ತಿನ್ನೋ ಅನ್ನಕ್ಕೂ ನೊಣದ ಕಾಟ, ಅನ್ನದ ರಾಶಿಗಿಂತ ನೊಣದ ರಾಶಿಯೇ ಹೆಚ್ಚು ಕೋಳಿ ಫಾರಂನಿಂದ ಹೈರಾಣಾಗಿರುವ ಹತ್ತಾರೂ ಗ್ರಾಮಸ್ಥರು

 

 

 

ಮೈಸೂರು:9 ಸೆಪ್ಟೆಂಬರ್ 2022

ನಂದಿನಿ ಮೈಸೂರು

ಹಳ್ಳಿಗಳಲ್ಲಿ ರಸ್ತೆ,ವಿದ್ಯುತ್, ನೀರಿನ ಸಮಸ್ಯೆ ಕೇಳಿದ್ದೀರಾ,ಆದರೇ ಇಲ್ಲಿರುವ ಸಮಸ್ಯೆ ಹತ್ತಾರೂ ವರ್ಷಗಳಿಂದ ಹತ್ತಾರು ಗ್ರಾಮಗಳು ನೊಣದ ಸಮಸ್ಯೆಯಿಂದ ನರಕ ಅನುಭವಿಸುತ್ತಿದ್ದಾರೆ.ಊಟ ಮಾಡಲು ಕುಳಿತರೇ ಸಾಕು ಅನ್ನದ ರಾಶಿಗಿಂತ ನೊಣದ ರಾಶಿಯೇ ಹೆಚ್ಚಿರುತ್ತೆ.ಇದಕ್ಕೆ ಕಾರಣ ಆ ಒಂದು ಕೋಳಿ ಫಾರಂ.

ಹೌದು
ಮೈಸೂರು ಜಿಲ್ಲೆ, ಮೈಸೂರು ತಾಲೂಕು ಜಯಪುರ ಹೋಬಳಿ ವ್ಯಾಪ್ತಿಗೆ ಬರುವ ಮಲ್ಲಹಳ್ಳಿ ಬೀರಿಹುಂಡಿ ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿ , ಮೈಸೂರ್ ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ಕೃಷ್ಣ ಕೋಳಿ ಫಾರಂ ನಿಂದಾಗಿ ನೊಣದ ಸಮಸ್ಯೆ ತೀವ್ರವಾಗಿದ್ದು , ಮನೆಗಳಲ್ಲಿ ಊಟ ಮಾಡಲು , ಮಲಗಲು ತುಂಬಾ ಸಮಸ್ಯೆ ಆಗುತ್ತಿದೆ, ಹಾಗೂ ಆರೋಗ್ಯದ ಮೇಲೂ ಕೂಡಾ ಸಾಕಷ್ಟು ದುಷ್ಪರಿಣಾಮಗಳಾಗುತ್ತಿವೆ ಎಂದು ಇಂದು ಬೆಳಿಗ್ಗೆ ಸಿನಿಮಾ ಚಲನಚಿತ್ರ ನಟರು ಹಾಗೂ ಕಾವಲುಪಡೆ ಹೋರಾಟಗಾರ ಶಿವು ಬಾಲಾಜಿ ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕರಿಗೌಡರವರ ನೇತೃತ್ವದಲ್ಲಿ ನೊಣಗಳಿಂದ ಶಾಸ್ವತ ಪರಿಹಾರ ಕಲ್ಪಿಸುವಂತೆ ನೂರಾರು ಗ್ರಾಮಸ್ಥರು ಸೇರಿ ಮೈಸೂರು ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ಕೃಷ್ಣ ಕೋಳಿ ಫಾರಂ ಮುಂದೆ ಅನ್ನ ಮತ್ತು ಇಡ್ಲಿ ತಟ್ಟೆ ಹಿಡಿದುಕೊಂಡು ಅದಕ್ಕೆ ಮುತ್ತಿದ ನೊಣಗಳನ್ನು ತೋರಿಸುತ್ತಾ ವಿನೂತನವಾಗಿ ಪ್ರತಿಭಟಿಸಿ
ಮ್ಯಾನೇಜರ್ ಗೆ ಮನವಿ ಸಲ್ಲಿಸಿದರು.

