ಹುಣಸೂರು:6 ಜೂನ್ 2022
ದಾರಾ ಮಹೇಶ್
ಪರಿಸರ ನಾಶದಿಂದಾಗಿ ಯಥೇಚ್ಛವಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಮನುಷ್ಯ ಈಗಲಾದರೂ ಗಂಭೀರತೆ ಯನ್ನು ಅರಿತು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗ ಬೇಕು ಎಂದು ದೊಡ್ಡಹೇಜ್ಜೂರು ಗ್ರಾಂ ಪಂ ಅಧ್ಯಕ್ಷ ಶಿವಶಂಕರ್ ಹೇಳಿದರು.
ದೊಡ್ಡಹೇಜ್ಜೂರು ಪ್ರೌಢಶಾಲೆ ಆವರಣದಲ್ಲಿ ವಿಶ್ವಪರಿಸರ ದಿನಾಚಣೆಯ ಅಂಗ ವಾಗಿ ಪ್ರೌಢಶಾಲೆ ದೊಡ್ಡಹೆಜ್ಜೂರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜೊತೆಗೂಡಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ನೀರೆರೆದು ಅವರು ಮಾತನಾಡಿದರು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ವಾತಾವರಣವನ್ನು ಕೊಡುಗೆಯಾಗ
ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಪ್ಲಾಸ್ಟಿಕ್ ಬಳಕೆ ಯನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ ಕೆ ರಮೇಶ್ ಮಾತನಾಡಿ, ಮನುಷ್ಯನ ಸ್ವಾರ್ಥ ಗುಣದಿಂದಾಗಿ ಗಿಡ-ಮರಗಳನ್ನು ಕಡಿದು ಪರಿಸರ ನಾಶಕ್ಕೆ ಕಾರಣರಾಗುತ್ತಿ ದ್ದಾನೆ. ಕಳೆದ 2 ವರ್ಷಗಳ ಹಿಂದೆ ಕೊರೊನಾ ಮಹಾಮಾರಿ ಪರಿಸರ ಸಂರಕ್ಷಣೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟುಹೋಗಿದೆ ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪರಿಸರ ಸಂರಕ್ಷಣೆಗೆ ಸನ್ನದ್ಧರಾಗಬೇಕು ಎಂದರು.
ಕಾರ್ಯ ಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಮೇಲ್ವಿಚಾರಕಿ ಪುಷ್ಪಲತಾ ಕೃಷಿ ಅಧಿಕಾರಿ ಚಂದ್ರಪ್ರಭ ತಾ ಪಂ ಮಾಜಿ ಸದಸ್ಯೆ ಸುಂದ್ರಮ್ಮ ಗ್ರಾಂ ಪಂ ಸದಸ್ಯೆ ಲತಾಮಣಿ ಶಿಕ್ಷಕರಾದ ರಮೇಶ್ ಕುಮಾರ್ ವೀರಣ್ಣ ಕರಡಿ ವಿಜಯ್ ಸಾವಿತ್ರಿ ನವೀನ್ ಶಂಭುಗೌಡ ಸಲಹೆಭಾನು ಸೇರಿದಂತೆ ಇತರರು ಇದ್ದರು.