ನಂದಿನಿ ಮನುಪ್ರಸಾದ್ ನಾಯಕ್
28ನೇ ವರ್ಷದ ಅನ್ನದಾನ

ಆಷಾಢ ಶುಕ್ರವಾರ ಹಿನ್ನೆಲೆ
ಮೈಸೂರು ಪ್ರವಾಸಿ ಮಾರ್ಗದರ್ಶಿ ಸಂಘದ ವತಿಯಿಂದ 28ನೇ ವರ್ಷ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವದ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮೈಸೂರಿನ ಗನ್ ಹೌಸ್ ಬಳಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ ರವರು ಭಾಗಿಯಾಗಿ ಭಕ್ತರಿಗೆ ಊಟ ಬಡಿಸಿದರು.
ನಂತರ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ ಮೈಸೂರು ಪ್ರವಾಸಿ ಮಾರ್ಗದರ್ಶಿ ಸಂಘದ ಕಾರ್ಯಕ್ರಮದಲ್ಲಿ 2 ವರ್ಷದಿಂದ ಪೂಜಾ ಕಾರ್ಯದಲ್ಲಿ ಭಾಗಿಯಾಗುತ್ತಿದ್ದೇನೆ.ಇವರು ನನಗೊಂದು
ಮನವಿ ಮಾಡಿದ್ರು ಅದೆನೆಂದರೇ ನಂಜನಗೂಡು ಮುಖ್ಯರಸ್ತೆಯಲ್ಲಿರುವ ಅರಳಿಕಟ್ಟೆ ಬಳಿ ಬೆಳೆದಿರುವ ಕಸವನ್ನು ತೆಗೆಯಲು ಸ್ವಚ್ಚತೆ ಕಾಪಾಡಲು ಶಾಸಕರ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಮೆಟ್ಟಿಂಗ್ ಮಾಡುವ 30ಲಕ್ಷ ರೂ. ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು.ಮೈಸೂರು ನಗರದ ಸೌಂದರ್ಯ ಹೆಚ್ಚಿಸಲು ಮುಂದಾಗುತ್ತಿದ್ದೇವೆ.ಇನ್ನೂ ಹತ್ತು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಮೈಸೂರು ಪ್ರವಾಸಿ ಮಾರ್ಗದರ್ಶಿ ಸಂಘದ ಅಧ್ಯಕ್ಷ ಶ್ರೀಕಂಠ ಮಾತನಾಡಿ ಮಹಾರಾಜರಿಂದ ಸ್ಥಾಪಿತವಾದ ಚೆಲುವಯ್ಯನವ ಮಂಟಪದಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದೆ.ಅದೇ ಮಾದರಿಯಲ್ಲಿ 2000ಕ್ಕೂ ಅಧಿಕ ಮಂದಿಗೆ ದಾನಿಗಳ ಸಹಾಯದಿಂದ ಅನ್ನದಾನ ನಡೆಸಲಾಗುತ್ತಿದೆ ಎಂದರು.
ಸಂಘದ ಸ್ವಾಮಿ ಸೇರಿ ಸಂಘದ ಪದಾಧಿಕಾರಿಗಳು ನೂರರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಸಾದ ಸವಿದರು.