ಮೈಸೂರು:11 ಜೂನ್ 2022
ನಂದಿನಿ ಮೈಸೂರು
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರರು ಬಿಜೆಪಿ ಪಕ್ಷದ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮನವಿ ಮಾಡಿದೆ.
ಬಿಜೆಪಿ ಪಕ್ಷ ಪದವಿಧರರಿಗೆ ಬಹಳ ಮೋಸ , ವಂಚನೆ , ನಂಬಿಕೆ ದೋಹ ಮಾಡಿದೆ , ಹಾಗೂ ನಿರುದ್ಯೋಗ ಸಮಸ್ಯೆ ಬಹಳ ಉಲ್ಬಣಗೊಂಡಿದೆ . ಪದವೀದರರು ಉದ್ಯೋಗವಿಲ್ಲದೆ ಅಲೆಯುತ್ತಿದ್ದಾರೆ . ಅವರ ಬದುಕು ಬೀದಿಗೆ ಬಿದ್ದಿದೆ . ಅಲ್ಲದೆ ಇತ್ತೀಚೆಗೆ ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದು ಪದವೀಧರ ಅಭ್ಯರ್ಥಿಗಳಿಗೆ ಬಹಳ ಅನ್ಯಾಯವಾಗಿದೆ . ಪ್ರಕರಣದಿಂದ ಸಾವಿರಾರು ಪದವೀಧರ ಅಭ್ಯರ್ಥಿಗಳ ಬದುಕು ಮೂರಾಬಟ್ಟೆಯಾಗಿದೆ . ಈ ಪ್ರಕರಣವನ್ನು ಬಿಜೆಪಿ ಪಕ್ಷದ ನೇತೃತ್ವದ ಸರ್ಕಾರ ಪಾರದರ್ಶಕವಾಗಿ ನಿರ್ವಹಿಸಿದ್ದಾರೆ ಯಾರನ್ನೋ ರಕ್ಷಣೆ ಮಾಡಲು ಇಡೀ ಪ್ರಕರಣವನ್ನು ಹಳ್ಳಹಿಡಿಸಿದ್ದಾರೆ . ಆ ಮೂಲಕ ಪ್ರತಿಭಾವಂತ ಅಭ್ಯರ್ಥಿಗಳನ್ನು ಸರ್ಕಾರ ವಂಚಿಸಿದೆ . ಇಷ್ಟು ಬೃಹತ್ ಹಗರಣವಾಗಿದ್ದರೂ ಸರ್ಕಾರದ ಸಂಬಂಧಪಟ್ಟ ಸಚಿವರು ಹಾಗೂ ಉನ್ನತ ಅಧಿಕ DI ಗಳು ಒಬ್ಬರೂ ರಾಜಿನಾಮೆ ನೀಡಿಲ್ಲ . ಸಣ್ಣಪಟ್ಟ ಅಧಿಕಾರಿಗಳನ್ನು ಬಂಧಿಸಿ ಪದವೀಧರರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಸರ್ಕಾರ ಮಾಡಿದೆ . ಇದು ಸರ್ಕಾರ ಪದವೀಧರರಿಗೆ ಮಾಡಿದ ಮಹಾವಂಚನೆ , ನಂಬಿಕೆ ದೋಹ , ಆದ್ದರಿಂದ
ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ರವರನ್ನು ಈ ಬಾರಿ ಬೆಂಬಲಿಸಿ. ಬಿಜೆಪಿ ಅಭ್ಯರ್ಥಿ ವಿರುದ್ಧ ಮತ ಚಲಾಯಿಸುವ ಮೂಲಕ ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕೆಂದು ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮು ಮನವಿ ಮಾಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಚ್.ಎಸ್ ಪ್ರಕಾಶ್,ಲೋಕೇಶ್ ಕುಮಾರ್ ಮಾದಾಪುರ,ಯೋಗೇಶ್ ಉಪ್ಪಾರ ಹಾಜರಿದ್ದರು.