27 ವರ್ಷದಿಂದ ದಸರಾ ಅಂಬಾರಿ ಆನೆಗೆ ಪೂಜೆ ಮಾಡುವ ಪ್ರಹ್ಲಾದ್ ರಾವ್ ರವರಿಗೆ ಸನ್ಮಾನಿಸಿದ ಎಚ್.ವಿ.ರಾಜೀವ್

ನಂದಿನಿ ಮೈಸೂರು

ಮಡಿವಾಳ ಸಂಘದಿಂದ ಅಂಬಾರಿ ಆನೆಗೆ ಪೂಜೆ ಮಾಡುವ ಪ್ರಹ್ಲಾದ್ ರಾವ್ ರವರಿಗೆ ಸನ್ಮಾನ

ವಿಶ್ವ ವಿಖ್ಯಾತ ಮೈಸೂರು ದಸರ ಮಹೋತ್ಸವದಲ್ಲಿ ಪ್ರಮುಖ ಬಿಂದುವಾದ ಅಂಬಾರಿ ಹೊರುವ ಆನೆ ಹಾಗೂ ದಸರ ಆನೆಗಳಿಗೆ 27 ವರ್ಷಗಳಿಂದ ಸಾಂಸ್ಕೃತಿಕ ಪೂಜೆ ಮಾಡುತ್ತ ಬಂದಿರುವ ಪ್ರಹ್ಲಾದ್ ರಾವ್ ರವರಿಗೆ ಸನ್ಮಾನಿಸುತ್ತಿರುವುದು ಮೈಸೂರು ಪರಪರೆಯ ಸಂಸ್ಕೃತಿಯಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ರವರು ತಿಳಿಸಿದರು…

ಅವರು ಜಲದರ್ಶಿನಿ ಅಥಿತಿ ಗೃಹದಲ್ಲಿ ಆಯೋಜಿಸಿದ ಮೈಸೂರು ಜಿಲ್ಲಾ ಮಡಿವಾಳರ ಸಂಘದ ವತಿಯಿಂದ ಅರಮನೆ ಪುರೋಹಿತರಾದ ಪ್ರಹ್ಲಾದ್ ರಾವ್ ರವರಿಗೆ ಸನ್ಮಾನಿಸಿದ ಸಂದರ್ಭದಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ  ಮಡಿವಾಳ ಸಂಘ ಇಂದು ಉತ್ತಮ‌ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಸಮಾಜಕ್ಕೆ ಸಂದೇಶಸಾರುವಂತಹದು, ಸಮಾಜದ ಕೊಳೆಗಳನ್ನು ತೊಳೆಯುತ್ತ ತಮ್ಮ ವೃತ್ತಿಯನ್ನು ಕಾಯುತ್ತ ಬಂದು ಶ್ರೇಷ್ಠ ಕೆಲಸ ಮಾಡುತ್ತಿರುವ ಮಡಿವಾಳದ ಸಮಾಜಕ್ಕೆ ಕೃತಜ್ಞತೆ ಸಲ್ಲಿಸಿದರು.ಭಾರತದ ಸಂಸ್ಕೃತಿ ಶ್ರೇಷ್ಠವಾದುದ್ದು. ಈ ಸಮಾಜ ಮುಖ್ಯ ವೇದಿಕೆಗೆ ಬರ ಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಮಡಿವಾಳ ಸಂಘದ ಉಪಾಧ್ಯಕ್ಷರಾದ ಬಿ ಜಿ ಕೇಶವರವರು ಮಾತನಾಡಿ ವಿಶ್ವ ವಿಖ್ಯಾತ ದಸರ ಸಂದರ್ಭದಲ್ಲಿ ಪ್ರಹ್ಲಾದ್ ರಾವ್ ರವರು ಜಂಬೂಸವಾರಿ ಹೊರುವ ಆನೆ ಸೇರಿದಂತೆ ದಸರ ಆನೆಗಳಿಗೆ ಪೂಜೆ ಸಲ್ಲಿಸುತ್ತಿರುವ ಪ್ರಹ್ಲಾದ್ ರಾವ್ ರವರ ಸೇವೆ ಮೈಸೂರು ಪಾರಂಪರಿಕ ಸಂಸ್ಕೃತಿಯನ್ನು ಸಾರುತ್ತದೆ. ದಸರ ಆರಂಭವಾಯುತ್ತೆಂದರೆ ಮೊಟ್ಟ ಮೊದಲ‌ಕಾರ್ಯಕ್ರಮವೆಂದರೆ ಆನೆಗಳ ಪೂಜೆ. ಇದನ್ನು 27 ವರ್ಷಗಳಿಂದ ಮಾಡುತ್ತಿದ್ದಾರೆ,ಈ ಸೇವೆಯನ್ನು ಗುರುತಿಸಿ ನಮ್ಮ ಮಡಿವಾಳ ಸಮಾಜದಿಂದ ಅವರಿಗೆ ಸನ್ಮಾನ ಮಾಡಿ ಗೌರವಿಸಿದೆ ಎಂದು ತಿಳಿಸಿದರು.

