ನಂದಿನಿ ಮೈಸೂರು
ಕಪ್ಪು ಕಸ್ತೂರಿ ಎಂಬಂತೆ ಕತ್ತು ಹಾಗೂ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೇರಳದಿಂದ ಮೈಸೂರಿಗೆ ಬಂದಿಳಿದ ಜಮ್ನಾ ಪುರಿ ಕುರಿ ಗ್ರಾಹಕರ ಗಮನ ಸೆಳೆಯುತ್ತಿದ್ದರೇ ಮತ್ತೊಂದು ಕಡೆ ಬನ್ನೂರು ಕುರಿಗಳು ಕಣ್ಣಲ್ಲೇ ಗ್ರಾಹಕರನ್ನ ಆಕರ್ಷಿಸುತ್ತಿತ್ತು.
ಬೆಳಗಾದ್ರೇ ಸಾಕು ಮುಸ್ಲಿಂಮರಿಗೆ ಬಕ್ರೀದ್ ಹಬ್ಬದ ಸಂಭ್ರಮ. ಬಕ್ರಿದ್ ಹಬ್ಬಕ್ಕೆ ಪ್ರಮುಖ ಆಕರ್ಷಣೆ ಕುರಿಗಳು. ಬಕ್ರಿದ್ ಹಬ್ಬಕ್ಕಾಗಿ ಮೈಸೂರಿನಲ್ಲಿ ಕುರಿಗಳ ಮಾರಾಟ ಜೋರಾಗಿತ್ತು,ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಎಲ್‌ಐಸಿ ಸರ್ಕಲ್ ನಲ್ಲಿ ಕುರಿಗಳ ಜಾತ್ರೆಯಾಗಿ ಮಾರ್ಪಟ್ಟಿತ್ತು.ವಿವಿಧ ತಳಿಗಳ ನೂರಾರು ಕುರಿಗಳನ್ನು ವೃತ್ತದ ಸುತ್ತಲೂ ಮತ್ತು ಟಾರ್ಚ್‌ಲೈಟ್ ಬಳಿಯ ಖಾಲಿ ಜಾಗಗಳಲ್ಲಿ ಕಟ್ಟಲಾಗಿತ್ತು.
ಬನ್ನೂರು,ಕಿರುಗಾವಾಲು,ಅಮಿನ್ ಘಡ್, ಪಾಂಡವಪುರ,ಮಂಡ್ಯ ,ಶ್ರೀರಂಗಪಟ್ಟಣ, ಕೆಆರ್ ನಗರ, ಹುಣಸೂರು, ನಂಜನಗೂಡು, ಮಳವಳ್ಳಿ,ಟಿ.ನರಸೀಪುರ ಸೇರಿದಂತೆ ಹಳ್ಳಿ ಹಳ್ಳಿಗಳಿಂದ ಕುರಿಗಳನ್ನು ತಂದು ಮಾರಾಟ ಮಾಡಲಾಗುತ್ತಿತ್ತು.ಈ ಬಾರೀ ಒಂದು ಕುರಿಗೆ
15 ಸಾವಿರದಿಂದ 70 ಸಾವಿರದವರೆಗೂ ಮಾರಾಟ ವಾಗುತ್ತಿದೆ.ಮುಸ್ಲಿಂರಲ್ಲದೇ
ರೈತರು ಕೂಡ ತಾವು ಸಾಕಿದ ಮರಿಗಳನ್ನ ತಂದು ಮಾರಾಟ ಮಾಡುತ್ತಿದ್ದರು.
ಕೆಲ ಮುಸ್ಲಿಂ ವ್ಯಾಪಾರಿಗಳು ಈ ಬಾರಿ ಕಡಿಮೆ ಮಾರಾಟವಾಗುತ್ತಿದೆ.ರಾತ್ರಿಯವರೆಗೂ ಕಾದು ನೋಡುವ ಪರಿಸ್ಥಿತಿ ಎದುರಾಗಿದೆ.ಕೊನೆಯಲ್ಲಿ ಬಂದ್ರೇ ಕಡಿಮೆ ಬೆಲೆ ಮಾರಾಟ ಮಾಡುತ್ತಾರೆ ಎಂದು ಕೆಲವರೂ ರಾತ್ರಿ ಬಂದು ಕುರಿಗಳನ್ನ ಕೊಂಡೊಯ್ಯುತ್ತಾರೆ ವ್ಯಾಪಾರ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೆ ಕೆಲವರು ರೈತರು ಮಾತನಾಡಿ ಈ ಬಾರಿ ಉತ್ತಮವಾಗಿ ಮಾರಾಟವಾಗುತ್ತಿದೇ ಆದರೇ ಜನ ಕಡಿಮೆ ಬೆಲೆಗೆ ಕುರಿಗಳನ್ನ ಕೇಳುತ್ತಿದ್ದಾರೆ.ವ್ಯಾಪಾರ ಚನ್ನಾಗಿದೆ ಆದರೇ ಬೇಡಿಕೆ ಕಡಿಮೆ ಇದೆ ಯಾಕಂದರೇ ಸರ್ಕಾರ ಗೋ ಹತ್ಯೆ ಕಾಯ್ದೆ ವಾಪಾಸ್ ಪಡೆದ ಹಿನ್ನಲೆ ಮುಸ್ಲಿಂರೂ ದನ ಕೊಂಡುಕೊಳ್ಳರು ಹೋಗುತ್ತಿದ್ದಾರೆ.ಎರಡು ಮೂರು ಕುರಿ ಬದಲು ಒಂದು ದನ ಕೊಂಡರೇ ಸಾಕು ಎಂದು ಕುರಿ ಕೊಳ್ಳಲು ಯಾರು ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ ಎಂದು ರೈತರು ತಿಳಿಸಿದರು.
