ನಂದಿನಿ ಮೈಸೂರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಭಿಮಾನಿ ಕಾಳಿಸಿದ್ದನ ಹುಂಡಿ ಜೈ ಸ್ವಾಮಿಯವರು ತಮ್ಮ ನೆಚ್ಚಿನ ನಾಯಕನಿಗಾಗಿ ಮೈಸೂರು ಪಾಕ್ ಹಾರ ಹಾಕಲು ಮುಂದಾಗಿದ್ದಾರೆ.
750 kg ಮೈಸೂರು ಪಾಕ್ ಬಳಕೆ ಮಾಡಿ ಹಾರ ತಯಾರಿಸಲಾಗಿದೆ. ಜೊತೆಗೆ 250ಕೆಜಿ ಹೂ ಸೇರಿದಂತೆ 1000 ಕೆಜಿ ತೂಕದ ಬೃಹತ್ ಹಾರ ಸಿದ್ಧವಾಗಿದೆ.
ಮೈಸೂರಿನ ಧನರಾಜ್ ಎನ್ನುವವರು ಮೈಸೂರು ಪಾಕ್ ಹಾರವನ್ನ ತಯಾರು ಮಾಡಿದ್ದಾರೆ.ಸುಮಾರು 2.5 ಲಕ್ಷ ರೂ ವೆಚ್ಚದಲ್ಲಿ ಈ ಮೈಸೂರು ಪಾಕ್ ಹಾರ ಮಾಡಿಸಲಾಗಿದೆ. 20 ಜನರ ತಂಡದಿಂದ ಸುಮಾರು 15 ಗಂಟೆಗಳಲ್ಲಿ ಮೈಸೂರು ಪಾಕ್ ಹಾರ ತಯಾರಾಗಿರುವುದು ವಿಷೇಶ.
ಮೈಸೂರಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಜನಧ್ವನಿ ಯಾತ್ರೆಗೆ ಆಗಮಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಬೃಹತ್ ಮೈಸೂರು ಪಾಕ್ ಹಾರವನ್ನು ತಯಾರಿಸಲಾಗಿದೆ.
ಮೈಸೂರಿನ ಕಾಂಗ್ರೆಸ್ ಕಛೇರಿ ಮುಂಭಾಗ ಕ್ರೇನ್ ಮೂಲಕ ಸಿದ್ದರಾಮಯ್ಯಗೆ ಬೃಹತ್ ಮೈಸೂರು ಪಾಕ್ ಹಾರ ಹಾಕಲು ಕಾಳಿಸಿದ್ದನ ಹುಂಡಿ ಜೈ ಸ್ವಾಮಿ ಸಿದ್ದತೆ ಮಾಡಿಕೊಂಡಿದ್ದಾರೆ.