ಮೈಸೂರು:4 ನವೆಂಬರ್ 2021
ನ@ದಿನಿ
ದೀಪಾವಳಿ ಕೊಡುಗೆ ಎನ್ನುವಂತೆ ಹಬ್ಬದ ಸಂಭ್ರಮದಲ್ಲಿದ್ದ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನ ದರ ಇಳಿಸುವ ಮೂಲಕ ಜನರ ಮನದಲ್ಲಿ ಹರ್ಷ ಮೂಡಿಸಿದೆ.
ನರೇಂದ್ರ ಮೋದಿ ಅಭಿಮಾನಿಗಳು ಇಂದು ನಗರದ ಚಾಮುಂಡಿಪುರಂನ ಪೆಟ್ರೋಲ್ ಬಂಕಿನ ಗ್ರಾಹಕರಿಗೆ ಸಿಹಿ ನೀಡಿ, ಗುಲಾಬಿ ಹೂವಿನೊಂದಿಗೆ ಹಣತೆ ನೀಡಿ ದೀಪಾವಳಿ ಹಬ್ಬಕ್ಕೆ ಶುಭ ಕೋರಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರಕ್ಕೆ ಜೊತೆಯಾಗಿ ರಾಜ್ಯ ಸರ್ಕಾರವೂ ತೆರಿಗೆ ಇಳಿಸಿದ್ದರಿಂದ ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಜಯಘೋಷ ಕೂಗಲಾಯಿತು.
ಈ ಸಂದರ್ಭ ಮಾತನಾಡಿದ ರಾಕೇಶ್ ಭಟ್ “ಕೊರೋನಾದಿಂದ ಬಸವಳಿದಿದ್ದ ದೇಶದ ಜನತೆಗೆ ಇಂಧನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಹಿಂದಿನ ಯುಪಿಎ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದ ತೈಲ ಬಾಂಡ್ ಗೆ ದೊಡ್ಡ ಪ್ರಮಾಣದ ಹಣ ಕಟ್ಟಬೇಕಾದ ಅನಿವಾರ್ಯತೆ ಪ್ರಸ್ತುತ ಸರ್ಕಾರದ ಮೇಲೆರೆಗಿತ್ತು. ಇದೆಲ್ಲದರ ನಡುವೆ 100 ಕೋಟಿ ಕೊರೋನಾ ಲಸಿಕೆ ವಿತರಣೆ, ತುರ್ತಾಗಿ ದೇಶದಾದ್ಯಂತ ಅಮ್ಲಜನಕ ಘಟಕಗಳನ್ನು ಸ್ಥಾಪಿಸಿ ಜನರ ಜೀವ ಉಳಿಸುವತ್ತ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತ್ತು. ಈಗ ಇಂಧನ ದರ ಇಳಿಸಿ ತನ್ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆ ತಗ್ಗಿಸುವತ್ತ ಗಮನ ಹರಿಸಿರುವುದು ಶ್ಲಾಘನೀಯ” ಎಂದು ತಿಳಿಸಿದರು.
ನರೇಂದ್ರ ಮೋದಿ ಅಭಿಮಾನಿಗಳಾದ
ಕೇಬಲ್ ಮಹೇಶ್,ವಿಕ್ರಮ್ ಅಯ್ಯಂಗಾರ್, ರಾಕೇಶ್ ಭಟ್, ಅಜಯ್ ಶಾಸ್ತ್ರಿ, ಚಕ್ರಪಾಣಿ, ಸುಚೀಂದ್ರ, ಸಂದೀಪ್,ಮಹೇಂದ್ರ ಶೈವ ಸೇರಿ ಹಲವರು ಭಾಗಿಯಾಗಿದ್ದರು.