ಮೈಸೂರು:26 ಜನವರಿ 2022
ನಂದಿನಿ ಮೈಸೂರು
ಇಂದು ೭೩ ನೇ ಗಣರಾಜ್ಯೋತ್ಸವ ಆಚರಣೆಯನ್ನು ಮೈಸೂರಿನ ಭಾರತೀಯ ಜನತಾ ಪಾರ್ಟಿಯ ಕಛೇರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಪಕ್ಷದ ಹಿರಿಯರಾದ ಗೋಪಾಲ್ ರಾವ್ ರವರು ನೇರವೇರಿಸಿದರು.
ನಂತರ ಮಾತನಾಡಿದ ಗೋಪಾಲ್ ರಾವ್ ರವರು ೧೯೫೦ ಜನವರಿ ೨೬ ರಂದು ಅಂಬೇಡ್ಕರ್ ಸಂವಿಧಾನವನ್ನು ಅಧಿಕೃತವಾಗಿ ಜಾರಿಗೆ ತಂದ ಹೆಮ್ಮೆಯ ದಿನ , ಹಲವು ಪ್ರಾದೇಶಿಕ ರಾಜ್ಯಗಳನ್ನು ಸೇರಿಸಿ ಒಕ್ಕೂಟ ವ್ಯವಸ್ಥೆಯೋಂದಿಗೆ ವಿಲಿನ ಮಾಡುವ ಮೂಲಕ ಇಡಿ ದೇಶಕ್ಕೆ ಒಂದೇ ಸಂವಿಧಾನವನ್ನು ಜಾರಿಗೊಳಿಸಿದ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಕರಾದ ಶ್ರೀ ವತ್ಸಾ ರವರು ಮಾತನಾಡಿ ಇದೊಂದು ರಾಷ್ಟ್ರೀಯ ಹಬ್ಬ ಕಾಶ್ಮೀರ ದಿಂದ ಕನ್ಯಾಕುಮಾರಿ ಯವರೆಗೆ ಇಡಿ ದೇಶ ಸಂಭ್ರಮಿಸುವ ರಾಷ್ಟ್ರೀಯ ಹಬ್ಬ ಹಾಗಾಗಿ ಎಲ್ಲರಿಗೂ ಗಣರಾಜ್ಯವು ದ ಶುಭಾಶಯ ಗಳು ಹಾಗೂ ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ನೆನಪು ಮಾಡಿಕೊಳ್ಳುವ ಮೂಲಕ ಅವರ ಆದರ್ಶವನ್ನು ನಮ್ಮೆಲ್ಕಾ ಕಾರ್ಯಕರ್ತರು ಅಳವಡಿಸಿ ಕೊಳ್ಳೊಣ ಎಂದರು.
ಇದೇ ವೇಳೆ ಸೋಮಸುಂದರ್,ಗಿರೀಧರ್, ಡಾ.ಕೆ ವಸಂತ ಕುಮಾರ್, ಶಿವಕುಮಾರ್ , ಜೋಗಿ ಮಂಜು,ಜಯರಾಮ್, ಶ್ರೀನಿವಾಸ್ , ಗೋಕುಲ್ ಗೋವರ್ಧನ್, ಲಕನ್ ನಾಯಕ್,ಹೇಮಾ ನಂದಿಶ್,ಹೇಮಾ ಗಂಗಪ್ಪ, ಗೋಪಾಲ್, ಭರತ್,ಶಿವರಾಜ್,ರವಿ ಪೈಲ್ವಾನ್, ಚಂದ್ರಪ್ಪ ಹಾಗೂ ಕಾರ್ಯಕರ್ತರು ಉಪಸ್ಥಿತ ರಿದ್ದರು.