಸಿನಿ ಪ್ರೀಯರಿಗೆ ಪ್ರೇಮ್ ಮನವಿ ಮಾಡಿದರು.ಮುಂದುವರೆದು ಮಾತನಾಡಿದ ಅವರು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಲಿಂಕ್ ಆಗದಂತೆ ನೋಡಿಕೊಳ್ಳುವುದಕ್ಕೆ ಕಂಪನಿ ಜೊತೆ ಟೈಯಪ್ ಆಗಿದ್ದೇವೆ.ಚಿತ್ರಮಂದಿರಗಳಲ್ಲಿ ಯಾರಾದರೂ ಮೊಬೈಲ್ ಹಾಗೂ ಕ್ಯಾಮರದಲ್ಲಿ ಚಿತ್ರೀಸುತ್ತಿರೋದು ಕಂಡು ಬಂದಲ್ಲಿ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದರು.
ಕಳೆದ 4 ವರ್ಷಗಳ ಹಿಂದೆಯೇ ಬರೆದಿಟ್ಟ ಕಥೆ
ನಂತರ ನಿರ್ದೇಶಕ ಡಾ.ರಾಘವೇಂದ್ರ ಮಾತನಾಡಿ
ವೃತ್ತಿಯಲ್ಲಿ ವೈದ್ಯನಾಗಿದ್ದರೂ, ಪ್ರವೃತ್ತಿಯಲ್ಲಿ ಸಿನಿಮಾಗಳ ಹಾಡಿಗೆ ಸಾಹಿತ್ಯ ಬರೆಯುವ ಹವ್ಯಾಸವನ್ನು ಮೈಗೂಡಿಸಿಕೊಂಡು, ಕಳೆದ 4 ವರ್ಷಗಳ ಹಿಂದೆಯೇ ಬರೆದಿಟ್ಟ ಕಥೆ ಅತ್ಯುತ್ತಮವಾಗಿ ಬಂದಿದ್ದು, ಇದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ರವರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅತ್ಯುತ್ತಮವಾದ ಸ್ಥಳಗಳಲ್ಲಿ ಚಿತ್ರೀಕರಣವಾಗಿದೆ.
ಈ ಚಿತ್ರಕ್ಕೆ ಬಂಡವಾಳ ಹಾಕಿರುವವರು ಡಾ.ರಕ್ಷಿತ್ ಕೆದಂಬಾಡಿ, ಡಾ.ರಾಜ್‌ಕುಮಾರ್ ಜಾನಕಿರಾಮನ್, ಡಾ.ರಾಘವೇಂದ್ರ ಹಾಗೂ ಮನೋಜ್ ಕೃಷ್ಣನ್, ನವೀನ್ ಕುಮಾರ್ ರವರ ಛಾಯಾಗ್ರಾಹಣವಿದ್ದು, ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಮಾಧವ್ ಕಿರಣ್ ಕಾರ್ಯನಿರ್ವಹಿಸಿದರೆ, ತ್ಯಾಗರಾಜ, ಡಾ.ರಾಘವೇಂದ್ರ ಜುಗಲ್ ಬಂದಿಯಲ್ಲಿ ಹಿನ್ನೆಲೆ ಸಂಗೀತ ಮೂಡಿ ಬಂದಿದೆ. ಒಟ್ಟು 12 ಹಾಡುಗಳಿದ್ದು, ಸಂಪೂರ್ಣವಾಗಿ ಸಾಹಿತ್ಯ, ಸಂಗೀತ, ಕಥೆ, ಚಿತ್ರಕಥೆ, ಸಂಭಾಷಣೆ ಹೊಣೆಯನ್ನು ಹೊತ್ತಿದ್ದೇನೆ ಎಂದರು.
ತದನಂತರ ನಟ ಮಾಸ್ಟರ್ ಆನಂದ್ ಮಾತನಾಡಿ, ಕಿರುತೆರೆಯಲ್ಲಿ ನಿರೂಪಣೆಯ ಜೊತೆಗೆ ಸಿನಿಮಾಗಳಲ್ಲಿ ನಟಿಸಲು ಆಯ್ಕೆ ನಡೆಯುತ್ತಿತ್ತು. ಕಳೆದ 5 ವರ್ಷಗಳಿಂದ ಕಥೆಯೊಳಗೆ ಒಂದಾಗುವಂತಹ ಪಾತ್ರದಲ್ಲಿ ಅಭಿನಯಿಸುವ ಕೆಲಸವನ್ನು ಮಾಡಿದ್ದೇನೆ. ಉತ್ತಮ ಕಥೆಯೊಂದಿಗೆ ಪಾತ್ರಗಳನ್ನು ಹೊಂದಿದೆ ಎಂದರು. ಇನ್ನೂ ನಿಧನರಾದ ಪುನೀತ್ ರಾಜ್ ಕುಮಾರ್ ರವರ ಜೊತೆ ಇದ್ದ ಒಡನಾಟದ ಬಗ್ಗೆ ಮಾಸ್ಟರ್ ಆನಂದ್ ಹಂಚಿಕೊಂಡರು.