ಮೈಸೂರು:26 ಮಾರ್ಚ್ 2022
ನಂದಿನಿ ಮೈಸೂರು
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಹಿಂದೂ ಸಂಪ್ರದಾಯದ ನೂತನ ವರ್ಷಾಚರಣೆಯಾದ ಚಾಂದ್ರಮಾನ ಯುಗಾದಿ ಶುಭಕೃನ್ನಾಮ ಸಂವತ್ಸರದ ಹಬ್ಬವನ್ನು ಸ್ವಾಗತಿಸಿ
ಮನೆ ಮನೆಗೆ ಒಂಟಿಕೊಪ್ಪಲ್ ಪಂಚಾಂಗ ಅಭಿಯಾನಕ್ಕೆ ಒಂಟಿ ಕೊಪ್ಪಲಿನಲ್ಲಿರುವ ಆಂಡಾಳ್ ಮಂದಿರದಲ್ಲಿ ಶಾಸಕರಾದ ಎಲ್ ನಾಗೇಂದ್ರ ರವರು ಚಾಲನೆ ನೀಡಿದರು.
ಒಂಟಿಕೊಪ್ಪಲಿನಲ್ಲಿರುವ ಆಂಡಾಳ್ ಮಂದಿರದಲ್ಲಿ 250ಕ್ಕೂ ಹೆಚ್ಚು ಮಂದಿ ಬ್ರಾಹ್ಮಣ ಸಮುದಾಯದವರಿಗೆ ಪಂಚಾಂಗವನ್ನ ಬ್ರಾಹ್ಮಣ ಯುವ ವೇದಿಕೆಯ ಕಾರ್ಯಕರ್ತರು ನೀಡಿ ಹಿಂದೂ ಧಾರ್ಮಿಕ ಹಬ್ಬಗಳ ಆಚರಣೆಯನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು,
ನಂತರ ಶಾಸಕರಾದ ಎಲ್ ನಾಗೇಂದ್ರ ರವರು ಮಾತನಾಡಿ ಭೂಮಿಯಲ್ಲಿ ನಡೆಯುವ ಪರಿಸರ ಬದಲಾವಣೆಯನ್ನು ತಿಳಿಸುವುದೇ ಪಂಚಾಂಗ, ಹಿಂದೂ ಸಮಾಜದ ಎಲ್ಲರೂ ಪಂಚಾಂಗದ ಆಧಾರದ ಮೇರೆಗೆ ಶುಭಕಾರ್ಯಗಳನ್ನ ನಿಗಧಿಪಡಿಸಲಾಗುವುದು, ಗ್ರಹಣಗಳು ಗೋಚರಿಸುವ ಮುನ್ನವೇ ತಿಳಿಸುವ ಶಕ್ತಿ ಪಂಚಗದ ಮೂಹರ್ತಕ್ಕಿದೆ ಇದು ವೈಜ್ಞಾನಿಕವಾಗಿಯೂ ಧೃಡಿಕರಿಸಿದೆ, ಯುಗಾದಿ ವರ್ಷಾಚರಣೆ ಬೇವುಬೆಲ್ಲವು ಕಹಿಸಿಹಿಯ ಸಂಕೇತ ಕಷ್ಟಸುಖಗಳ ಸಮಬಾಳಿನ ಜೀವನವನ್ನು ಸರಿಯಾದ ಸಂಧರ್ಭದಲ್ಲಿ ನಡೆಸಬೇಕಾದರೆ ಪಾಂಚಾಂಗದ ನಿರ್ಧಾರ ಮುಖ್ಯವಾಗುತ್ತದೆ, ಸಂವತ್ಸರ ಮಾಸ, ತಿಥಿ ನಕ್ಷತ್ರ ರಾಶಿಯ ಕಾಲದ ಘಳಿಗೆಯ ಮಾಹಿತಿ ಮೊದಲು ತಿಳಿದುಕೊಳ್ಳಬಹುದು, ಭಾರತದ ಇತಿಹಾಸದ ಕೆಲವು ವಿಷಯಗಳು ಪಂಚಾಂಗದಲ್ಲಿ ಮಾಹಿತಿ ನೀಡುತ್ತದೆ ಎಂದರು
ಇತಿಹಾಸ ವಿಶ್ಲೇಷಕರಾದ ಮೇಲುಕೋಟೆ ವಿದ್ವಾಂಸರಾದ ಡಾ ಶೆಲ್ವಪಿಲೈ ಅಯ್ಯಂಗಾರ್ ಮಾತನಾಡಿ ಒಂಟಿಕೊಪ್ಪಲ್ ಪಂಚಾಂಗವೂ ದೇಶವಿದೇಶಗಳಲ್ಲಿ ಜನಪ್ರಿಯವಾಗಿರುವುದು ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದೆ, ಧಾರ್ಮಿಕ ಸಂಪ್ರಾದಯವನ್ನು ಪರಿಪಾಲಿಸುವವರು ಪಂಚಾಂಗದ ಮಾಹಿತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು,
ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ರವರು
