PhonePe ಸ್ಮಾರ್ಟ್‌ಸ್ಪೀಕರ್‌ಗಳು ಈಗ ಕನ್ನಡದಲ್ಲೂ ಧ್ವನಿ ಪಾವತಿ ನೋಟಿಫಿಕೇಶನ್‌ಗಳನ್ನು ನೀಡುತ್ತವೆ

PhonePe ಸ್ಮಾರ್ಟ್‌ಸ್ಪೀಕರ್‌ಗಳು ಈಗ ಕನ್ನಡದಲ್ಲೂ ಧ್ವನಿ ಪಾವತಿ ನೋಟಿಫಿಕೇಶನ್‌ಗಳನ್ನು ನೀಡುತ್ತವೆ

ಬೆಂಗಳೂರು: PhonePe, ತನ್ನ ಸ್ಮಾರ್ಟ್‌ಸ್ಪೀಕರ್‌ಗಳಲ್ಲಿ ಕನ್ನಡದಲ್ಲೂ ಧ್ವನಿ ಪಾವತಿ ನೋಟಿಫಿಕೇಶನ್‌ಗಳನ್ನು ಪ್ರಾರಂಭಿಸಿರುವುದಾಗಿ ಇಂದು ಪ್ರಕಟಿಸಿದೆ. ಪ್ರಾದೇಶಿಕ ಭಾಷೆಯ ನೋಟಿಫಿಕೇಶನ್‌ಗಳ ಪ್ರಾರಂಭದ ಮೂಲಕ, ವರ್ತಕರು ಈಗ ತಮ್ಮ ಆಯ್ಕೆಯ ಪ್ರಾದೇಶಿಕ ಭಾಷೆಯಲ್ಲಿ ತತ್‌ಕ್ಷಣದಲ್ಲೇ ಗ್ರಾಹಕರ ಪಾವತಿಗಳನ್ನು ದೃಢೀಕರಿಸಿಕೊಳ್ಳಬಹುದು. ಇದರಿಂದಾಗಿ ಈಗ, ವಿಶೇಷವಾಗಿ ಜನನಿಬಿಡ ವ್ಯವಹಾರದ ವೇಳೆಗಳಲ್ಲಿ ಪಾವತಿಯ ದೃಢೀಕರಣಕ್ಕಾಗಿ ಗ್ರಾಹಕರ ಫೋನ್ ಸ್ಕ್ರೀನ್ ನೋಡಬೇಕಿಲ್ಲ ಅಥವಾ ಬ್ಯಾಂಕ್‌ನಿಂದ ಬರುವ ದೃಢೀಕರಣ SMSಗಾಗಿ ಕಾಯಬೇಕಿಲ್ಲ.
PhonePe ಸ್ಮಾರ್ಟ್‌ಸ್ಪೀಕರ್‌ಗಳನ್ನು ಪ್ರಸ್ತುತ 19,000 ಪಿನ್‌ ಕೋಡ್‌ಗಳಾದ್ಯಂತ (ದೇಶದ 90% ವ್ಯಾಪಿಸಿದೆ) ವರ್ತಕ ಪಾಲುದಾರರು, ಧ್ವನಿ ಪಾವತಿ ನೋಟಿಫಿಕೇಶನ್‌ಗಳಿಗಾಗಿ ಬಳಸುತ್ತಿದ್ದಾರೆ. ಕರ್ನಾಟಕದಲ್ಲಷ್ಟೇ PhonePe ಯಶಸ್ವಿಯಾಗಿ 30 ಲಕ್ಷ ವರ್ತಕ ಪಾಲುದಾರರನ್ನು ಡಿಜಿಟಲೀಕರಣಗೊಳಿಸಿದೆ, ಅವರೆಲ್ಲರೂ ಸಕ್ರಿಯವಾಗಿ ಇದರ QR ಕೋಡ್‌ಗಳು ಮತ್ತು ಇತರೆ ಪರಿಹಾರಗಳನ್ನು ಬಳಸುತ್ತಿದ್ದಾರೆ. ಕನ್ನಡದಲ್ಲಿ ಧ್ವನಿ ಪಾವತಿ ನೋಟಿಫಿಕೇಶನ್‌ಗಳ ಸೇರ್ಪಡೆಯೊಂದಿಗೆ, ಅವರೀಗ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, PhonePe ಫಾರ್ ಬ್ಯುಸಿನೆಸ್ ಆ್ಯಪ್‌ನೊಳಗೆ ತಮ್ಮ ಆಯ್ಕೆಯ ಭಾಷೆಯಲ್ಲಿ PhonePe ಸ್ಮಾರ್ಟ್‌ಸ್ಪೀಕರ್‌ಗಳನ್ನು ಹೊಂದಬಹುದು. PhonePe ಸ್ಮಾರ್ಟ್‌ಸ್ಪೀಕರ್‌ಗಳು ಕರ್ನಾಟಕದಲ್ಲಿ ಸರಾಸರಿಯಾಗಿ ತಿಂಗಳಿಗೆ 11 ಕೋಟಿ ವಹಿವಾಟುಗಳನ್ನು ದೃಢೀಕರಿಸುತ್ತವೆ. ಇದು ರಾಜ್ಯದಲ್ಲಿ PhonePe ಸ್ಮಾರ್ಟ್‌ಸ್ಪೀಕರ್‌ಗಳ ವ್ಯಾಪಕತೆಯ ಪ್ರತಿಬಿಂಬವಾಗಿದೆ.
