ನ್ಯೂ ಜೈಸಾ ಟೆಕ್ನಾಲಜೀಸ್‌ ಲಿಮಿಟೆಡ್‌ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲು ಎನ್‌ಎಸ್‌ಇ ಎಮರ್ಜ್‌ಗೆ ಕರಡು ದಾಖಲೆಪತ್ರಗಳನ್ನು ಸಲ್ಲಿಸಿದೆ

*ನ್ಯೂ ಜೈಸಾ ಟೆಕ್ನಾಲಜೀಸ್‌ ಲಿಮಿಟೆಡ್‌ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲು ಎನ್‌ಎಸ್‌ಇ ಎಮರ್ಜ್‌ಗೆ ಕರಡು ದಾಖಲೆಪತ್ರಗಳನ್ನು ಸಲ್ಲಿಸಿದೆ*

*ಆಗಸ್ಟ್‌ 14, 2023,* ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ (ಡಿ2ಸಿ), ಬೆಂಗಳೂರಿನಲ್ಲಿ ನೆಲೆಯಾಗಿರುವ ಬ್ರ್ಯಾಂಡ್‌ ‘ನ್ಯೂ ಜೈಸಾ ಟೆಕ್ನಾಲಜೀಸ್‌ ಲಿಮಿಟೆಡ್‌’ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲು (ಐಪಿಒ) ಎನ್‌ಎಸ್‌ಇ ಎಮರ್ಜ್‌ಗೆ ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿರುವುದಾಗಿ ಇಂದು ಪ್ರಕಟಿಸಿದೆ. ವಹಿವಾಟುಗಳನ್ನು, ಚಟುವಟಿಕೆಗಳನ್ನು ಬಹಳ ಬೇಗನೆ ವಿಸ್ತರಿಸಿಕೊಂಡಿರುವ, 2020ರಲ್ಲಿ ಆರಂಭವಾದ ಈ ನವೋದ್ಯಮದ ಪಾಲಿಗೆ ಇದು ಮೈಲಿಗಲ್ಲು ಇದ್ದಂತೆ. ನ್ಯೂ ಜೈಸಾ ಟೆಕ್ನಾಲಜೀಸ್ ಕಂಪನಿಯು ಅತ್ಯುತ್ತಮ ಗುಣಮಟ್ಟದ, ಗುಣಮಟ್ಟದ ಪರೀಕ್ಷೆ ನಡೆಸಿರುವ, ನವೀಕರಿಸಿರುವ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಕೈಗೆಟಕುವ ದರಕ್ಕೆ ಗ್ರಾಹಕರಿಗೆ ನೀಡುವ ವಹಿವಾಟುಗಳಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುವ ಗುರಿಯನ್ನು ಹೊಂದಿದೆ.

ಐಪಿಒ ಮೂಲಕ ಸಂಗ್ರಹಿಸಿದ ಬಂಡವಾಳವನ್ನು ಕಂಪನಿಯ ಸಾಮರ್ಥ್ಯ ಹೆಚ್ಚು ಮಾಡಿಕೊಳ್ಳಲು ಹಾಗೂ ಉಪಕರಣಗಳ ನವೀಕರಣದ ಕೆಲಸಕ್ಕೆ ನಿರ್ದಿಷ್ಟ ಪ್ರಕ್ರಿಯೆಗಳನ್ನು ಆಧರಿಸಿದ ಚೌಕಟ್ಟೊಂದನ್ನು ರೂಪಿಸಲು ಬಳಸಿಕೊಳ್ಳಲಾಗುತ್ತದೆ. ಐಪಿಒ ಮೂಲಕ ಬಂಡವಾಳ ಸಂಗ್ರಹಿಸುವ ಉದ್ದೇಶದಿಂದ ಕರಡು ದಾಖಲೆಪತ್ರಗಳನ್ನು ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯೂ ಜೈಸಾ ಟೆಕ್ನಾಲಜೀಸ್ ಲಿಮಿಟೆಡ್‌ ಕಂಪನಿಯ ಸಿಇಒ ಹಾಗೂ ಸಹ ಸಂಸ್ಥಾಪಕ ವಿಶೇಷ್ ಹಂದಾ ಅವರು, ‘ನಮ್ಮ ಔದ್ಯಮಿಕ ಪಯಣದಲ್ಲಿ ಈ ಒಂದು ಮಹತ್ವದ ಮೈಲಿಗಲ್ಲನ್ನು ತಲುಪಿರುವುದು ಬಹಳ ಸಂತಸ ನೀಡಿದೆ. ನಮ್ಮ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು, ಮಾರುಕಟ್ಟೆಯಲ್ಲಿ ನಮ್ಮ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು, ನಾವು ಗ್ರಾಹಕರಿಗೆ ಇನ್ನಷ್ಟು ಉತ್ತಮವಾದುದನ್ನು ನೀಡಲು ಈ ಐಪಿಒ ಅವಕಾಶ ಮಾಡಿಕೊಡಲಿದೆ. ನಮ್ಮ ಬೆಳವಣಿಗೆಯ ಪಯಣದಲ್ಲಿ ಭಾಗಿಯಾಗಲಿಕ್ಕೆ ಹಾಗೂ ನಮ್ಮ ಯಶಸ್ಸಿನಲ್ಲಿ ಪಾಲುದಾರ ಆಗಲಿಕ್ಕೆ ಹೂಡಿಕೆದಾರರಿಗೆ ಇದೊಂದು ದೊಡ್ಡ ಅವಕಾಶ ಆಗಲಿದೆ ಎಂಬುದು ನಮ್ಮ ನಂಬಿಕೆ’ ಎಂದು ಹೇಳಿದ್ದಾರೆ.

ಇಂಡೊರಿಯೆಂಟ್ ಫೈನಾನ್ಶಿಯಲ್‌ ಸರ್ವಿಸಸ್ ಲಿಮಿಟೆಡ್‌ ಕಂಪನಿಯು ಲೀಡ್ ಮ್ಯಾನೇಜರ್‌ ಆಗಿ ಈ ಪ್ರಸ್ತಾವಿತ ಐಪಿಒ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳಲಿದೆ. ಮುಂಬೈನ ಪೂಜಾ ಈಕ್ವಿರಿಸರ್ಚ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಲಹೆಗಾರನಾಗಿ ಕೆಲಸ ಮಾಡಲಿದೆ. ಹೆಚ್ಚಿನ ಮಾಹಿತಿಗೆ  newjaisa.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *