ಮೈಸೂರು:5 ಏಪ್ರಿಲ್ 2022
ನಂದಿನಿ ಮೈಸೂರು
ಹನಿ ಹನಿಗೂಡಿದ್ರೇ ಹಳ್ಳ ತೆನೆ ತೆನೆಗೂಡಿದ್ರೇ ಬಳ್ಳ ಎಂಬ ಗಾದೆಯಂತೆ.ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯ ದಾನಿಗಳು ಮಾಡುವಂತೆ ಮಾಧ್ಯಮಗಳು ಸುದ್ದಿಯೊಂದನ್ನ ಬಿತ್ತರಿಸಿತ್ತು.ಒಂದು ಕಡೆ ಅದೆಷ್ಟೋ ಕಾಣದ ಕೈಗಳ ಸಹಾಯ ಹಸ್ತ ಚಾಚಿದ್ರೇ ಇನ್ನೊಂದಷ್ಟು ಜನ ನೇರವಾಗಿಯೇ ನೆರವು ನೀಡಿದ್ರೂ.ಎಲ್ಲರ ಸಹಾಯ ಆಶಿರ್ವಾದದಿಂದ 2 ವರ್ಷದ ಮಗು ಪ್ರತಿಕ್ಷಾಳ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂಬ ಖುಷಿ ಒಂದು ಕಡೆಯಾದ್ರೇ ಇನ್ನೂ ಒಂದು ವರ್ಷ ಚಿಕಿತ್ಸಾ ವೆಚ್ಚ ಭರಿಸೋದು ಹೇಗೆ ಎಂದು ದಂಪತಿಗಳು ಚಿಂತಿಸುತಿದ್ದಾರೆ.
ಹೌದು ಕಳೆದ 5 ತಿಂಗಳ ಹಿಂದೆ
ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿಗಳಾದ ವಿನೋದ್ ರಾವ್ ಮತ್ತು ಪೂಜಾ ಬಾಯ್ ಎಂಬ ದಂಪತಿಯ ಪುತ್ರಿ ಪ್ರತಿಕ್ಷಾ ಬ್ಲೇಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು.ಪ್ರತಿಕ್ಷಾಳ ತಂದೆ ಗ್ಯಾಸ್ ಏಜೆನ್ಸಿ ಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.ಪತ್ನಿ ಪೂಜಾ ಬಾಯಿ ಮಗುವನ್ನ ಆರೈಕೆ ಮಾಡಿತ್ತಿದ್ದರು.ಮಗುವಿನ ಚಿಕಿತ್ಸಾ ವೆಚ್ಚ ಭರಿಸಲು ಆಗದೇ ದಂಪತಿಗಳು ಕಂಗಾಲಾಗಿದ್ದರು.ದಂಪತಿಗಳಿಬ್ಬರು ಮಾಧ್ಯಮಗಳ ಮುಖಾಂತರ ದಾನಿಗಳು ಸಹಾಯ ಮಾಡುವಂತೆ ಕಣ್ಣೀರಾಕಿದ್ರೂ.ನಂತರ ದಾನಿಗಳು ಸಹಾಯಕ್ಕೆ ಮುಂದಾಗಿದ್ರೂ.ತದನಂತರ
ಪ್ರತಿಕ್ಷಾಳಿಗೆ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.ಆದರೇ ಪ್ರತಿಕ್ಷಾ ಪೂರ್ಣ ಪ್ರಮಾಣದಲ್ಲಿ ಆರೋಗ್ಯವಾಗಿರಲೂ ಇನ್ನೂ 1 ವರ್ಷ ಚಿಕಿತ್ಸೆ ನೀಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಮತ್ತೆ ಚಿಕಿತ್ಸೆ ವೆಚ್ಚ ಅಗತ್ಯವಿರುವುದರಿಂದ ದಾನಿಗಳು ಸಹಾಯ ಮಾಡುವಂತೆ
ಕರ್ನಾಟಕ ಗ್ರಾಮೀಣ ಬ್ಯಾಂಕ್
Name:ಪೂಜಾ ಬಾಯಿ
Ac.no:12490100000654
Ifse:pkgb0012490
Google pay no: 9964 242106 ಎಂದು ದಂಪತಿ ಮನವಿ ಮಾಡಿದ್ದಾರೆ.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು