ನಂದಿನಿ ಮೈಸೂರು
ಕೆಮ್ಮಣ್ಣು ಸಿದ್ದವಾಗಿತ್ತು,ಅಖಾಢಕ್ಕೆ ಸಮಯ ನಿಗಧಿಯಾಗಿತ್ತು ಪೈಲ್ವಾನರು ಅಖಾಢಕ್ಕೆ ಆಗಮಿಸುತ್ತಿದ್ದಂತೆ
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಶಿಳ್ಳೆ. ಚಪ್ಪಾಳೆ ಮೂಲಕ ಪೈಲ್ವಾರನ್ನು ಹುರಿದುಂಬಿಸಿದರು.ಒಂದೇ ಅಖಾಢದಲ್ಲಿ 60 ಜೋಡಿಗಳ ಸೆಣೆಸಾಟ ಕುಸ್ತಿ ಪ್ರೀಯರಿಗೆ ಮನರಂಜನೆ ನೀಡಿತ್ತು.
ಪೈಲ್ವಾನರಿಗೆ ಬೆನ್ನು ತಟ್ಟುವ ಮೂಲಕ ಶುಭ ಹಾರೈಸಿದ ಸಿಎಂ ಬಸವರಾಜ ಬೊಮ್ಮಾಯಿ
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 5 ನೇ ದಿನ ನಡೆದ ೪೧ನೇ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಿತು.
ಮೊದಲಿಗೆ ಶಿವರಾತ್ರೀಶ್ವರ ಶಿವಯೋಗಿಗಳ ಗದ್ದುಗೆಯಲ್ಲಿ ಪೂಜೆ ಸಲ್ಲಿಸಿ ಕುಸ್ತಿ ಜ್ಯೋತಿಯನ್ನು ವಿವಿಧ ಜಾನಪದ ಕಲಾತಂಡಗಳೊಡನೆ ಮೆರವಣಿಗೆ ಮೂಲಕ ಕುಸ್ತಿ ಅಖಾಢಕ್ಕೆ ತರಲಾಯಿತು.
ಕುಸ್ತಿ ಪಂದ್ಯಾವಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಪೈಲ್ವಾನರಿಗೆ ಬೆನ್ನು ತಟ್ಟುವ ಮೂಲಕ ಶುಭ ಹಾರೈಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುತ್ತೂರು ಕೇಸರಿ ೨೦೨೩ರ ಪ್ರಶಸ್ತಿಗೆ ಬೆಳಗಾವಿಯ ಪೈ.ನಾಗರಾಜು ಪಾತ್ರರಾದರು.
ಹರಿಯಾಣದ ಪೈ.ಬಂಟಿ ಹಾಗೂ ಬೆಳಗಾವಿಯ ಪೈ.ನಾಗರಾಜು ನಡುವೆ ನಡೆದ ಮಾರ್ಫಿಟ್ ಕುಸ್ತಿಯಲ್ಲಿ ಒಂದು ಗಂಟೆಗಳ ಕಾಲ ಇಬ್ಬರು ಪರಸ್ಪರ ಸೆಣಸಾಟ ನಡೆಸಿದರೂ ಗೆಲುವು ಯಾರಿಗೂ ಕೈಗೂಡಲಿಲ್ಲ. ಬಳಿಕ ತೀರ್ಪುಗಾರರು ಅಂತಿಮವಾಗಿ ೧೦ ನಿಮಿಷಕ್ಕೆ ಕಾದಾಟವನ್ನು ನಿಗದಿ ಮಾಡಿದಾಗ ಪೈ.ನಾಗರಾಜು ೧-೦ ಅಂತರದಲ್ಲಿ ಪೈ.ಬಂಟಿ ಅವರನ್ನು ಮಣಿಸಿ ಪ್ರಶಸ್ತಿಗೆ ಬಾಜನರಾದರು. ಗದೆ, ಪಾರಿತೋಷಕ ಹಾಗೂ ೨೫ ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸುತ್ತೂರು ಕುಮಾರ ಪ್ರಶಸ್ತಿ ಗೆದ್ದ ಶ್ರೀರಂಗಪಟ್ಟಣ ಪೈ| ಮಂಜು
ಇನ್ನು ಸುತ್ತೂರು ಕುಮಾರ ಪ್ರಶಸ್ತಿಗೆ ರಮ್ಮನಹಳ್ಳಿಯ ರವಿ ಹಾಗೂ ಶ್ರೀರಂಗಪಟ್ಟಣದ ಮಂಜು ನಡುವೆ ಎರಡೂವರೆ ಗಂಟೆಗಳ ಕಾಲ ಸೆಣಸಾಟ ನಡೆದರೂ ಗೆಲುವು ಯಾರಿಗೂ ದೊರೆಯಲಿಲ್ಲ. ಬಳಿಕ ಅವರಿಗೂ ೧೦ ನಿಮಿಷ ನಿಗದಿ ಮಾಡಿದಾಗ ೭-೬ ಅಂತರದಲ್ಲಿ ಪೈ.ಮಂಜು ಅವರು ಪೈ.ರವಿ ಅವರನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಇನ್ನು ೪೧ನೇ ರಾಷ್ಟç ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ೬೦ ಜೊತೆ ನಾಡಾ ಕುಸ್ತಿಪಟುಗಳು ಸೆಣಸಾಡಿದರು. ಎಲ್ಲರಿಗೂ ತಲಾ ೫ ನಿಮಿಷಕ್ಕೆ ನಿಗದಿ ಮಾಡಿ ಕಣಕ್ಕೆ ಬಿಡಲಾಗಿತ್ತು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.
*ಕುಸ್ತಿ ತೀರ್ಪುಗಾರರು*
ಪೈ|ಕೆಂಪೇಗೌಡ ಕೆಎಸ್ ಆರ್ ಟಿಸಿ , ಪೈ|ಈಶ್ವರ್ ರಾಯರ ಗರಡಿ,ಪೈ|
ಅಮೃತ್ ಪುರೋಹಿತ್ ಬೂತಪ್ಪನ ಗರಡಿ, ಪೈ| ರವಿ ಬನ್ನೂರು,ಪೈ|
ಸಿದ್ದರಾಜು ನಂಜನಗೂಡು, ಪೈ| ಮಲ್ಲುಸ್ವಾಮಿ,ಪೈ|ಗಂಜಾಂ ,ಪೈ|ಅಶೋಕಪುರಂ ಕೃಷ್ಣ,ಪೈ|ಬಸ್ತಿಪುರ ದೇವರಾಜು ಕುಸ್ತಿ ತೀರ್ಪುಗಾರರಾಗಿ ಆಗಮಿಸಿದ್ದರು.
*ಕುಸ್ತಿಯಲ್ಲಿ ಗೆದ್ದು ಬೀಗಿದವರು*
ಪೈ| ದರ್ಶನ್ ಎ.ಆರ್ ವಿರುದ್ದ
ಪೈ|ಜೀಶನ್ ಪಾಷ ಕನಕಪುರ ಜಯಗಳಿಸಿದ್ದಾರೆ.ಪೈ|ಶಂಕರ್ ಹೊಸಕೋಟೆ ವಿರುದ್ಧವಾಗಿ ಪೈ| ದರ್ಶನ್ ಗಂಜಾಂ ಗೆದ್ದಿದ್ದಾರೆ.ಗೌಡಳ್ಳಿ ನಿಶಾಂತ್ ರವರು ದರ್ಶನ್ ಬೋಗಾದಿ ವಿರುದ್ದ ಜಯಗಳಿದ್ದಾರೆ.