ನಂದಿನಿ ಮೈಸೂರು
ಮೈಸೂರು ಮಹಾನಗರಪಾಲಿಕೆಯಲ್ಲಿ ತಾವುಗಳು ಆಯುಕ್ತರಾಗಿದ್ದ ಸಂದರ್ಭ ದಿನಾಂಕ 28-02-2023 ರಂದು ಪೌರಕಾರ್ಮಿಕರ ನೇರನೇಮಕಾತಿಯನ್ನು ಯಾವುದೇ ಲೋಪ ದೋಷವಿಲ್ಲದೆ ಪಾರದರ್ಶಕವಾಗಿ ಮೊದಲನೆ ಹಂತದ ಆಯ್ಕೆ ಮಾಡಿರುತ್ತೀರಿ. ಅದರಂತೆ ಈಗಿನ 2ನೇ ಹಂತದ 252 ಜನ ಪೌರಕಾರ್ಮಿಕರ ನೇಮಕಾತಿಯನ್ನು ಮಾಡಿಕೊಡಬೇಕೆಂದು ಮೈಸೂರು ನಗರ ಪಾಲಿಕೆ ಖಾಯಂ, ಪೌರಕಾರ್ಮಿಕರ
ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾ ಸಂಘದಿಂದ ನೂತನ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ರವರಿಗೆ ಮನವಿ ಮಾಡಿದರು.
ಹಿಂದಿನ ಸರ್ಕಾರದ ಆದೇಶದಂತ ದಿನಾಂಕ 28-02-2023 ರಂದು ಮೈಸೂರು ಮಹಾ ನಗರಪಾಲಿಕೆಯಲ್ಲಿ 170 ಜನ ಪೌರಕಾರ್ಮಿಕರನ್ನು ಖಾಯಂ ಪೌರಕಾರ್ಮಿಕರಾಗಿ ಯಾವುದೇ ಲೋಪ ದೋಷವಿಲ್ಲದೆ ಆದೇಶ ಮಾಡಿರುತ್ತೀರಿ. ಇದರಲ್ಲಿ ಈಗಾಗಲೇ ಆ ಪೌರಕಾರ್ಮಿಕ ಕುಟುಂಬದವರು ಈಗ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಇದರಲ್ಲಿ ಈಗ 2ನೇ ಹಂತದ 252 ಜನ ಪೌರಕಾರ್ಮಿಕರನ್ನು ನೇರ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲು ಈಗಾಗಲೇ ನಗರ ಪಾಲಿಕೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಅರ್ಜಿಯನ್ನು ಸಲ್ಲಿಸಲು ದಿನಾಂಕ 18-07-2024 ರಂದು ಕೊನೆಯ ದಿನಾಂಕವಾಗಿದ್ದು, ಈ 2ನೇ ಹಂತದ ಪೌರಕಾರ್ಮಿಕರ ನೇಮಕಾತಿಯನ್ನು ಈ ಹಿಂದೆ ಯಾವ ರೀತಿಯಾಗಿ ಅಂದರೆ ಮೊದಲಿಗೆ ಸೀನಿಯಾರಿಟಿ, ಎರಡನೆಯದು ಹಿರಿತನದ ಆಧಾರದ ಮೇಲೆ ಸೂಕ್ತ ಇ.ಎಸ್.ಐ. ಪಿ.ಎಫ್. ಸೂಕ್ತ ದಾಖಲಾತಿಗಳನ್ನು ಪರಿಶೀಲಿಸಿ ಪೌರಕಾರ್ಮಿಕರ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕಾಗಿ ಈ ಮೂಲಕ ತಮ್ಮಲ್ಲಿ ಮನವಿಮಾಡಿಕೊಳ್ಳುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಎಂ.ವಡಿವೇಲು,ಎನ್. ಮಾರ
ಶ್ರೀನಿವಾಸ್,ಆರ್. ನರಸಿಂಹ,
ಜಿ. ಮಂಜುನಾಥ್ ,ದಿನೇಶ್ ಎಸ್,ಶ್ರೀನಿವಾಸ ವಿ,
(สarled ಉಪಾಧ್ಯಕ್ಷರು
ಅಮಾಸ .ಪಿ ಸೇರಿದಂತೆ ಇತರರು ಭಾಗಿಯಾಗಿದ್ದರು.