ಮೈಸೂರು:17 ಜನವರಿ 2022
ನಂದಿನಿ ಮೈಸೂರು
ಮತಾಂಧ ಹಾಗೂ ಜಾತಿವಾದಿಗಳ ಪುಂಡಾಟಿಕೆಗೆ ಅವಕಾಶ ಮಾಡಿಕೊಡುವ, ವಂಚಕ ಜಾತಿಪದ್ದತಿಯನ್ನು ಮುಂದುವರೆಸಲಿರುವ ಸಂವಿಧಾನ ವಿರೋಧಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ವಿಧೇಯಕವನ್ನು ವಾಪಾಸು ಪಡೆಯಲು ಒತ್ತಾಯಿಸಿ ಇಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ CPI(M) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಎನ್.ವಿಜಯ್ಕುಮಾರ್,ಸ್ಥಳೀಯ ಸಮಿತಿ ಕಾರ್ಯದರ್ಶಿ ಜಿ.ರಾಜೇಂದ್ರ ಹಾಗೂ ವಿಜಯ್ ಕುಮಾರ್ ಇದ್ದರು..