ಜನ್ರು ಸತ್ತರೇ ಇಲ್ಲಿ ಆರಡಿ ಮೂರಡಿ ಜಾಗನೋ ಸಿಗಲ್ಲ ಸ್ವಾಮಿ

ಸರಗೂರು :8 ಜನವರಿ 2022

ಅಲ್ಲೊಬ್ಬ ವ್ಯಕ್ತಿ ಉಸಿರು ನಿಲ್ಲಿಸಿದ್ದ.ಶವವನ್ನು ನೋಡಿ
ಕುಟುಂಬಸ್ಥರು ಕಣ್ಣೀರಾಕುತ್ತಿದ್ರು.ಗ್ರಾಮಸ್ಥರು ಚಟ್ಟ ಕಟ್ಟಿಕೊಂಡು ಏನನ್ನೂ ಹುಡುಕುತಿದ್ರೂ.ಅರೇ ಇವರ್ಯಾಕೆ ಶವ ಸಂಸ್ಕಾರ ಮಾಡದೇ ಬೇಲಿ ಬಳಿ ನಿಂತಿದ್ದಾರಲ್ಲ ಅಂದುಕೊಂಡ್ರ ಅವರು ಹುಡುಕುತ್ತಿದ್ದದ್ದು ಆರಡಿ ಮೂರಡಿ ಜಾಗನಾ.

ಹೌದು
ಸಾವು ಯಾರಿಗೂ ಬರದಿರಲಿ
ಒಂದು ಗ್ರಾಮ ಅಂದ ಮೇಲೆ ಅಲ್ಲೊಂದು ಸೂಕ್ತ ಸ್ಮಾಶನ ಇರಬೇಕಲ್ಲವೇ. ಮೃತ ವ್ಯಕ್ತಿಯ ಅಂತಿಮ ಶವ ಸಂಸ್ಕಾರಕ್ಕೆ ಜಾಗವೇ ಇಲ್ಲ ಅಂದ್ರೇ ಹೇಗೆ ಹೇಳಿ.ಇಲ್ಲಿ ಜನರು ಸತ್ತರೇ ಆರಡಿ ಮೂರಡಿ ಜಾಗವಿಲ್ಲ. ತಿರುಗಾಡೋಕೆ ರಸ್ತೆಯೇ ಇಲ್ಲ.
ಅರಣ್ಯ ಇಲಾಖೆಯ ಒತ್ತುವರಿ ಜಾಗದಲ್ಲಿ ಶವ ಸಂಸ್ಕಾರ ಮಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ ನಮಗೊಂದು ಶವ ಸಂಸ್ಕಾರಕ್ಕೆ ಜಾಗ ಕೊಡಿ ಅಂತ ಶವವನ್ನಿಟ್ಟುಕೊಂಡು ಮಹಿಳೆಯೋರ್ವಳು ಮನವಿ ಮಾಡುತ್ತಿರುವ ದೃಶ್ಯ ಕಂಡು ಬಂತು.

ಎಚ್.ಡಿ.ಕೋಟೆ ಸರಗೂರು
ತಾಲ್ಲೂಕಿನ ಬಿ ಮಟಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆಲನಹಳ್ಳಿ ಹಾಡಿ ಈ ತಾಲ್ಲೂಕಿನ ಗಡಿಭಾಗದಲ್ಲಿ ಇರುವ ಗ್ರಾಮ.
ಆಲನಹಳ್ಳಿ ಹಾಡಿಯ ಕಾಡು ಕುರುಬ ಜನಾಂಗದವರಿಗೆ 30 ವರ್ಷಗಳಿಂದಲೂ ಶವಸಂಸ್ಕಾರ ಮಾಡಲು ಸರಿಯಾದ ಸ್ಥಳವಿಲ್ಲದೆ ಪರದಾಡುವಂತಾಗಿದೆ.ಅದಲ್ಲದೇ
ಹಾಡಿಯ ಜನರಿಗೆ ಸರ್ಕಾರದಿಂದ ಬರುವ ಯಾವುದೇ ರೀತಿಯ ಸೇವಾ ಸೌಲಭ್ಯಗಳು ತಲುಪುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ
ವತಿಯಿಂದಲೂ ಈ ಗ್ರಾಮಕ್ಕೆ ಸೌಲಭ್ಯಗಳು ದೊರಕದೆ.ಇಲ್ಲಿನ ಜನರು ನೋವನ್ನು ಅನುಭವಿಸುತ್ತಿದ್ದಾರೆ.

ಸರ್ಕಾರದಿಂದ ಬರುವ ಅನುದಾನವನ್ನು ಪಡೆಯಲು ಅದಾರ್ ಕಾರ್ಡ್, ರೇಷನ್ ಕಾರ್ಡ್ ಸಹ ಇಲ್ಲದೇ ಹಾಡಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಲನಹಳ್ಳಿ ಹಾಡಿಯ ಜನ
ತುಂಬ ವರ್ಷಗಳಿಂದಲೂ ಕಾಡಿನಲ್ಲಿಯೇ ಶವ ಸಂಸ್ಕಾರ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡಿನ ಜಾಗಕ್ಕೆ ತಂತಿಯನ್ನು ನಿರ್ಮಾಣ ಮಾಡಿಕೊಂಡು. ಹಾಡಿಯ ಜನರಿಗೆ ತುಂಬಾ ತೊಂದರೆಯನ್ನು ನೀಡುತ್ತಿದ್ದಾರೆ .ಕಾಡು ಕುರುಬ ಜನರಿಗೆ ಶವ ಸಂಸ್ಕಾರ ಮಾಡಲು ಒಂದು ನಿರ್ದಿಷ್ಟ ಜಾಗವನ್ನು ಗುರುತಿಸಿ, ಈ ಭಾಗದ ಜನರಿಗೆ ಅನುಕೂಲ ವ್ಯವಸ್ಥೆ ಮಾಡಿಕೊಡಬೇಕು.
ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಬೆಟ್ಟಸ್ವಾಮಿ ಕುರ್ಣೇಗಾಲ
ಎಚ್ಚರಿಕೆ ನೀಡಿದ್ದರು.

ಅದೇನೇ ಆಗಲಿ ಇದ್ದಾಗ ನೆಮ್ಮದಿಯಿಂದ ಬದುಕಿದ್ದನೋ ಇಲ್ಲವೋ ಆದರೇ ಸತ್ತಾಗಾದ್ರೂ ನೆಮ್ಮದಿಯಿಂದ ಮಣ್ಣು ಸೇರಬೇಕಲ್ಲವೇ.ಅದೇನೇ ಆಗಲಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಇಲ್ಲವಾದ್ದಲಿ ಶವ ಸಂಸ್ಕಾರಕ್ಕೆ ತಹಶಿಲ್ದಾರರ ಕಚೇರಿಯ ಮುಂದೆ ಜನರು ಬಂದರೂ ಬರಬಹುದು.

ಸಂಜಯ್ ಕೆ ಬೆಳತೂರು ಜೊತೆ ನಂದಿನಿ ಮೈಸೂರು

Leave a Reply

Your email address will not be published. Required fields are marked *