ಟೋಕಿಯೊ ಒಲಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ.
ಆ ದಿನ ಭಾರತದ ರಾಷ್ಟ್ರಗೀತೆ ಮೊಳಗುತ್ತಿದ್ದ ಕ್ಷಣ… ತ್ರಿವರ್ಣ ದ್ವಜ ಮೇಲೆರುತ್ತಿದ್ದ ಕ್ಷಣ…
ಚಿನ್ನದ ಪದಕ ಭಾರತೀಯರ ವಶವಾದ ಕ್ಷಣ..
ಇಡೀ ವಿಶ್ವದ ಭಾರತೀಯರು ಎದೆಯುಬ್ಬಿಸಿದ ಕ್ಷಣ…
ಆ ದಿನ ಎಲ್ಲೆಲ್ಲೂ ಮೊಳಗಿದ್ದು ಒಂದೇ ಹೆಸರು…
ಅದು ನೀರಜ್… ನೀರಜ್…ನೀರಜ್….
ಹೌದು… ನೀವು ಒದುತ್ತಿರೋದು… ಕೇಳುತ್ತಿರೋದು…. ಮೈನವಿರೇಳುತ್ತಿರುವುದು ಅದೇ ಗಳಿಗೆಯ ಕ್ಷಣ….
ಯಸ್… ಆ ಕ್ಷಣ ಬಂತು…ಹೆಮ್ಮೆ ಪಡುವ ಗಳಿಗೆ ಬಂತು… 130ಕೋಟಿಯ ಕನಸಿನ ಹಸಿವು ನೀಗಿತು….
ಈ ಎಲ್ಲಾ ರೋಮಾಂಚನದ ಅವಿಸ್ಮರಣೀಯ ಐತಿಹಾಸಿಕ ದಾಖಲೆ ನಿರ್ಮಾಣವಾಗಿದ್ದು ದೂರದ ಟೊಕಿಯೋದಲ್ಲಿ…
ನಿಮಗೆಲ್ಲಾ ಗೊತ್ತಿರೋ ಹಾಗೆ ಜಪಾನ್ ನ ಟೊಕಿಯೋದಲ್ಲಿ 2020ರ ಒಲಂಪಿಕ್ ಕ್ರೀಡೆ ನಡೆಯುತ್ತಿದೆ… ನಿನ್ನೆ ಅಂದ್ರೆ ಶನಿವಾರ ಸರಿಸುಮಾರು 5ರ ಹೊತ್ತಿಗೆ ಈಟಿಯೊಂದು ಬಲಭೀಮನ ಎಸೆತಕ್ಕೆ ಆಗಸದಲ್ಲಿ ಚಿಮ್ಮಿ ಆಗೆ ಹಾರಿಬಂದು ಭೂಮಿಯ ಮುತ್ತಿಕ್ಕಿ… ಆ ಈಟಿಯ ಚುಂಬನ ಇಷ್ಟು ವರ್ಷಗಳ ದಾಖಲೆಯ ಮೆಟ್ಟಿ ಇತಿಹಾಸ ಬರೆದಿತ್ತು… ಹೀಗೆ ಈಟಿಯ ರಣಕೇಕೆಗೆ ಸಾಕ್ಷಿಯಾಗಿದ್ದು ನೀರಜ್ ಚೊಪ್ರಾ…
ನೀರಜ್ ಚೋಪ್ರಾ ಈವರೆಗೂ ಯಾರಿಗೂ ತಿಳಿಯದ…ಯಾರಿಗೂ ಬೇಡವಾದ…ಯಾರಿಗೂ ಗುರುತಿಸಲಾಗದ ಹೆಸರು… ಯಾವಾಗ ಒಲಂಪಿಕ್ ಎಂಬ ಜಾವಲಿನ್ ಥ್ರೋ ಕ್ರೀಡಾಯುದ್ಧದಲ್ಲಿ ಎಲೆಮರಿಕಾಯಿಯಂತೆ ಪಾಲ್ಗೊಂಡು ಈಟಿಯ ಎಸೆದನೊ… ಆಗ ಜಗತ್ತನ್ನು ತನ್ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿಯೇ ಬಿಟ್ಟ…
