ಮೈಸೂರು:29 ಡಿಸೆಂಬರ್ 2021
ನಂದಿನಿ
ಮೈಸೂರು ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳನ್ನು ಮೇಲ್ದರ್ಜೆಗೇರಿಸಿ ವಿಲೀನ ಮಾಡಿರುವ ಹೂಟಗಳ್ಳಿ ನಗರಸಭೆ , ಕಡಕೊಳ ಪಟ್ಟಣ ಪಂಚಾಯ್ತಿ , ಬೋಗಾದಿ ಪಟ್ಟಣ ಪಂಚಾಯ್ತಿ , ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿ ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯ್ತಿಯಲ್ಲಿ ಸ್ವಚ್ಛ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಮಾಡುವಂತೆ ಒತ್ತಾಯಿಸಿ
ಕರ್ನಾಟಕ ಪೌರಕಾರ್ಮಿಕರ ಮಹಾಸಂಘ ದಿಂದ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ರವರ ನೇತೃತ್ವದಲ್ಲಿ ಮೈಸೂರಿನ ರೈಲ್ವೇ ಸ್ಟೇಷನ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ರಾಜು ಕಳೆದ ಆರು ತಿಂಗಳ ಹಿಂದೆ ರಂದು ಕೆಲವು ಗ್ರಾಮ ಪಂಚಾಯಿತಿಗಳ ಜನಸಂಖ್ಯೆಯ ಅನುಗುಣವಾಗಿ ಮೇಲ್ದರ್ಜೆಗೇರಿಸಿ ಸುಮಾರು ಒಟ್ಟು 161 ಜನ ಪೌರ ಕಾರ್ಮಿಕರು , ಆರು ತಿಂಗಳಿನಿಂದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಸರಿಯಷ್ಟೆ , ಇದುವರೆವಿಗೂ ಪೌರ ಸೇವಾ ನೌಕರರಾಗಿ ವಿಲೀನಗೊಳಿಸದೆ ಪೌರ ಸೇವಾ ನೌಕರರಿಗೆ ನೀಡುವ ವೇತನ ನೀಡದೆ ವೃಂದ ಮತ್ತು ನೇಮಕ 2010 ರ ಅನ್ವಯ ಯಾವುದೇ ನಿಯಮಗಳನ್ನು ಪಾಲಿಸದೆ ಗ್ರಾಮ ಪಂಚಾಯಿತಿಗೆ ನೀಡುವ ವೇತನಗಳನ್ನು ನೀಡುತ್ತಿದ್ದು , ಕಳೆದ ಎರಡು ಮೂರು ತಿಂಗಳುಗಳಿಂದ ವೇತನವನ್ನು ನೀಡದೆ , ನಮ್ಮ ಮೂಲಭೂತ ಸೌಕರ್ಯಗಳನ್ನು ನೀಡುವ ವಿಷಯದಲ್ಲಿ ವಿಳಂಬ ಧೋರಣೆಯನ್ನು ತೋರುತ್ತಿರುವುದರಿಂದ ಸಾಮೂಹಿಕವಾಗಿ ಸಾಂಕೇತವಾದ ಒಂದು ದಿನದ ಪ್ರತಿಭಟನೆ ಮಾಡುತ್ತಿದ್ದೇವೆ.ನಮ್ಮ ಬೇಡಿಕೆ ಈಡೇರಿಸದಿದ್ದರೇ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ 100 ಕ್ಕೂ ಹೆಚ್ಚು ಪೌರಕಾರ್ಮಿಕರು ಭಾಗಿಯಾಗಿದ್ದರು.