ನೊಣಗಳ ಹೆಚ್ಚಾಗುವಿಕೆಗೆ ಕೃಷ್ಣ ಕೋಳಿ ಫಾರಂ ನ ಅವೈಜ್ಞಾನಿಕ ನಿರ್ವಹಣೆಯೇ ಕಾರಣವಾಗಿದ್ದು, ಈ ಸಮಸ್ಯೆ ಬಗೆಹರಿಸುವಂತೆ ಕೋಳಿ ಫಾರಂ ಮಾಲೀಕರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಫಾರಂ ಗೆ ಸಂಬಂಧಿಸಿದವರು ಈ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಕೂಡಾ ಮಾಡಿರುವುದಿಲ್ಲ, ಇವರು ಪ್ರಭಾವಿಯಾಗಿದ್ದು ಹಾಗೂ ಅವರ ಹಿಂದೆ ಪ್ರಭಾವಿಗಳ ಕೈವಾಡವಿದ್ದು ಜನರ ಹಿತದೃಷ್ಟಿಯ ಬಗ್ಗೆ ಗಮನಹರಿಸುತ್ತಿಲ್ಲ, ಹಾಗಾಗಿ ನಾವು ಗ್ರಾಮಸ್ಥರು
ಕೃಷ್ಣ ಕೋಳಿ ಫಾರಂ ಮಾಲೀಕರಿಗೆ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.

ಇದು ನೆನ್ನೆ ಮೊನ್ನೆಯ ಸಮಸ್ಯೆ ಅಲ್ಲ, ಹಲವು ವರ್ಷಗಳ ಸಮಸ್ಯೆ ಆಗಿದ್ದು, ಈ ನೊಣಗಳಿಂದಾಗಿ ನಮ್ಮೆಲ್ಲರ ಆರೋಗ್ಯ ಕೆಡುತ್ತಿದೆ, ಈಗ ಕೇವಲ ಮನವಿ ಮಾಡುತ್ತಿದ್ದೇವೆ, ಆದಷ್ಟು ಬೇಗ ಈ ಸಮಸ್ಯೆ ಗೆ ಶಾಸ್ವತ ಪರಿಹಾರ ಕಲ್ಪಿಸಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಕೊಂಡು ಕೋಳಿ ಫಾರಂ ಮುಚ್ಚಿಸೋವರೆಗೂ ಹೋರಾಟ ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.

– ಚಿತ್ರ ನಟ ಬಾಲಾಜಿ

ಈ ಸಂದರ್ಭದಲ್ಲಿ ಬೀರಿಹುಂಡಿ ಅಕ್ಕಪಕ್ಕ ಗ್ರಾಮಗಳಾದ ಮಾದಹಳ್ಳಿ, ಶೆಟ್ಟನಾಯ್ಕನ ಹಳ್ಳಿ, ನುಗ್ಗಹಳ್ಳಿ , ಮಾರ್ಗೋಡನಹಳ್ಳಿ ಗ್ರಾಮಸ್ಥರಾದ ಪಿತ್ತ ಕುಮಾರ್. ಮಹದೇವ್. ಬ್ರಿಕ್ಸ್ ಕುಮಾರ್.ಶಿವಣ್ಣೇಗೌಡ. ವೆಂಕಟೇಶ್. ಸ್ವಾಭಿಮಾನಿ ಮನು. ಪ್ರಸನ್ನ. ಈಶ್ವರ್ ಆಚಾರಿ. ಪರಶಿವ. ಪುಟ್ಟ. ಮಾದೇಶ್ ಗೌಡ. ಹಾಗೂ ಬೀರಿಹುಂಡಿ. ಶೆಟ್ಟನಾಯಕನಹಳ್ಳಿ.ಮಾದಳ್ಳಿ.ದೊಡ್ಡ ಮಾರೋಗೋಡನಹಳ್ಳಿ. ಕುಮಾರಬೀಡು ಗ್ರಾಮದ ಗ್ರಾಮಸ್ಥರುಗಳು ಭಾಗವಹಿಸಿದರು.

Leave a Reply

Your email address will not be published. Required fields are marked *