ದಂಡ ಸಂಗ್ರಹ ನಮ್ಮ ಉದ್ದೇಶವಲ್ಲ,ಜೀವ ಉಳಿಸುವುದು ನಮ್ಮ ಉದ್ದೇಶ,ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ:ಡಾ.ಚಂದ್ರಗುಪ್ತ

ಮೈಸೂರು:7 ನವೆಂಬರ್ 2021

ನಂದಿನಿ

ಸಮಾಜದಲ್ಲಿ ಒಬ್ಬರು ಪಾಲಿಸುವುದನ್ನೇ ಇತರರು ಅನುಸರಿಸುತ್ತಾರೆ. ಒಬ್ಬ ಬೈಕ್‌ ಸವಾರ ಸಿಗ್ನಲ್‌ ಜಂಪ್‌  ಮಾಡಿದರೆ, ಹೆಲ್ಮೆಟ್‌ ಧರಿಸದಿದ್ದರೆ ಮತ್ತಿಬ್ಬರು ಅದನ್ನು ಅನುಸರಿಸುತ್ತಾರೆ. ಹೀಗಾಗಿ ಒಂದಿಷ್ಟು ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಅದನ್ನು ಉಳಿದವರು ಅನುಸರಿಸುತ್ತಾರೆ. ಹೀಗಾಗಿ ಜವಬ್ದಾರಿ ಸ್ಥಾನದಲ್ಲಿರುವವರು ಸಂಚಾರ ನಿಯಮ ಪಾಲಿಸುವ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದು ಮೈಸೂರು ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದರು.

ನಗರ ಪೊಲೀಸ್‌ ಇಲಾಖೆ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂಚಾರ ಜಾಗೃತಿ ಮತ್ತು ಪತ್ರಕರ್ತರಿಗೆ ಹೆಲ್ಮೆಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ನಗರದಲ್ಲಿ ದ್ವಿಚಕ್ರ ವಾಹನ  ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು, 2022ರ ಜನವರಿಯಿಂದ ಇದು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಪರಿಶೀಲನೆಗೆ ವಿಶೇಷ ತಂಡ ರಚಿಸಲಾಗುತ್ತಿದೆ.
ಕೋವಿಡ್‌ ನಿಂದ ಕಠಿಣ ನಿಯಮ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. 2022ರಿಂದ ಜನವರಿಯಿಂದ ನಗರದಲ್ಲಿ ಕಡ್ಡಾಯ ಹೆಲ್ಮೆಟ್‌ ಧಾರಣೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೇವಲ ದಂಡ ಸಂಗ್ರಹ ನಮ್ಮ ಉದ್ದೇಶವಲ್ಲ, ಸಾರ್ವಜನಿಕರ ಸಂಚಾರ ನಿಯಮದ ಜಾಗೃತಿ ಮುಖ್ಯ ಎಂದರು.
ಉಂಟಾಗುವ ಅಪಘಾತಗಳಿಗೆ ಪೊಲೀಸರು ಮತ್ತು ಇತರರನ್ನು ದೂರಿದರೆ ಪ್ರಯೋಜನೆ ಇಲ್ಲ. ದೂರ ಪ್ರಯಾಣಕ್ಕೆ ಮಾತ್ರ ಹೆಲ್ಮೆಟ್‌ ಧರಿಸಬೇಕು, ನಮ್ಮ ಏರಿಯಾದಲ್ಲೇ ಓಡಾಡಲು ಹೆಲ್ಮೆಟ್‌ ಬೇಕಿಲ್ಲ ಎಂಬ ಮನೋಭಾವನೆಯಿಂದ ಹೊರಬರಬೇಕು. ಸಂಚಾರ ನಿಯಮ ಪಾಲಿಸಿದರೆ ಅಪಘಾತ ತಪ್ಪಿಸಬಹುದು ಎಂದು ತಿಳಿಸಿದರು.

ನಂತರ ಸುಯೋಗ್‌ ಆಸ್ಪತ್ರೆಯ ನರರೋಗ ತಜ್ಞ ಡಾ. ರಾಜೇಶ್‌ ಮಾತನಾಡಿ ಯುವ ಸಮೂಹ ನಿಯಮ‌ ಉಲ್ಲಂಘಿಸುತ್ತಾರೆ.ನಾನೇ ಕಾಲೇಜಿನಲ್ಲಿ ಓದುವಾಗ ನಿಯಮ ಉಲ್ಲಂಘಿಸಿದ್ದೇ.ಅದೇಲ್ಲ ಈಗಲೂ ನೆನಪಾಗುತ್ತೆ.ನಾನು ವೈದ್ಯನಾದ ನಂತರ ಸಾಕಷ್ಟು ಕೇಸ್ ನೋಡಿದ್ದೇನೆ.ಹೆಲ್ಮೇಟ್ ಧರಿಸದೇ ವಾಹನ ಚಾಲನೆ ಮಾಡಿ ಅಪಘಾತಕ್ಕೊಳಗಾದವರೇ ಆಸ್ಪತ್ರೆ ಬರುತ್ತಾರೆ.
ಅಪಘಾತ ಉಂಟಾದ ಕೂಡಲೇ ತಡ ಮಾಡದ ಹತ್ತಿರ ಆಸ್ಪತ್ರೆಗಳಿಗೆ ದಾಖಲಿಸಬೇಕು. ಅಪಘಾತಗಳಿಂದ ಉಂಟಾಗುವ ಸಮಸ್ಯೆಗಳು ನರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಮುಂದಿನ ಜೀವನವೇ ಮಂಕಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಡಿಸಿಪಿ ಗೀತಾಪ್ರಸನ್ನ, ಟ್ರಾಫಿಕ್‌ ಎಸಿಪಿ ಎ.ಸಿ. ಗಂಗಾಧರ್‌ ಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ, ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಚಾರ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಇದ್ದರು.

Leave a Reply

Your email address will not be published. Required fields are marked *