ಹೊಸ ಕೊಡುಗೆಯ ಕುರಿತು ಮಾತನಾಡಿದ, ವಿವೇಕ್ ಲೊಹ್‌ಚೆಬ್, PhonePe ನ ಆಫ್‌ಲೈನ್ ಬ್ಯುಸಿನೆಸ್ ಹೆಡ್, “ಡಿಜಿಟಲ್ ಪಾವತಿಗಳನ್ನು ಭಾರತದ ಪ್ರಾದೇಶಿಕ ಪ್ರಾಂತ್ಯಗಳಲ್ಲಿ ಪರಿಚಯಿಸುತ್ತಿರುವುದರಿಂದ, ಪ್ರಸ್ತುತ ವರ್ತಕರು ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಸಕ್ರಿಯವಾಗಿ ಪರಿಹರಿಸುವುದು ನಮ್ಮ ಗುರಿಯಾಗಿದೆ, ಹಾಗಾಗಿ ನಮ್ಮ ಸ್ಮಾರ್ಟ್‌ಸ್ಪೀಕರ್ ಸಾಧನಗಳ ಪ್ರಶಸ್ತ ಬಳಕೆಯನ್ನು ಖಾತ್ರಿಗೊಳಿಸಿದ್ದೇವೆ. ವಿವಿಧ ಭಾಷೆಗಳ ಅಗತ್ಯತೆಗಳ ಸವಾಲನ್ನು ಪರಿಹರಿಸಿರುವುದು ಆ ನಿಟ್ಟಿನಲ್ಲಿ ಇಟ್ಟಿರುವ ಒಂದು ಹೆಜ್ಜೆಯಾಗಿದೆ. ಪಾವತಿ ದೃಢೀಕರಣಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ನಮ್ಮ ಸೇವೆಗಳನ್ನು ಸ್ಥಳೀಕರಣಗೊಳಿಸುವ ಹಾಗೂ ಕಸ್ಟಮೈಸ್ ಮಾಡುವ ಮೂಲಕ ಭಾರತದ ಪ್ರತಿಯೊಬ್ಬ ವರ್ತಕರ ನಿರ್ದಿಷ್ಟ ಅಗತ್ಯಗಳನ್ನು ಈಡೇರಿಸಿ ನಮ್ಮ ಸಾಧನಗಳನ್ನು ಅವರಿಗೆ ಲಭ್ಯಗೊಳಿಸುವುದು ನಮ್ಮ ಉದ್ದೇಶವಾಗಿದೆ” ಎಂದರು.
