ಸರಗೂರು:16 ನವೆಂಬರ್ 2021
ನಂದಿನಿ ಮೈಸೂರು
ಸರಗೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನ್ಯೂಮೋ ಕಾಕಲ್ ಕಾಂಜುಗೇಟ್ (ಪಿ ಸಿ ವಿ) ನ್ಯುಮೋನಿಯಾ ಲಸಿಕೆ ಕಾರ್ಯ ಕ್ರಮವನ್ನೂ ಏರ್ಪಡಿಸಲಾಗಿತ್ತು.
ಈ ಕಾರ್ಯ ಕ್ರಮದಲ್ಲಿ ಮಾನ್ಯ ತಹಶೀಲ್ದಾರ ಚಲುವರಾಜು ತಾಲೂಕ್ ಆರೋಗ್ಯಾಧಿಕಾರಿ ಗಳಾದ ಡಾ” ಟಿ.ರವಿಕುಮಾರ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಕಾರ್ಯ ಕ್ರಮದಲ್ಲಿ ತಾಲೂಕ್ ಆರೋಗ್ಯಾಧಿಕಾರಿಗಳು ನ್ಯುಮೋ ಕಾಕಲ್ ಕಾಂಜುಗೇಟ್ ( ಪಿ ಸಿ ವಿ) ನ್ಯು ಮೋನಿಯ ಲಸಿಕೆಯು ಬಹಳ ಮುಖ್ಯವಾದ ಲಸಿಕೆ ಆಗಿದೆ .ಈ ಲಸಿಕೆ ಯನ್ನು ಕರ್ನಾಟಕ ಸರ್ಕಾರ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಿದ್ದು ಎಲ್ಲಾ ಪೋಷಕರು 6 ವಾರ,14 ವಾರ,9ತಿಂಗಳ ವಯಸ್ಸಿ ನ ಮಕ್ಕಳಿಗೆ ತಪ್ಪದೇ ಈ ಲಸಿಕೆಯನ್ನು ಹಾಕಿಸಬೇಕು, ಈ ಲಸಿಕೆಯಿಂದ ಮಕ್ಕಳಿಗೆ ಬರುವ ಪಕ್ಕೆಲುಬು, ಉಸಿರಾಟದ ತೊಂದರೆ ಮತ್ತು ಕೆಮ್ಮು ನಿಮೋನಿಯಾ ಈ ರೋಗವನ್ನು ತಡೆಯುತ್ತದೆ. ಈ ಲಸಿಕೆ ಇಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಹಾಗೂ ಉಚಿತವಾಗಿ ಸಿಗುವುದರಿಂದ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಹಾಕಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
UNiCF ಮುಖ್ಯಸ್ಥರು ಡಾ” ರವೀಶ್ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಗಳಾದ ಡಾ”ಪಾರ್ಥಸಾರತಿ ಹಾಗೂ ತಾಲೂಕು ಮಟ್ಟದ ಸಿಬ್ಬಂದಿ ವರ್ಗದವರಾದ ನಾಗೇಂದ್ರ, ರವಿರಾಜ್, ಸರಳ, ಪ್ರತಾಪ್, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಾಗಿದ್ದರು.