ವಾಟ್ಸಾಪ್ ಗ್ರೂಪ್ ನಿಂದ ಸಂದೇಶ ರವಾನೆ ವಿಕಲಚೇತನ ನಟರಾಜುರವರ ಮನೆಯ ದೀಪ ಬೆಳಗಿದ ವಾರ್ಡ್ ನಂ.61 ಜನ

ಸ್ಟೋರಿ: ನಂದಿನಿ ಮೈಸೂರು

ಇತ್ತೀಚೆಗೆ ಸಾಮಾಜಿಕ ಜಾಲ ತಾಣ ಎಷ್ಟು ಅನಾನೂಕೂಲವಾಗುತ್ತೇ ಅಷ್ಟೇ ಅನುಕೂಲ ಕೂಡ ಆಗುತ್ತಿದೆ.ವಾರ್ಡಿನ ಸಮಸ್ಯೆ ಆಲಿಸಲು ಕ್ರೀಯೇಟ್ ಮಾಡಿದ್ದಾ ವಾಟ್ಸಾಪ್ ಗ್ರೂಪ್ ನಿಂದ ಸಂದೇಶ ರವಾನೆಯಾಗಿತ್ತು.ಆ ಒಂದು ಸಂದೇಶ ಒಬ್ಬ ವಿಕಲಚೇತನನ ಮನೆಗೆ ಬೆಳಕಾಗಿದೆ.

ಹೌದು ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ
ವಿಕಲಚೇತನ ನಟರಾಜುರವರಿಗೆ
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ವಿಕಲಚೇತನರ ಕೋಟಾದಡಿಯಲ್ಲಿ ಮನೆ ಮಂಜೂರಾಗಿದ್ದು,ಇಲಾಖೆಗೆ ಸಂದಾಯ ಹಣ ಕಟ್ಟಬೇಕಿತ್ತು.ನಿಂಬೆಹಣ್ಣು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ವಿಕಲಚೇತನ ನಟರಾಜುರವರಿಗೆ ಹಣ ಹೊಂದಿಸಲು ಆಗದ ಹಿನ್ನಲೆ ವಾರ್ಡ್ ನಂ.61ರ ನಗರ ಪಾಲಿಕೆ ಸದಸ್ಯೆ ಶೋಭಾ ಸುನೀಲ್ ಹಾಗೂ ಪತಿ ಸುನೀಲ್ ರವರಿಗೆ ಕರೆ ಮಾಡಿ ಸಹಾಯ ಕೋರಿದ್ದಾರೆ. 61 ನೇ ವಾರ್ಡ್ ಜನರಿಗೆ ಸಂದೇಶ ರವಾನೆಯಾಗಿದ್ದ ಸಂದೇಶಕ್ಕೆ ಸ್ಪಂದಿಸಿ ನಟರಾಜರಾವರಿಗೆ ಬೇಕಾದ ಸಂದಾಯ ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ವಿಕಲಚೇತನ ನಟರಾಜುರವರಿಗೆ ಅಗತ್ಯವಾದ
24,720 ರೂಪಾಯಿಗಳ ಚೆಕ್ ಅನ್ನು ಕಲ್ಯಾಣ ಮಂಟಪ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್,ಪಾಲಿಕೆ ಸದಸ್ಯೆ ಶೋಭಾ ಸುನೀಲ್, ವಕೀಲರಾದ ಶ್ರೀನಿವಾಸ್,ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರ್ಮೇಂದ್ರ, ಕೃಷ್ಣಪ್ಪ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯ ಸುನೀಲ್ ಮಾತನಾಡಿ ನಟರಾಜುರವರು ವಿಕಲಚೇತನರಾಗಿದ್ದು ನನಗೆ ಕರೆ ಮಾಡಿ ಸಹಾಯ ಧನ ಮಾಡುವಂತೆ ಮನವಿ ಮಾಡಿದ್ದರು.ನಮ್ಮ ವಾರ್ಡಿನ ಸಮಸ್ಯೆ ಆಲಿಸಲು ಒಂದು ವಾಟ್ಸಾಪ್ ಗ್ರೂಪ್ ಮಾಡಿದ್ದು ಅದರಲ್ಲಿ ನಟರಾಜುರವರಿಗೆ ಸಹಾಯ ಮಾಡುವಂತೆ ಸಂದೇಶ ರವಾನಿಸಿದ್ದೇವು.ಇದನ್ನು ಆಲಿಸಿದ ವಾರ್ಡಿನ ಜನರು ಹಣ ಸಹಾಯ ಮಾಡಿದ್ದಾರೆ.ದೀಪಾವಳಿಗೆ ಪಟಾಕಿ ಹಚ್ಚಿ ಸುಡುವ ಬದಲು ವಿಕಲಚೇತನ ನಟರಾಜುರವರಿಗೆ ಸಹಾಯ ಮಾಡಿ ಅವನ ಹೊಸ ಮನೆಯಲ್ಲಿ ದೀಪ ಹಚ್ಚುವಂತೆ ಒಂದು ಅಳಿಲು ಸೇವೆ ಮಾಡಿದ್ದೇವೆ ಎಂದು ಸಹಾಯ ಹಸ್ತ ಚಾಚಿದ ವಾರ್ಡಿನ ಜನರಿಗೆ ಧನ್ಯವಾದ ತಿಳಿಸಿದರು.

ಒಂದು ವಾಟ್ಸಾಪ್ ಸಂದೇಶದಿಂದ ವಾರ್ಡಿನ ಜನ ಸಹಾಯ ಹಸ್ತ ಚಾಚಿದ್ದು ವಿಕಲಚೇತನ ನಟರಾಜು ಮನೆಯಲ್ಲಿ ದೀಪಾವಳಿ ಬೆಳಕಾಗಿದೆ.

Leave a Reply

Your email address will not be published. Required fields are marked *