ಈ ವೇಳೆ ಸನ್ಮಾನಿತರಾದ ಪ್ರಹ್ಲಾದ್ ರಾವ್ ರವರು ಮಾತನಾಡಿ ಹಲವಾರು ವರ್ಷಗಳಿಂದ‌ಅಂಬಾರಿ ಹೊತ್ತ ಆರ್ಜುನ‌ ಆನೆಯು ಮೃತ ಪಟ್ಟಿದೆ ಇದರ  ಸ್ಮಾರಕವಾಗ ಬೇಕೆಂದು ತಮ್ಮ ಅಭಿಪ್ರಾಯವನ್ನು ಸರಕಾರಕ್ಕೆ ಮನವಿ ಮಾಡುವ ಮೂಲಕ ತಿಳಿಸಿದರು.ಸುಮಾರು 27 ವರ್ಷಗಳಿಂದ ದಸರಾ ಅಂಬಾರಿ ಆನೆ ಪೂಜಾ ಕಾರ್ಯಕ್ರಮ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಿ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬಂದಿದ್ದೇನೆ..

ಇದಕ್ಕೆಲ್ಲ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಹಾಗೂ ಅಂಬಾರಿ ಉರುವ ಗಜಾನನ ಆಶೀರ್ವಾದದಿಂದ ಯಾವುದೇ ತೊಂದರೆಗಳಾಗದೆ ಈ ಪೂಜಾ ಕಾರ್ಯವನ್ನು ನೆರವೇರಿಸಿಕೊಂಡು ಬರುತ್ತಿದ್ದೇನೆ…
ಇದನ್ನು ಮನಗೊಂಡು ಮೈಸೂರು ಜಿಲ್ಲಾ ಮಡಿವಾಳ ಸಂಘದವರು ಜೀವನದಲ್ಲಿ ಮರೆಯಲಾಗದಂತಹ ಸಮಾರಂಭವನ್ನು ನೆರವೇರಿಸಿ ಕೊಟ್ಟಿದ್ದಾರೆ.. ಅವರ ಕುಟುಂಬದವರಿಗೂ ಅವರ ಸಂಘದ ಕುಟುಂಬದವರಿಗೂ ಅಧಿದೇವತೆಯಾದ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ ಎಂದರು.

ಈ ಸನ್ಮಾನ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಅನಂತು ಮಡಿವಾಳ ಜಿಲ್ಲಾ ಸಂಘದ ಅಧ್ಯಕ್ಷರಾದ
ಸಿಂಗ್ರಿ ಶೆಟ್ಟರು, ಪ್ರಧಾನ ಕಾರ್ಯದರ್ಶಿ ಹನೂರು ನಾಗರಾಜು,ಖಜಾಂಜಿಯಾದ
ಜಗದೀಶ್ ಕುಮಾರ್. ಪದಾಧಿಕಾರಿಗಳಾದ. ಹುಣಸೂರು ಮಹಾದೇವ. ಕಿರಣ್ .ಮಂಜು ಶೆಟ್ಟಿ.ಮಹೇಶ್ .ಶ್ರೀ ರಾಮ್.ವೆಂಕಟೇಶ್.ಹಾಜರಿದ್ದರು.

 

Leave a Reply

Your email address will not be published. Required fields are marked *