ಆಕರ್ಷಕ ಪಥ ಸಂಚಲನದಲ್ಲಿ ಗಮನ ಸೆಳೆದ ವಿಶೇಷ ಶಾಲಾ ಮಕ್ಕಳು

ಮೈಸೂರು:15 ಆಗಸ್ಟ್ 2022

ನಂದಿನಿ ‌ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ
ಮೈಸೂರು ಜಿಲ್ಲಾಡಳಿತ ವತಿಯಿಂದ 76ನೇ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ
ಎಸ್.ಟಿ.ಸೋಮಶೇಖರ್ ