ಮೈಸೂರು:21 ಸೆಪ್ಟೆಂಬರ್ 2022
ನಂದಿನಿ ಮೈಸೂರು
ಪುರುಷರು ಸಾಮಾನ್ಯವಾಗಿ ರೇಷ್ಮೇ, ಕಾಟನ್,ಸಿಂಥೆಟಿಕ್ ಶರ್ಟ್ ಹಾಕೋಳ್ಳೋದನ್ನು ಎಲ್ಲರೂ ನೋಡಿಯೇ ಇರ್ತ್ತೀವಿ ಆದರೆ ಇಲ್ಲೊಬ್ಬ ವ್ಯಕ್ತಿ ಪೇಪರ್ ಶರ್ಟ್ ಧರಿಸಿದ್ದನ್ನು ನೋಡಿದ ಜನರು ಆಶ್ಚರ್ಯ ಪಡುತ್ತಿದ್ದರು.
ಹೌದು ನ್ಯೂಸ್ ಪೇಪರ್ ನಲ್ಲಿ ಮಿರಾ ಮಿರಾ ಮಿಂಚುತ್ತಿರುವವರು ಬೇರ್ಯಾರು ಅಲ್ಲ ಮೈಸೂರಿನ
ಜಾದುಗಾರ್ ಎಸ್ ಎಲ್.ಗುರುಸ್ವಾಮಿ ಸೋಮೇಶ್ವರ.ಜಾದೋಗರ್ ಗುರುಸ್ವಾಮಿ ಪೇಪರ್ ಶರ್ಟ್ ಧರಿಸಿ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕಳೆದ 31 ವರ್ಷದಿಂದ ಜಾದುಗಾರ
ಮಾತನಾಡುವ ಗೊಂಬೆ ಕಲಾವಿದನಾಗಿ ಸೇವೆ ಸಲ್ಲಿಸುತ್ತೀದ್ದಾರೆ.ಜಾದುಗಾರ ಸಮ್ಮೇಳನ ನಡೆಯುತ್ತಿತ್ತು.ಎಲ್ಲಾ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದೇ.ಹಾಗೇಯೇ
2016 ರಲ್ಲಿ ಬೆಂಗಳೂರಿನಲ್ಲಿ ನಡೆದ ಇಂಟರ್ ನ್ಯಾಶನಲ್ ಮ್ಯಾಜಿಕ್ ಅಕಾಡೆಮಿ
ಸಮ್ಮೇಳನದಲ್ಲಿ ಭಾಗಿಯಾಗಿದ್ದೇ ಈ ವೇಳೆ ನ್ಯೂಸ್ ಪೇಪರ್ ಶರ್ಟ್ ಪೀಸ್ ನನ್ನು ಎಲ್ಲರೂ ನೋಡಿ ಹಾಗೇಯೇ ಹೊರಟುಬಿಡುತ್ತಿದ್ದರು.ಆಗ ನನ್ನ ಕಣ್ಣಿಗೆ ಬಿತ್ತು.ಅದನ್ನು ನಾನು ಖರೀದಿಸಿದೆ.ಸುಮಾರು ವರ್ಷಗಳ ಕಾಲ ಶರ್ಟ್ ಪೆಟ್ಟಿಗೆಯಲ್ಲಿತ್ತು. ನಂತರ ಅದನ್ನ ಹೊಲಿಗೆ ಹಾಕಿಸಲು ದರ್ಜಿ ಬಳಿ ತೆರಳಿದಾಗ ಆತನೂ ಆಶ್ಚರ್ಯ ಪಟ್ಟು ವಿಶೇಷವಾಗಿ ಶರ್ಟ್ ಹೊಲಿದಿದ್ದಾರೆ.ಶರ್ಟ್ ಧರಿಸಿ ರಸ್ತೆಗಿಳಿಯುತ್ತಿದ್ದಂತೆ ನೂರಾರು ಜನ ಆಕರ್ಷಣೆಯಿಂದ ನೋಡುತ್ತಿದ್ದಾರೆ.ಹೀಗೂ ನ್ಯೂಸ್ ಪೇಪರ್ ನಲ್ಲಿ ಬಟ್ಟೆ ಹೊಲಿಸಿಕೊಳ್ಳಬಹುದಾ ಎಂದು ಪ್ರಶ್ನೆ ಮಾಡ್ತೀದ್ದಾರೆ ಎಂದು ಗುರುಸ್ವಾಮಿ ಖುಷಿ ಹಂಚಿಕೊಂಡಿದ್ದಾರೆ.
ವಿಶೇಷ ಏನಂದರೆ ಜಾದುಗಾರ್ ಸಮ್ಮೇಳನದಲ್ಲಿ ಕಣ್ಣಿಗೆ ಬಿದ್ದ
ನ್ಯೂಸ್ ಪೇಪರ್ ಬಟ್ಟೆ ಖಾದಿ ಬಟ್ಟೆಯಾಗಿದ್ದು ,ಈ ಶರ್ಟ್ ಮೇಲೆ ಇಂಗ್ಲೀಷ್ ಅಕ್ಷರಗಳಿವೆ.ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಈ ರೀತಿ ಬಟ್ಟೆ ಹೊಲಿಸುವ ಬಯಕೆಯನ್ನು ಗುರುಸ್ವಾಮಿ ವ್ಯಕ್ತಪಡಿಸಿದ್ದಾರೆ.