PhonePe ಸ್ಮಾರ್ಟ್‌ಸ್ಪೀಕರ್‌ನಲ್ಲಿ ತಮ್ಮ ಆಯ್ಕೆಯ ಪ್ರಾದೇಶಿಕ ಭಾಷೆಯನ್ನು ಡೌನ್‌ಲೋಡ್ ಮಾಡಲು ಮತ್ತು ಆಯ್ಕೆ ಮಾಡಲು ಹಂತವಾರು ಮಾರ್ಗದರ್ಶನ ಇಲ್ಲಿದೆ:
1) PhonePe ಫಾರ್ ಬ್ಯುಸಿನೆಸ್ ಆ್ಯಪ್ ತೆರೆಯಿರಿ
2) ಮುಖಪುಟದಲ್ಲಿ ಸ್ಮಾರ್ಟ್‌ಸ್ಪೀಕರ್ ವಿಭಾಗಕ್ಕೆ ಹೋಗಿ
3) ಭಾಷೆ ಪಟ್ಟಿಯಲ್ಲಿ, ಲಭ್ಯವಿರುವ ಬಹು ಆಯ್ಕೆಗಳಿಂದ ನಿಮ್ಮ ಆದ್ಯತೆಯ ಭಾಷೆಯನ್ನು ಆರಿಸಿ
4) ಆಯ್ದ ಭಾಷೆಯನ್ನು ಸಾಧನದಲ್ಲಿ ಡೌನ್‌ಲೋಡ್ ಮಾಡಿ
5) ಅಪ್‌ಡೇಟ್ ಆದ ಭಾಷೆಯೊಂದಿಗೆ ಸಾಧನವು ರೀಬೂಟ್ ಆಗುತ್ತದೆ
PhonePe, ಮಳಿಗೆಗಳಲ್ಲಿ ಪಾವತಿಗಳ ವಿಶ್ವಾಸಾರ್ಹ ಮತ್ತು ಅನುಕೂಲಕರ ಟ್ರ್ಯಾಕಿಂಗ್‌ಗಾಗಿ ಕಳೆದ ವರ್ಷ ಸ್ಮಾರ್ಟ್‌ಸ್ಪೀಕರ್ಸ್‌ ಅನ್ನು ಬಿಡುಗಡೆಗೊಳಿಸಿತ್ತು. ಬೇಕಾದಲ್ಲಿ ಒಯ್ಯುವಂತಹ ಅವಕಾಶ, ಅತ್ಯುತ್ತಮ ಬ್ಯಾಟರಿ, ಗಲಾಟೆಯ ಪರಿಸರದಲ್ಲೂ ಅದ್ಭುತ ಆಡಿಯೋ ಸ್ಪಷ್ಟತೆ ಹಾಗೂ ವರ್ತಕರಿಗೆ ಕಿಕ್ಕಿರಿದ ಕೌಂಟರ್‌ಗಳಲ್ಲೂ ಸಲೀಸಾಗಿ ಇಟ್ಟುಕೊಳ್ಳಲು ಸಾಧ್ಯವಾಗುವಂತೆ ಪುಟ್ಟ ಗಾತ್ರ ಮತ್ತು ಬಹುಮುಖ ರೂಪದ ಅಂಶಗಳ ಜೊತೆಗೆ PhonePe ಸ್ಮಾರ್ಟ್‌ಸ್ಪೀಕರ್‌ಗಳ ಕೆಲವು ಫೀಚರ್‌ಗಳು ಮಾರುಕಟ್ಟೆಯಲ್ಲಿ ಇದನ್ನು ಅನನ್ಯವಾಗಿಸಿದವು. ಈ ಹಿಂದೆ ಫೀಚರ್‌ ಫೋನ್‌ಗಳನ್ನು ಬಳಸುತ್ತಿದ್ದ ವರ್ತಕರು SMS ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದರು, ಆದರೆ ಈಗ PhonePe ಸ್ಮಾರ್ಟ್‌ಸ್ಪೀಕರ್‌ಗಳೊಂದಿಗೆ, ಅವರ ಪಾವತಿ ದೃಢೀಕರಣ ಅನುಭವವು ತುಂಬಾ ಸಲೀಸಾಗಿದೆ. PhonePe ಸ್ಮಾರ್ಟ್‌ಸ್ಪೀಕರ್‌ಗಳು 4 ದಿನಗಳ ಬ್ಯಾಟರಿ ಬಾಳಿಕೆ, ಡೇಟಾ ಕನೆಕ್ಟಿವಿಟಿ, ಸುಲಭ ಬಳಕೆಗಾಗಿ ಪ್ರತ್ಯೇಕ ಬ್ಯಾಟರಿ ಮಟ್ಟದ ಎಲ್‌ಇಡಿ ಇಂಡಿಕೇಟರ್‌, ಬ್ಯಾಟರಿ ಮಟ್ಟ ಕುಸಿದಾಗ ಆಡಿಯೋ ಅಲರ್ಟ್‌ಗಳು ಹಾಗೂ ಹಿಂದಿನ ವಹಿವಾಟಿನ ರಿಪ್ಲೇ ಬಟನ್‌ನೊಂದಿಗೆ ಲಭ್ಯ ಇವೆ.

Leave a Reply

Your email address will not be published. Required fields are marked *