ಹುಲಿ ದಾಳಿಗೆ ಹಾಡಿ ಯುವಕ ಮಂಜು ಬಲಿ

ಕಬಿನಿ ರಾಜೇಶ್ / ನಂದಿನಿ ಮೈಸೂರು

ಹುಲಿ ದಾಳಿಗೆ ಹಾಡಿ ಯುವಕ ಮಂಜು ಬಲಿಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ. ಕುಪ್ಪೆ ಅರಣ್ಯ ವಲಯದ ಬಳ್ಳೆ ಹಾಡಿಯ ಬಿ.ಕಾಳ ಎಂಬುವರ ಮಗ ಮಂಜು ಹಾಡಿ ಪಕ್ಕದಲ್ಲೇ ಇರುವ ಅರಣ್ಯ ಇಲಾಖೆಗೆ ಸೇರಿದ ವಸತಿಗೃಹ ಹಿಂಭಾಗದ ಅರಣ್ಯ ಪ್ರದೇಶಕ್ಕೆ ಭಾನುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸೌದೆ ಸಂಗ್ರಹಿಸಲೆಂದು ಒಬ್ಬನೇ ತೆರಳಿದ್ದ. ಈ ವೇಳೆ ಪೊದೆಯ ಒಳಗೆ ಅವಿತು ಕುಳಿತಿದ್ದ ಕಬಿನಿ ಹಿನ್ನೀರು ಪ್ರದೇಶದ ಹೆಣ್ಣುಹುಲಿ ದಾಳಿ ಮಾಡಿದೆ. ಮಿದುಳು ಹಾಗೂ ಮಾಂಸ ಕಿತ್ತು ಬರುವಂತೆ ಬಾಲಕನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಅರಣ್ಯ ಇಲಾಖೆ ವಸತಿಗೃಹದ ಹಿಂಭಾಗ ಹುಲಿಯ ಚೀರಾಟ ಕೇಳಿ, ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್ ಎಫ್‌ಒ ಮಧು ಹಾಗೂ ಸಿಬ್ಬಂದಿ ಓಡಿಹೋಗಿ ನೋಡಿದ್ದಾರೆ. ಆಗ ಹುಲಿ ಇವರನ್ನು ನೋಡಿ ಮೃತ ದೇಹ ಬಿಟ್ಟು ಅರಣ್ಯದ ಪೊದೆಯೊಳಗೆ ಸೇರಿಕೊಂಡಿದೆ. ತಕ್ಷಣ ಮೃತ ದೇಹವನ್ನು ಹುಲಿ ಎಳೆದೋಗಬಹುದು ಎಂದು ಭಾವಿಸಿ ಅರಣ್ಯ ಇಲಾಖೆಯ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನಿಸಿದರು.

ಸ್ನೇಹಿತರೊಂದಿಗೆ ಮಂಜು

ಆದಿವಾಸಿಗಳ ಪ್ರತಿಭಟನೆ

ಅರಣ್ಯ ಇಲಾಖೆ ಅಧಿಕಾರಿಗಳು
ಹಾಡಿ ಜನರ ಗಮನಕ್ಕೆ ತರದೆ, ಬಾಲಕನ ಮೃತದೇಹವನ್ನು ಏಕಾಏಕಿ ಸ್ಥಳ ಮಹಾಜರು ಮಾಡದೆ ಕುಟುಂಬಸ್ಥರ ಗಮನಕ್ಕೆ ತಾರದೆ ಆರ್‌ಎಸ್‌ಓ ಮಧು ಮತ್ತು ಸಿಬ್ಬಂದಿಗಳು ಮೃತ ದೇಹವನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಎಚ್.ಡಿ. ಕೋಟೆ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಆರೋಪಿಸಿ ಬಳ್ಳೆ ಹಾಡಿ ಹಾಗೂ ಅಕ್ಕಪಕ್ಕದ ಹಾಡಿಯ ಮೃತನ ಸಂಬಂಧಿಕರು ಬಳ್ಳಿ ಚೆಕ್‌ಪೋಸ್ಟ್ ಬಳಿ ಮೈಸೂರು, ಮಾನಂದವಾಡಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟು ಕೆಲಕಾಲ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು

