ಜನರಿಂದ ಪೋಸ್ಟ್ ಕಾರ್ಡ್ ಅಭಿಪ್ರಾಯ ಅಭಿಯಾನ ಆರಂಭಿಸಿದ ಮೈ.ಕೊ ಎಂ ಆಕಾಂಕ್ಷಿ ಜೆಜೆ ಆನಂದ್

ನಂದಿನಿ ಮೈಸೂರು

ಕಳೆದ 6 ತಿಂಗಳಿಂದ ಕಾಂಗ್ರೆಸ್ ಗೆಲ್ಲಿಸಿ 2024 ಅಭಿಯಾನ ಆರಂಭಿಸಿರುವ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಜೆಜೆ ಆನಂದ್ ರವರು ಇಂದು ಹೊಸ ಪ್ರಯತ್ನದ ಮೂಲಕ ವಿಶೇಷವಾಗಿ ಜನರನ್ನ ತಲುಪಲು ಮುಂದಾಗಿದ್ದಾರೆ.

ಮೈಸೂರಿನ ಟಿ ಕೆ ಬಡಾವಣೆಯಲ್ಲಿರುವ ಶ್ರೀ ಬಿಸಿಲು ಮಾರಮ್ಮ ದೇಗುಲಕ್ಕೆ ಆಗಮಿಸಿದ ಜೆಜೆ ಆನಂದ್ ಅವರು ವಿಶೇಷ ಪೂಜೆ ಸಲ್ಲಿಸಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಟಿಕೇಟ್ ಸಿಗುವಂತೆ ಪ್ರಾರ್ಥಿಸಿದರು.

ದೇವಸ್ಥಾನದ ಸುತ್ತಾ ಮುತ್ತಾ ನೆರೆದಿದ್ದ ಜನರಿಂದ ಪೋಸ್ಟ್ ಕಾರ್ಡ್ ಅಭಿಪ್ರಾಯ ಪಡೆದುಕೊಂಡರು.ನಂತರ ಮೈಸೂರು ನಗರ ಬಸ್ ನಿಲ್ದಾಣದಲ್ಲಿಯೂ ಫೋಸ್ಟ್ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಗುಡ್ಡಪ್ಪನವರು, ಕಾಂಗ್ರೆಸ್ ಮುಖಂಡರಾದ ತಿರುಮಲೇಶ್,ಮನೋಹರ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *