ಚಾಮುಂಡಿ ಬೆಟ್ಟದಲ್ಲಿ ಮುಸ್ಲಿಮರು ಅಂಗಡಿ ನಡೆಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ

ಮೈಸೂರು:26 ಮಾರ್ಚ್ 2022

ನಂದಿನಿ ಮೈಸೂರು

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಸ್ಥಾನಗಳಲ್ಲಿ ಜಾತ್ರಾ ಮಹೋತ್ಸವದಲ್ಲ ಅಂಗಡಿ ಮುಗ್ಗಟ್ಟು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಹಿಂದುಯೇತರರಿಗೆ ಅವಕಾಶ ನೀಡದಿರುವ ಬಗ್ಗೆ ಮತ್ತು ಮೈಸೂರು ಚಾಮುಂಡಿ ಬೆಟ್ಟ ದೇವಸ್ಥಾನದಲ್ಲಿ ಮುಸ್ಲಿಮರು ಅಂಗಡಿ ನಡೆಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ಮನವಿ ಸಲ್ಲಿಸಿದರು.

 

ನಾಂಾಾಂಾಂಾಾಾಂಾಾಂಾಂಾಾಂಾಾಂಾಂಾಂಾಾ

ವಿಶ್ವ ಹಿಂದೂ ಪರಿಷದ್ ಮೈಸೂರು ಜಿಲ್ಲಾ ಕಾರ್ಯದರ್ಶಿ ಪ್ರಧೀಶ್ ರವರು ಯತೀ ರಾಜ್
ಕಾರ್ಯನಿರ್ವಾಹಕ ಅಧಿಕಾರಿಗಳು ಮುಜರಾಯಿ ಇಲಾಖೆ ರವರಿಗೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಸ್ಥಾನಗಳಲ್ಲಿ ಜಾತ್ರಾ ಮಹೋತ್ಸವದಲ್ಲ ಅಂಗಡಿ ಮುಗ್ಗಟ್ಟು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಹಿಂದುಯೇತರರಿಗೆ ಅವಕಾಶ ನೀಡದಿರುವ ಬಗ್ಗೆ ಮತ್ತು ಮೈಸೂರು ಚಾಮುಂಡಿ ಬೆಟ್ಟ ದೇವಸ್ಥಾನದಲ್ಲಿ ಮುಸ್ಲಿಮರು ಅಂಗಡಿ ನಡೆಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾಯ ದತ್ತಿಗಳ ಅಧಿನಿಯಮ 1997 ರ 2002 ರ ನಿಯಮ 31 ( 12 ) ಪ್ರಕಾರ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಸ್ಥಾನದ ಸುತ್ತಮುತ್ತಅನ ಪ್ರದೇಶದಲ್ಲಿ ಹಿಂದುಗಳಲ್ಲಾದವರಿಗೆ ಗುತ್ತಿಗೆಯನ್ನು ನೀಡತಕ್ಕದ್ದಲ್ಲ . ಈ ನಿಯಮದ ಪ್ರಕಾರ ಸ್ಪಷ್ಟವಾಗಿ ಉಲ್ಲೇಖವಿದ್ದ ಕಾರಣ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯೂ ಕೂಡಲೆ ರಾಜ್ಯದ ಎಲ್ಲಾ ದೇವಸ್ಥಾನ ಆಡಳಿತ ಮಂಡಳಿಗೆ ಈ ಆದೇಶವನ್ನು ಹೊರಡಿಸಿ ರಾಜ್ಯದ ಎಲ್ಲಾ ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಸ್ಥಾನಗಳ ಜಾತ್ರಾ ಮಹೋತ್ಸವ ರಥೋಸ್ಥವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂಯೇತರರಿಗೆ ಅವಕಾಶ ಕೊಡಬಾರದೆಂದು ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಹಿಂದುಯೇತರರಿಗೆ ಭಾಗವಹಿಸದಿರಲು ಈ ನಿಯಮದ ಪ್ರಕಾರ ಜಾರಿಗೆ ತರಲು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಆಗ್ರಹ . ಹಿಂದುಗಳು ಶ್ರದ್ಧಾ ಕೇಂದ್ರವಾಗಿರುವ ಮೈಸೂರಿನ ಚಾಮುಂಡಿ ಬೆಟ್ಟದ ದೇವಸ್ಥಾನದ ಹೃದಯ ಭಾಗದಲ್ಲಿ ಬಟ್ಟೆ ಅಂಗಡಿಯೂ ಸೇರಿದಂತೆ ಸುತ್ತಮುತ್ತಅನ ಒಟ್ಟು 5 ಅಂಗಡಿಗಳನ್ನು ಮುಸಲ್ಮಾನರು ನಡೆಸಲು ನೀಡಿರುತ್ತಾರೆ . ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಮುಲಭೂತವಾದಿಗಳು , ಸಂಘಟನೆಗಳು , ದೇಶದ ಸಂವಿಧಾನದ , ಗೌರವಾನ್ವಿತ ಉಚ್ಚನ್ಯಾಯಲಯದ ಆದೇಶ ಪಾಲಸುವುದರಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು , ಬಂದ್ ಮಾಡಿಸುತ್ತಿರುವುದು ಹಿಂದೂ ಸಮಾಜದಲ್ಲಿ ಆತಂಕ ಸೃಷ್ಟಿಮಾಡಿದ್ದು ದೇವಸ್ಥಾನದ ಸುತ್ತಮುತ್ತಲ ಹಿಂದುಗಳ ಸುರಕ್ಷತೆಯ ಬಗ್ಗೆ ಅತಂಕ ವ್ಯಕ್ತವಾಗಿದೆ . ಇಂತಹ ಘಟನೆಗಳು ಹಿಂದು ಆಸ್ತಿಕರ ನಂಬಿಕೆಗೆ ಘಾಸಿಯನ್ನುಂಟುಮಾಡಿದೆ . ಚಾಮುಂಡಿಬೆಟ್ಟದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಸಲ್ಮಾನರಿಗೆ ಮಳಗೆಗಳನ್ನು ನೀಡಿರುವ ಬಗ್ಗೆ ಪರಿಶೀಅಸಿ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಮಾಡಿರುತ್ತಾರೆ.

Leave a Reply

Your email address will not be published. Required fields are marked *