ಮತ್ತೆ ಅದೇ ಸ್ಥಳದಲ್ಲಿ ಪ್ರತ್ಯಕ್ಷ ಗೊಂಡ ಹುಲಿ ಬಳ್ಳೆ ಅರಣ್ಯ ಕಚೇರಿ ಪಕ್ಕದಲ್ಲೇ ಸುಮಾರು ಮೂರು ಗಂಟೆಗಳ ಕಾಲ ಪೋದೆಯಲ್ಲೇ ಕುಳಿತಿದ್ದ ಹುಲಿ ಆದಿವಾಸಿ ಮಹಿಳೆಯರು ಹುಲಿ ಕಂಡು ಹುಲಿಯನ್ನು ಕೊಲ್ಲುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರು.

ಮಂಜು ಮೃತಪಟ್ಟ ವಿಷಯ ತಿಳಿದು ಬಳ್ಳೆ ಹಾಡಿಯ ಮುಖಂಡ ಮಾಸ್ತಿ ಪ್ರಶ್ನೆ ಮಾಡಲು ಮುಂದಾದಾಗ ಆತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಆರೋಪಿಸಿದರು.
ಮೃತದೇಹವನ್ನು ತರಲು ನಾವ್ಯಾರೂ ಎಚ್.ಡಿ.ಕೋಟೆಗೆ ಹೋಗುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಅವರಿಗೆ ಇಷ್ಟಬಂದಂತೆ ಮಾಡಲಿ, ಅರಣ್ಯ ಅಧಿಕಾರಿಗಳ ದೃಷ್ಟಿಯಲ್ಲಿ ಆದಿವಾಸಿಗಳು ಬಲಹೀನರಾಗಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆಯ ಎ ಎಸ್ ಪಿ ನಂದಿನಿ ಡಿಒ ಎಸ್ ಪಿ ಮಹೇಶ್ ಕುಮಾರ್ ಸಿಪಿಐ ಲಕ್ಷ್ಮಿಕಾಂತ್ ಪಿಎಸ್ಐ ರವಿಶಂಕರ್ ಆರ್ ಎಫ್ ಮಧು ಎಸಿಎಫ್ ರಂಗಸ್ವಾಮಿ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿ ಆದಿವಾಸಿ ಮುಖಂಡರುಗಳ ಮನವೊಲಿಸಿ ಮೃತದೇಹ ಮರಣವಂತಾಗ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದರು ಇದೇ ಸಂದರ್ಭದಲ್ಲಿ ಪೊಲೀಸ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿದ್ದರು.

ಇದುವರೆಗೆ ನಾಲ್ವರ ಸಾವು

ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಇದುವರೆಗೆ ನಾಲ್ವರು ಬಲಿಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮಾನಿಮೂಲೆ ಹಾಡಿ ಹಾಗೂ ಸೇಬಿನ ಕೊಲ್ಲಿ ಹಾಡಿಯ ಇಬ್ಬರು ಆದಿವಾಸಿಗಳು ಹಾಗೂ ಗುಂಡ್ರೆ ಹುಲ್ ಮೆಟ್ಲು ವ್ಯಕ್ತಿ ಸೇರಿ ಮೂವರನ್ನು ಒಂದೇ ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿತ್ತು. ನಂತರ ಅರಣ್ಯ ಇಲಾಖೆ ವಿರುದ್ಧ ಜನರು ಪ್ರತಿಭಟನೆ ಮಾಡಿದಾಗ ಮಳ್ಳೂರು ಗೇಟ್ ಸಮೀಪ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗಿತ್ತು.

Leave a Reply

Your email address will not be published. Required fields are marked *