ಹನಗೋಡು (ಮಹೇಶ್)
ಹುಣಸೂರಿನ ರಾಮೇನಹಳ್ಳಿ ಬೆಟ್ಟದ ಮೇಲಿನ ಓಂಕಾರೇಶ್ವರ ಸ್ವಾಮಿ ದೇವಾಲಯ ಶಿವರಾತ್ರಿಗೆ ವಿಶೇಷವಾಗಿ ಅಲಂಕೃತಗೊಂಡಿದೆ.
ಸುಂದರ ಬೆಟ್ಟದ ಮೇಲಿನ ನೆಲೆನಿಂತಿರುವ ಓಂಕಾರೇಶ್ವರ ದೇಗುಲ ಹಲವು ಶತಮಾನಗಳ ಇತಿಹಾಸವಿದೆ . ಕೆಲವು ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ ಸುಮಾರು 426 ಎಕರೆ ಪ್ರದೇಶದ ಅತಿ ಎತ್ತರದ ಸಮತಟ್ಟಾದ ಪ್ರದೇಶದಲ್ಲಿ ನೆಲೆ ನಿಂತಿದೆ .ಈ ದೇವಾಲಯಕ್ಕೆ ತೆರಳಲು ಮೆಟ್ಟಿಲುಗಳನ್ನು ಮತ್ತು ದಾರಿ ನಿರ್ಮಿಸಲಾಗಿದೆ. ಶಿವರಾತ್ರಿ ಹಬ್ಬ ದಂದು ಕಳಸ ಸ್ಥಾಪನೆ ಮಾಡಲಾಗುವುದು .
ಮಾರ್ಚ್ 02 ರಂದು ಬೆಳಿಗ್ಗೆ ಎಂಟರಿಂದ 8 20ಕ್ಕೆ ರಥೋತ್ಸವ ನಡೆಯಲಿದೆ ಅದೇ ದಿನ ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ಜನರು ಇಷ್ಟಾರ್ಥ ಏರಿಸಿದ ನಂತರ ಹರಕೆ ಮುಡಿ ಮತ್ತು ಬಾಯಿಬೀಗ ಇನ್ನಿತರ ಹರಕೆಗಳನ್ನು ತೀರಿಸುತ್ತಾರೆ ಮತ್ತು ಮಧ್ಯಾಹ್ನದಿಂದ ಅನ್ನಸಂತರ್ಪಣೆ ನಡೆಯಲಿದೆ ಫೆ 03 ರಂದು ಪರೋಟ ಉತ್ಸವ ನಡೆಯಲಿದೆ. ಬೆಟ್ಟದ ತಪ್ಪಲಿನಲ್ಲಿ ದೇವರನ್ನು ತೂಗುಯ್ಯಾಲೆ ಇಟ್ಟು ತುಗಲಆಗುವುದು ಮಾ 04 ರಂದು ರಾಮೇನಹಳ್ಳಿ ಗ್ರಾಮದಲ್ಲಿ ದೇವರ ಮೆರವಣಿಗೆ ನಡೆಸಿದ ನಂತರ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.