ಮೈಸೂರು:8 ಜನವರಿ 2022
ನಂದಿನಿ
ಮೈಸೂರಿನ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಮೈಸೂರು ನಗರದಲ್ಲಿ ವಿಕೇಂಡ್ ಕರ್ಫೂ ಕಠಿಣವಾಗಿ ಬಿಗಿ ಭದ್ರತೆ ಯಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕೆಲಸ ನಿರ್ವಹಿಸುತ್ತಿರುವ ಪೋಲಿಸ್ ನವರಿಗೆ ಟೀ,ಬಿಸ್ಕತ್ತು, ಬ್ರೆಡ್, ನೀರಿನ ಬಾಟಲ್ ವಿತರಿಸಿ ಅವರಿಗೆ ಆತ್ಮ ಸ್ಥೈರ್ಯ ತುಂಬ ಲಾಯಿತು…
ನಂತರ ಮಾತನಾಡಿದ ಹಿಂದುಳಿದ ವರ್ಗಗಳ ಮೊರ್ಚಾದ ಮಹಾನಗರದ ಅಧ್ಯಕ್ಷರಾದ ಜೋಗಿಮಂಜು ವಿಶ್ವದಾದ್ಯಂತ ಕರೋನ ಮೂರನೇ ಅಲೆ ಯ ರೂಪಾಂತರಿ ಓಮಿಕ್ರಾನ್
ಯ ವೇಗ ಅತಿಯಾಗಿದ್ದು ಇದರ ವೇಗ ವನ್ನು ತಡೆಯಲು ಮುನ್ನೆಚ್ಚರಿಕೆ ಯ ಕ್ರಮವಾಗಿ ಕರ್ನಾಟಕ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಿದೆ ,ಸಾರ್ವಜನಿಕರಿಗೆ ದಿನ ನಿತ್ಯದ ಅಹಾರ ಪದಾರ್ಥಗಳು ಸಾಮಾನ್ಯವಾಗಿ ಸಿಗುವ ನಿಟ್ಟಿನಲ್ಲಿ ಸಹಕಾರಿಯಾಗಿದೆ,ಹಾಗೇಯೆ ಕರೋನ ವಾರಿಯರ್ಸ್ ಗಳಾದ ವೈದ್ಯರು,ಪೋಲೀಸ್ ನವರು ಗಳು ತಮ್ಮ ಪ್ರಾಣದ ಹಂಗನ್ನೂ ತೊರೆದು ಸಾರ್ವಜನಿಕರ ಸೇವೆಯಲ್ಲಿ ಕೆಲಸ ಮಾಡುತ್ತಿರುವ ಮಾನವೀಯತೆ ಯ ಯೋಧರು ಗಳಿಗೆ ಭಾ.ಜ.ಪ.ದ ಕಾರ್ಯಕರ್ತರು ಪ್ರಾಮಾಣಿಕ ವಾಗಿ ಅವರೊಂದಿಗೆ ಕೈ ಜೋಡಿಸಿ ಅವರು ಮಾಡುವ ಕೆಲಸಕ್ಕೆ ಸಹಕಾರಿ ಯಾಗಿರುತ್ತಾರೆ ಎಂದು ಅಭಿಪ್ರಾಯ ಪಟ್ಟರು..
ಇಂದು ಮೈಸೂರಿನ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಲಕ್ಷ್ಮಿಪುರಂ ಠಾಣೆ,ವಿದ್ಯಾರಣ್ಯ ಪುರಂ ಠಾಣೆ,ಕೃಷ್ಣರಾಜ ಠಾಣೆ ಅಶೋಕ ಪುರಂ ಠಾಣೆ,ಕುವೆಂಪು ನಗರ ಠಾಣೆ,ನಜರಬಾದ್ ಠಾಣೆ,ಸರಸ್ವತಿ ಪುರಂ ಠಾಣೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಗಳಿಗೆ ಆತ್ಮ ಸ್ಥೈರ್ಯ ತುಂಬಲಾಯಿತು.
ಸಂಧರ್ಭದಲ್ಲಿ ನಗರ ಅಧ್ಯಕ್ಷರಾದ ಜೋಗಿಮಂಜು, ಪ್ರದಾನ ಕಾರ್ಯದರ್ಶಿ ಮಣಿರತ್ನಂ, ಸೋಶಿಯಲ್ ಮೀಡಿಯಾ ಸಂಚಾಲಕ ಅಭಿಲಾಶ್ ಕೊಟಾಯ್,ಎಸ್ಸಿ ಮೊರ್ಚಾ ಪ್ರದಾನ ಕಾರ್ಯದರ್ಶಿ ಜಯರಾಮ್ ಇದ್ದರು