ನಾಗರಹೊಳೆಯಲ್ಲಿ ಕಾಡಾನೆಗಳ ದಾಂದಲೆ,ವೃದ್ದೇ ಸಾವು

 

ದಾ ರಾ ಮಹೇಶ್ ಹುಣಸೂರು

ಕಳೇದರಡು ದಿನಗಳಿಂದ ಕಾಡಾನೆಗಳು ಮೇವನ್ನು ಅರಸಿ ಊರಿನೊಳಗೆ ಬಂದು ದಾಂದಲೆ ಮಾಡಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿವೆ ನೆನ್ನೆ ಮತ್ತು ಮೊನ್ನೆ ಬಂದ ದಾರಿಯನ್ನೆ ಹಿಡಿದು ಮತ್ತೆ ಲಕ್ಷ್ಮಣತೀರ್ಥ ನದಿ ಅಂಚಿನಲ್ಲಿ ಬೀಡುಬಿಟ್ಟಿವೆ ಸಲಗವೊಂದು ಗಾಬರಿಗೊಂಡ ಅದ್ವಾಳ ಊರಿನತ್ತ ಓಡಲಾರಂಭಿಸಿದಾಗ ಪಕ್ಕದ ಕೆರೆಯ ಹತ್ತಿರ ದನಗಳನ ಮೇಯ್ಯಸುತ್ತಿದ್ದ ಹರಳಹಳ್ಳಿ ಗ್ರಾಮದ ಪುಟ್ಟಲಕ್ಷ್ಮಮ್ಮ55 ವರ್ಷ.ಆನೆಯು ದೀಡಿರ್ ದಾಳಿ ನಡೆಸಿ ಎಸೆದು ಆನೆಯು ಮುಂದೆ ಓಡಿತು ಆಕೆಯ ಬಲಗಾಲು ಮತ್ತು ಕೈ ಮೂಳೆಗಳು ಮುರಿದಿದ್ದು ನಂತರ ಸಾವನ್ನಪ್ಪಿದ್ದಾರೆ.

ಆನೆ ಓಡಿಸಲು ಬಳಸುತ್ತಿದ್ದ ಅರಣ್ಯ ಇಲಾಖೆಯ ವಾಹನದಲ್ಲಿ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಾದೆ ಕೆರೆಯ ಪಕ್ಕದಲ್ಲೇ ಮೇಯುತ್ತಿದ್ದ ಹರಳಹಳ್ಳಿ ಕಾಳೇಗೌಡ ರವರಿಗೆ ಸೇರಿದ ಇಲಾತಿ ಹಸುವನ್ನು ಹೊದ್ದ ರಭಸಕ್ಕೆ ಸ್ಥಳದಲ್ಲೇ ಅಸುನೀಗಿದೆ .

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವೀರನಹೊಸಹಳ್ಳಿ ವಲಯರಣ್ಯಾಧಿಕಾರಿ ನಮನ್ ನಾರಾಯಣ ನಾಯಕ ಮತ್ತು ಸಿಬ್ಬಂದಿ ವರ್ಗ ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿದಾಗ ಅಕ್ಕ ಪಕ್ಕದ ಗ್ರಾಮದ ಜನರು ಗುಂಪು ಹೆಚ್ಚಾಗಿದ್ದರಿಂದ ರಾತ್ರಿ ತನಕ ಕಾದು ರಾತ್ರಿ ಕಾಡಿಗೆ ಓಡಿಸುತ್ತೇವೆ ಎಂದರು .

ಆನೆಗಳು ರೈಲ್ವೆ ಬ್ಯಾರಿಕೇಡ್ ಅನ್ನು ದಾಟಿ ಆಚೆ ಎಲ್ಲಿಂದ ಬರುತ್ತಿವೆ ಎಂದು ಇಂದು ರಾತ್ರಿ ನಿಮ್ಮ ಸಿಬ್ಬಂದಿ ಜೊತೆ ಕಾದು ಮತ್ತೆ ಕಾಡಿಗೆ ಓಡಿಸಿ ಬರುವ ದಾರಿಗೆ ಆನೆ ದಾಟದಂತೆ ಬೇರೆ ಏನಾದರೂ ಯೋಜನೆ ರೂಪಿಸಲಾಗುವುದೂ ಎಂದರು ಅಲ್ಲಾದೆ ಹೊಸಪೆಂಜಹಳ್ಳಿ ಹಳೇಪೆಂಜಹಳ್ಳಿ ಗುರುಪುರ ಈ ಭಾಗದಲ್ಲಿ ಆನೆಗಳು ಬಾಳೆ ತೆಂಗಿನ ಗಿಡಗಳನ್ನು ತಿಂದು ತುಳಿದು ಹಾಕಿವೆ ತಕ್ಷಣ ರಾತ್ರಿ ಸಮಯದಲ್ಲಿ ಅರಣ್ಯ ಇಲಾಖೆ ಆನೆಗಳು ಆಚೆ ದಾಟದಂತೆ ಎಚ್ಚರ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

Leave a Reply

Your email address will not be published. Required fields are marked *