ಮಾತನಾಡಿ ಸಮಾಜದಲ್ಲಿ ಯಾವುದೇ ಶುಭಕಾರ್ಯಗಳ ದಿನಾಂಕಗಳು ನಿಗಧಿಯಾಗುವುದೇ ಪಂಚಾಂಗದ ಆಧಾರಿತದ ಮೇಲೆ, ಇಂದ್ರಾಗ್ನಿವರುಣನ ಕಾಲ ಅಂದರೆ ಮಳೆಬೇಸಿಗೆ ಚಳಿಗಾಲದ ಸ್ಥಿತಿಗತಿಯ ಸೂಕ್ಷ್ಮ ಮೊದಲೇ ತಿಳಿಯುವ ಶಕ್ತಿ ಪಂಚಾಂಗಕ್ಕಿದೆ ಎಂದರೆ ಪೂರ್ವಿಕರ ಪುಣ್ಯ, ಪ್ರತಿಯೊಬ್ಬ ಹಿಂದೂಗಳು ಮನೆಯಲ್ಲಿ ಪಂಚಾಂಗ ಓದಲು ಮುಂದಾದರೆ ನಮ್ಮ ಹಿಂದೂ ಸನಾತನ ಧರ್ಮ ಬೆಳೆಯುತ್ತದೆ, ಧಾರ್ಮಿಕ ಆಧ್ಯಾತ್ಮ ಕ್ಷೇತ್ರವಲ್ಲದೇ ಶುಭಸಮಾರಂಭದ ಘಳಿಗೆ ಮುಹೂರ್ತ ತಿಳಿಸುವ ಒಂಟಿಕೊಪ್ಪಲ್ ಪಂಚಾಂಗ ನೂರಾರು ವರ್ಷಗಳಿಂದ ಶ್ರಮಿಸುತ್ತಿರುವ ರಾಮಕೃಷ್ಣ ಶಾಸ್ತ್ರಿ ಹಾದಿಯಾಗಿ ಅವರ ಪುತ್ರ ಕುಮಾರ್ ಶಾಸ್ತ್ರಿ ರವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಮಾತನಾಡಿ
ಪಠ್ಯಪುಸ್ತಕದ ಭೋದನೆ ಕಲಿಕೆ ವಿಷಯದಲ್ಲಿ ಭಗವದ್ಗೀತೆ ನಿರ್ಣಯ ಶ್ಲಾಘನೀಯ,
ಗುಜರಾತ್ ಸರ್ಕಾರ ಶಾಲಾ ಪಠ್ಯದಲ್ಲಿ 2022-23ನೇ ಸಾಲಿನಿಂದ 6ರಿಂದ 12ನೆ ತರಗತಿಯವರೆಗೆ ಭಗವದ್ಗೀತೆಯನ್ನು ಕಡ್ಡಾಯಗೊಳಿಸಿದೆ. ಕರ್ನಾಟಕವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಇನ್ನೂ ಕೆಲವು ರಾಜ್ಯಗಳು ಇಂಥದೇ ಕ್ರಮ ತೆಗೆದುಕೊಳ್ಳಬಹುದು. ಈ ಕ್ರಮ ಬಹು ಹಿಂದೆಯೇ ಆಗಬೇಕಾಗಿದ್ದು, ತಡವಾದರೂ ಈಗ ಆಗುತ್ತಿರುವದು ಶ್ಲಾಘನೀಯ. ಇದೇ ರೀತಿ ರಾಮಾಯಣ, ಮಹಾಭಾರತ, ತೆನಾಲಿ ರಾಮಕೃಷ್ಣನ ಕಥೆಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದರು
ಇದೇ ಸಂದರ್ಭದಲ್ಲಿ ಶಾಸಕರಾದ ಎಲ್ ನಾಗೇಂದ್ರ , ಬಿಜೆಪಿ ಪ್ರಭಾರಿ ಮೈವಿ. ರವಿಶಂಕರ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ,ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ , ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಸಿವಿ.ಗೋಪಿನಾಥ್, ಧಾರ್ಮಿಕ ಮುಖಂಡರಾದ ಡಾ. ಶೆಲ್ವಪಿಲೈ ಅಯ್ಯಂಗಾರ್ , ಅರ್ಚಕ ಪುರೋಹಿತ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ,ಬೃಂದಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ಗುರುಮೂರ್ತಿ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ,
ಯೋಗಾನರಸಿಂಹ (ಮುರುಳಿ),
ಕೃಷ್ಣ ಧಾಮ ಉಪಾಧ್ಯಕ್ಷ ಮೋಹನ್ ಭಟ್, ಅಶ್ವತ್ಥ್ ನಾರಾಯಣ್ ,
ಒಂಟಿಕೊಪ್ಪಲ್ ಶ್ರೀನಿವಾಸ ದೇವಸ್ಥಾನದ ಅರ್ಚಕರಾದ ಸತ್ಯನಾರಾಯಣ್, ರಾಮಾನುಜ ಸಮಿತಿ ಪುಟ್ಟಸ್ವಾಮಿ , ಪಂಕಜ್ ,ವಿನಯ್ ಕಣಗಾಲ್ ,ವಿಜಯ್ ಕುಮಾರ್, ರಂಗನಾಥ್, ಸುಚೀಂದ್ರ, ಚಕ್ರಪಾಣಿ,ಪ್ರಶಾಂತ್ , ಹಾಗೂ ಇನ್ನಿತರರು ಹಾಜರಿದ್ದರು..