ಮೈಸೂರು :5 ಜೂನ್ 2022
ನಂದಿನಿ ಮೈಸೂರು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ಪರಿಸರ ಸಂರಕ್ಷಣೆಗಾಗಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು.
ಮೈಸೂರಿನ ಅರಮನೆ ಮುಂಭಾಗ ಆಯೋಜಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ
ದೇವರಾಜ ಭೂತೆ ಚಾಲನೆ ನೀಡಿದರು.
ಸೈಕಲ್ ಜಾಥವು ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭಗೊಂಡು ಟೌನ್ ಹಾಲ್, ಗಾಂಧಿ ವೃತ್ತ, ಮೆಕ್ಕಾಜಿ ಚೌಕ, ಆಯುರ್ವೇದ ಆಸ್ಪತ್ರೆ ವೃತ್ತ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಕೊನೆಗೊಂಡಿತು.
ಕಾರ್ಯಕ್ರಮದಲ್ಲಿ ಪರಿಸರವಾದಿಗಳಾದ ಪ್ರೊ. ರವಿಕುಮಾರ್, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಕಾರ್ಯಾದರ್ಶಿ , ಶ್ರೀಮತಿ ಸರಸ್ವತಿ ನಿರ್ದೇಶಕರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಪ್ರೊ.ಜೋಸ್ ವಿ.ಕೆ.,
ಕು. ಶಾಲಿನಿ ಯುವಜನರ ಪ್ರತಿನಿಧಿ, ಸಂಸ್ಥೆಯ ಸಿಬ್ಬಂದಿಗಳು, 80ಕ್ಕೂ ಹೆಚ್ಚು ಯುವಜನರು ಭಾಗವಹಿಸಿದ್ದರು.