ಉದ್ಬೂರು:6 ಜನವರಿ 2022
ನಂದಿನಿ
ನಾನು ಒಂದೇ ಶಾಲೆಯಲ್ಲಿ 10ನೇ ತರಗತಿಯವರಗೆ ವಿದ್ಯಾಭ್ಯಾಸ ಮಾಡಿದ್ದೇ,ಸ್ನೇಹಿತರ ಗುಂಪೊಂದಿತ್ತು. ಅಪರೂಪ ಒಂದೇ ಶಾಲೆಯಲ್ಲಿ ಓದಿದ್ದು ನನ್ನ ಸೌಭಾಗ್ಯ,ನಿಮ್ಮ ತರನೇ ನಾನು ಆಟ ಆಡುತ್ತಿದ್ದೇ.ಸ್ನೇಹಿತರು ಮನೆಗೆ ಹೋಗೋದು ನಮ್ಮ ಮನೆಗೆ ಅವರು ಬರುತಿದ್ರು,ಹೀಗೆ ಸಂಜೆಯಾಗುತ್ತಿದ್ದಂತೆಯೇ ಫುಟ್ಬಾಲ್,ಬ್ಯಾಸ್ಕೆಟ್‌ಬಾಲ್, ಟೆನ್ನಿಸ್ ಆಡೋಕೆ ಹೋಗ್ತಿದ್ವಿ ಅಂತ ಸಂವಾದದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಬಾಲ್ಯದ ದಿನಗಳನ್ನ ಮೆಲಕು ಹಾಕಿದ್ರು.
ಹೌದು,ಕಲಿಸು ಫೌಂಡೇಶನ್
ಉದ್ಬೂರು ಸರ್ಕಾರಿ ಫ್ರೌಢ ಶಾಲೆಯಲ್ಲಿ 50 ನೇ ಗ್ರಂಥಾಲಯವನ್ನು ಉದ್ಘಾಟಿಸಿದರು.
ಶಾಲೆಯಲ್ಲೊಂದು ಸುಂದರ ಗ್ರಂಥಾಲಯ ವೀಕ್ಷೀಸಿದ ಮೈಸೂರು ಮಹಾರಾಜರು ಮೆಚ್ಚುಗೆ ವ್ಯಕ್ತಪಡಿಸಿದರು.ಕಲಿಸು ಫೌಂಡೇಶನ್ ಈಗಾಗಲೇ ಸರ್ಕಾರಿ ಶಾಲೆಯ ಉನ್ನತಿಗೆ ಹಲವಾರು ಕಾರ್ಯಗಳನ್ನು ಮಾಡುತ್ತ ಬಂದಿದೆ ಸುಮಾರು ೪೯ ಗ್ರಂಥಾಲಯಗಳನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲ ವಾಗುವ ರೀತಿಯಲ್ಲಿ ಯಶಸ್ವಿ ಗೊಳಿಸಿದೆ.
ಕಲಿಸು ಫೌಂಡೇಶನ್ ಜ್ಞಾನಾಲಯಗಳನ್ನು ನಿರ್ಮಿಸುವ ಉಪಕ್ರಮವನ್ನು ಪ್ರಾರಂಭಿಸಿ ತನ್ಮೂಲಕ ಸರ್ಕಾರಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪುಸ್ತಕಗಳನ್ನು ಓದುವುದನ್ನು ಪ್ರೋತ್ಸಾಹಿಸುತ್ತಿದೆ . ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕೆಲಸ ಮಾಡುತ್ತಿರುವ ಎನ್.ಜಿ.ಒ ಆಗಿದೆ .
ವಿನ್ಯಾಸ , ಪರಿಕಲ್ಪನೆ ಅಭಿವೃದ್ಧಿ , ಗೋಡೆಗಳ ಮೇಲೆ ಚಿತ್ರಕಲೆ , ಪುಸ್ತಕದ ಕಪಾಟುಗಳು , ಮೇಜುಗಳು , ಪುಸ್ತಕಗಳನ್ನು ಸಂಗ್ರಹಿಸುವಿಕೆ , ದೃಶ್ಯ ಸಾಧನಗಳು , ಕಲಾ ಕೆಲಸ , ಗ್ರಂಥಾಲಯದ ಅವಧಿಯನ್ನು ನಡೆಸಲು ಪ್ರತಿ ಗ್ರಂಥಾಲಯದಲ್ಲಿ ಶಿಕ್ಷಕರನ್ನು ನೇಮಿಸಲಾಗುವುದು.
ಒಂದು ವರ್ಷದ ನಿರ್ವಹಣೆಯನ್ನು ಕಲಿಸು ಫೌಂಡೇಶನ್ ನೋಡಿಕೊಳ್ಳುತ್ತದೆ ಮತ್ತು ನಂತರ ಜವಾಬ್ದಾರಿಯನ್ನು ಶಾಲಾ ಆಡಳಿತ ಮಂಡಳಿಗೆ ವರ್ಗಾಯಿಸುತ್ತದೆ ಎಂದು ಕಲಿಸು ಫೌಂಡೇಶನ್ ಸಂಸ್ಥಾಪಕರ ಸಿಇಓ ನಿಖಿಲೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಘ್ನೇಶ್ , ಮನೋಜ್ ಕುಮಾರ್, ಶಾಲಾ ಮಕ್ಕಳು ಶಿಕ್ಷಕ ವೃಂದ, ಗ್ರಾಮಸ್ಥರು ಉಪಸ್ಥಿತರಿದ್ದರು.