ಕೆ ಎಸ್ ಆರ್ ಟಿ ಸಿ ನಂಜನಗೂಡು ಘಟಕದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಆಚರಣೆ

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಂಜನಗೂಡು ಘಟಕದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಆಚರಣೆ ಸಮಿತಿ ವತಿಯಿಂದ ಆಚರಿಸಲಾಯಿತು.

ನಂಜನಗೂಡು ಘಟಕದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಭಾವಚಿತ್ರ ಇರಿಸಿ ವೇದಿಕೆಯ ಗಣ್ಯರು ಪುಷ್ಪ ನಮನ ಸಲ್ಲಿಸಿದರು.ನಂತರ ನಂಜನಗೂಡು ಘಟಕದ ಸಹಾಯಕ ಕಾರ್ಯಾಧಿಕ್ಷಕರಾದ ಶ್ರೀ ಕೃಷ್ಣೇಗೌಡರವರು ನಾಡಪ್ರಭು ಶ್ರೀ ಕೆಂಪೇಗೌಡರ ವಿಚಾರಧಾರೆ ಬಗ್ಗೆ ವಿಶೇಷ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ವಿಭಾಗಿಯ ಕಚೇರಿಯಿಂದ ಶ್ರೀ ಶಿವರಾಜೇಗೌಡರು ಉಪಮುಖ್ಯ ಭದ್ರತಾ ಅಧಿಕಾರಿಗಳು, ಶ್ರೀ ವಸಂತ್ ಕುಮಾರ್ ಸಹಾಯಕ ಆಡಳಿತ ಅಧಿಕಾರಿಗಳು, ಸೂರ್ಯಕಾಂತ್ ವಿಭಾಗೀಯ ತಾಂತ್ರಿಕ ಶಿಲ್ಪಿಗಳು ಶ್ರೀ ರುದ್ರಮುನಿ ಸಹಾಯಕ ಲೆಕ್ಕಾಧಿಕಾರಿ ರಶ್ಮಿ ಕಾರ್ಮಿಕ ಕಲ್ಯಾಣ ಅಧಿಕಾರಿಗಳು ವಾಣಿಶ್ರೀ, ಅಂಕಿ ಅಂಶ ಅಧಿಕಾರಿಗಳು ಹಾಗೂ ಚೆಲುವರಾಜು ಅಗ್ನಿಶಾಮಕ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ನಂಜನಗೂಡು ಘಟಕದ ವ್ಯವಸ್ಥಾಪಕರಾದ ಶ್ರೀ ಶಂಕರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ನಂಜನಗೂಡು ಘಟಕದ ಎಲ್ಲಾ ಚಾಲನ ಸಿಬ್ಬಂದಿಗಳು ತಾಂತ್ರಿಕ ಸಿಬ್ಬಂದಿಗಳು ಆಡಳಿತ ಸಿಬ್ಬಂದಿಗಳು ಹಾಗೂ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

Leave a Reply

Your email address will not be published. Required fields are marked *