ಪಿರಿಯಾಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಬೆಕ್ಕರೆ ಸತೀಶ್ ಆರಾಧ್ಯ ಅವಿರೋಧ ಆಯ್ಕೆ

 

ಪಿರಿಯಾಪಟ್ಟಣ:13 ಜುಲೈ 2022

ನಂದಿನಿ ಮೈಸೂರು

ಪಿರಿಯಾಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ (ಎಂಡಿಜೆಎ ಅಂಗ ಸಂಸ್ಥೆ) ನೂತನ ಅಧ್ಯಕ್ಷರಾಗಿ ಕನ್ನಡಪ್ರಭ ತಾಲ್ಲೂಕು ವರದಿಗಾರ ಬೆಕ್ಕರೆ ಸತೀಶ್ ಆರಾಧ್ಯ ಅವಿರೋಧ ಆಯ್ಕೆಯಾದರು.

ಜು.10 ರಂದು ನಡೆದ ಸಂಘದ 2022-2024ನೇ ಸಾಲಿನ ಪದಾಧಿಕಾರಿ ಹಾಗು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬೆಕ್ಕರೆ ಸತೀಶ್ ಆರಾಧ್ಯ ಸೇರಿದಂತೆ ಇತರೆ ಎಲ್ಲ ಸ್ಥಾನಗಳಿಗೆ ಓರ್ವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪತ್ರಕರ್ತರ ಸಂಘದ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷರಾದ ಧರ್ಮಾಪುರ ನಾರಾಯಣ್ ಹಾಗೂ ಸಹಾಯಕ ಚುನಾವಣಾಧಿಕಾರಿ ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ನಾಗೇಶ್ ಪಾಣತ್ತಲೆ ಅವರು ಅವಿರೋಧ ಆಯ್ಕೆ ಘೋಷಿಸಿದರು.

*ನೂತನ ಪದಾಧಿಕಾರಿಗಳು* ಬೆಕ್ಕರೆ ಸತೀಶ್ ಆರಾಧ್ಯ (ಅಧ್ಯಕ್ಷ), ರವಿಚಂದ್ರ ಬೂದಿತಿಟ್ಟು (ಉಪಾಧ್ಯಕ್ಷ), ಪ್ರಸನ್ನ ಪಿ.ಡಿ (ಪ್ರಧಾನ ಕಾರ್ಯದರ್ಶಿ), ಅಶೋಕ್.ಎಸ್ (ಕಾರ್ಯದರ್ಶಿ), 
ಪಿ.ಎನ್ ದೇವೇಗೌಡ (ಖಜಾಂಚಿ ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಮ್ತಿಯಾಜ್ ಅಹಮದ್, 
ಬೆಟ್ಟದಪುರ ಪ್ರಸನ್ನ ಕುಮಾರ್, ಕೆ.ಶಿವಣ್ಣ, ಸದಾಶಿವ, ಪಿ.ಎಸ್ ವೀರೇಶ್, ಬಿ.ಎಂ ಸ್ವಾಮಿ, 
ಎಚ್.ಕೆ ಮಹೇಶ್ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *