ನಂದಿನಿ ಮೈಸೂರು
ಸುವರ್ಣ ಮಹೋತ್ಸವ ಆಚರಣೆ ಅಂಗವಾಗಿ ಕಾಲೇಜಿನ ಇತಿಹಾಸದಲ್ಲಿ ಮೊದಲ ಬಾರಿಗೆ
ಮೈಸೂರಿನ ಜೆಎಸ್ ಎಸ್ ಫಾರ್ಮಸಿ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ ನಡೆಯಿತು.
ಬನ್ನಿಮಂಟಪದಲ್ಲಿರುವ ಜೆ ಎಸ್ ಎಸ್ ವೈದ್ಯಕೀಯ ಕಾಲೇಜಿನ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ
ಅಹ್ಮದಾಬಾದ್ ನ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಶೈಲೇಂದ್ರ ಸರಾಫ್,ಜೆ ಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ ಬೆಟಸೂರಮಠ್ ,ಜೆ ಎಸ್ ಎಸ್ ಎಎಚ್ ಇ ಆರ್ ಕುಲಪತಿ ಡಾ.ಸುರಿಂದರ್ ಸಿಂಗ್ ,ಪರೀಕ್ಷಾ ನಿಯಂತ್ರಕ ಡಾ.ಆರ್ .ಸುಧೀಂದ್ರ ಭಟ್ ,ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಎಂ.ಪ್ರಮೋದ್ ,ಉಪಪ್ರಾಂಶುಪಾಲ ಡಾ.ಜೆ.ವಿ.ಪೂಜಾರ್ ರವರು ಪದವಿ ವಿತರಿಸಿದರು.
2022-23 ಸಾಲಿನಲ್ಲಿ ಬಿ.ಫಾರ್ಮ್( 87) ,ಫಾರ್ಮ್ ಡಿ (40) ,ಡಿ.ಫಾರ್ಮ್( 54) ಮತ್ತು ಎಂ.ಫಾರ್ಮ್ (90) ಎಂಬ ವಿವಿಧ ಪದವಿಗಳಿಗೆ 271 ಪದವೀಧರರು ವೈಯಕ್ತಿಕವಾಗಿ ಪದವಿ ಪ್ರಮಾಣಪತ್ರ ಸ್ವೀಕರಿಸಿದರು.