ಭರ್ಜಿ ಎಸೆದ ಈ ಬಂಜರಂಗಿಯ ಅವತಾರವನ್ನ ಕಂಡ ಕ್ರೀಡಾಪ್ರೇಮಿಗಳು ಎದ್ದು ಪರಾಗ್ ಹೇಳಿಯೇ ಬಿಟ್ಟರು… ಅಷ್ಟಕ್ಕು ಈ ನೀರಜ ಈ ಸಾಧನೆಗೆ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲಾ… ಭಾರತದ ಹರಿಯಾಣ ರಾಜ್ಯದ ಕುಬ್ಜ ಗ್ರಾಮದ ಈ ಯೋಧ… ಇಡೀ ಜಗತ್ತು ಒಂದು ದಿನ ತನ್ನನ್ನು ತಿರುಗಿ ನೋಡುವಂತೆ ಮಾಡುತ್ತೆನೇ ಎಂಬ ಕನಸು ಕಂಡಿರಲಿಲ್ಲ… ಹುಟ್ಟುತ್ತಾ ಚಿನ್ನದ ಚಮಚ ಹಿಡಿದುಕೊಂಡು ಬೆಳೆಯದಿದ್ದರು… ಅವನ ಮನಸ್ಸಿನಲ್ಲಿ ನಾನು ಎಂದಾದರೂ ಆ ಚಿನ್ನಕ್ಕೆ ಮುತ್ತಿಕ್ಕುತ್ತೇನೆ ಎಂಬ ಗುರಿಯಂತು ಇತ್ತು… ಸಾಕಷ್ಟು ಏಳು-ಬೀಳುಗಳನ್ನು ಕಂಡು ಒಲಂಪಿಕ್ ಯುದ್ಧ ಭೂಮಿ ಪ್ರವೇಶಿಸಿದ ಈ ನೀರಜ್ ಜಾವಲಿನ್ ಎಸೆತದಲ್ಲಿ ತನ್ನೆಲ್ಲಾ ಎದುರಾಳಿಗಳನ್ನು ಬಗ್ಗುಬಡಿದು ವಿಜಯದ ಮಾಲೆಯನ್ನು ಧರಿಸಿ ವಿಶ್ವ ಭಾರತೀಯರ ಹೃದಯ ಸಿಂಹಾಸನಾಧೀಶನಾಗಿದ್ದಾನೇ…
ನೀರಜ್ ಸಾಧನೆಗೆ ಸ್ವತಃ ತಲೆಬಾಗಿದ ಪ್ರಧಾನಿ ಮೋದಿ… ತಕ್ಷಣಕ್ಕೆ ಕರೆ ಮಾಡಿ ಅಭಿನಂದಿಸಿ.. ಆತನ ಕ್ರೀಡಾ ಸ್ಪೂರ್ತಿಯನ್ನ ಶ್ಲಾಘಿಸಿದ್ದಾರೆ… ದೇಶದ ವಿವಿಧ ರಾಜ್ಯಗಳು ನೀರಜ್ ಸಾಧನೆಗೆ ಮೆಚ್ಚಿ ಭರಪೂರ ಕೊಡುಗೆಗಳನ್ನ ನೀಡಿ ಅಭಿನಂದಿಸಿದ್ದಾರೆ…
ಒಟ್ಟಾರೆ ಭಾರತೀಯರ ಕನಸನ್ನ ಸಾಕಾರಗೊಳಿಸಿ ಯುವ ಕ್ರೀಡಾ ಜನರಿಗೆ ಸ್ಫೂರ್ತಿಯಾದ ಈ ಯುವಕನ ಸಾಧನೆಗೆ ನನ್ನದೊಂದು ಹೃದಯ ಪೂರ್ವಕ ಸಲಾಂ…