ಮೈಸೂರು:22 ಜುಲೈ 2022
ನಂದಿನಿ ಮೈಸೂರು

ಕಡೇ ಆಷಾಢ ಶುಕ್ರವಾರ ಪ್ರಯುಕ್ತ
ಆ್ಯಕ್ಸಿಸ್ ಬ್ಯಾಂಕ್ ಉದ್ಯೋಗಿಗಳು ಒಟ್ಟುಗೂಡಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಿದರು.
ಮೈಸೂರಿನ ವಿಶ್ವಮಾನವ ರಸ್ತೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಮುಂಭಾಗ ಶ್ರೀಚಾಮುಂಡೇಶ್ವರಿ ತಾಯಿಯ ಭಾವಚಿತ್ರವಿರಿಸಿ ಪೂಜೆ ನೆರವೇರಿಸಿದರು.
ಸರತಿ ಸಾಲಿನಲ್ಲಿ ನಿಂತ ಸಾರ್ವಜನಿಕರು ಪ್ರಸಾದ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಸಿಬ್ಬಂದಿಗಳು ಮಾತನಾಡಿ ಆಷಾಢ ಮಾಸದಲ್ಲಿ ಒಂದು ತಿಂಗಳ ಕಾಲ ದೇವರನ್ನ ಆರಾಧಿಸುತ್ತಾರೆ.ಆ್ಯಕ್ಸಿಸ್ ಬ್ಯಾಂಕ್ ಉದ್ಯೋಗಿಗಳೆಲ್ಲ ಸೇರಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ್ದೇವೆ.ಸಿಬ್ಬಂದಿಗಳೆಲ್ಲ ಹಣ ಹಾಕಿದ್ದಾರೆ.ಆ ಹಣದಲ್ಲಿ ಒಂದು ಕ್ವಿಂಟಾಲ್ ಪ್ರಸಾದ ಮಾಡಿಸಿದ್ದೇವೆ.ಸಾರ್ವಜನಿಕರಿಗೆ ಪ್ರಸಾದ ವಿತರಿಸುತ್ತಿದ್ದೇವೆ.ಇದೇ ಮೊದಲ ಬಾರಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ಆರಂಭಿಸಿದ್ದೇವೆ.ಇನ್ನೂ ಮುಂದೆ ಪ್ರತಿವರ್ಷ ಆಷಾಢ ಮಾಸದಲ್ಲಿ ಪ್ರಸಾದ ಹಂಚಲಿದ್ದೇವೆ ಎಂದು ತಿಳಿಸಿದರು.
ಶ್ರೀಚಾಮುಂಡೆರಶ್ವರಿ ತಾಯಿ ಭಾವಚಿತ್ರದ ಜೊತೆ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.