ಇಸ್ಲಾಂ ಧರ್ಮವನ್ನು ನಂಬುವ ಜನರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬವನ್ನು ತ್ಯಾಗದ ಸಂಕೇತವೆಂದು ಆಚರಿಸಲಾಗುತ್ತದೆ. ಇತ್ತೀಚೆಗಷ್ಟೇ ಝಿಲ್ಹಿಜ್ ತಿಂಗಳ ಚಂದ್ರ ದರ್ಶನವಾಗಿದ್ದು, ಇದೀಗ ಬಕ್ರೀದ್ ದಿನವು ಆಚರಣೆಗೆ ಬಂದಿದೆ . ಈ ವರ್ಷ, ಈದ್ ಉಲ್-ಅಧಾ ಅಂದರೆ ಬಕ್ರೀದ್ ಹಬ್ಬವನ್ನು 2023 ರ ಜೂನ್ 29 ರಂದು ಗುರುವಾರ ಆಚರಿಸಲಾಗುವುದು.
ಬಕ್ರೀದ್ ಮುಸ್ಲಿಂ ಸಹೋದರರಿಗೆ ತ್ಯಾಗದ ಹಬ್ಬವಾಗಿದೆ, ಈದ್-ಉಲ್-ಜುಹಾ (ಅರೇಬಿಕ್) ಮತ್ತು ಭಾರತದಲ್ಲಿ ಬಕ್ರೀದ್ ಅನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಇದು ಮುಸ್ಲಿಂ ತಿಂಗಳ ಜುಲ್-ಹಿಜ್ಜಾದ 10 ನೇ ದಿನದಂದು ಬರುತ್ತದೆ. ಈ ದಿನದಂದು ಮುಸ್ಲಿಮರು ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸಲು ಒಂದು ಮೇಕೆ ಅಥವಾ ಕುರಿಯನ್ನು ಬಲಿ ನೀಡುತ್ತಾರೆ, ಅವರು ದೇವರ ಆಜ್ಞೆಯ ಮೇರೆಗೆ ತನ್ನ ಮಗನನ್ನು ಕೊಲ್ಲಲು ಒಪ್ಪಿಗೆ ನೀಡಿದರು. ಆದರೆ ದೇವರ ಮೇಲಿನ ಭಕ್ತಿಯಿಂದಾಗಿ, ಅವನ ಮಗನನ್ನು ಉಳಿಸಲಾಯಿತು ಮತ್ತು ಬದಲಿಗೆ ಒಂದು ಮೇಕೆಯನ್ನು ಬಲಿ ನೀಡಲಾಯಿತು.
ಈ ಹಬ್ಬದಂದು ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ ಮತ್ತು ಐದ್ ಪ್ರಾರ್ಥನೆಯ ನಂತರ ತ್ಯಾಗದ ಮಾಂಸವನ್ನು ವಿತರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮೂರು ಭಾಗ ಮಾಡಲಾಗುತ್ತದೆ.ಒಂದು ಬಡವರಿಗೆ ಎರಡನೇಯದು ಕುಟುಂಬ ಮತ್ತು ಸ್ನೇಹಿತರಿಗೆ ಮೂರನೇಯದು ತಮ್ಮ ಮನೆಗೆ ಮಾಂಸ ವಿತರಿಸಲಾಗುತ್ತದೆ.ಬಕ್ರಿದ್ ಹಬ್ಬದಲ್ಲಿ ವಿಶೇಷವಾಗಿ ಭಕ್ಷ್ಯಗಳನ್ನು ತಯಾರಿಸಿ ಬಡಿಸಲಾಗುತ್ತದೆ.
ಈ ಸಂದರ್ಭದಲ್ಲಿ ದಾನ ಮಾಡುವುದು ಮತ್ತು ಬಡವರಿಗೆ ಅನ್ನ ನೀಡುವುದು ಸಹ ಮುಸ್ಲಿಂ ಸಂಪ್ರದಾಯದ ಒಂದು ಭಾಗವಾಗಿದೆ.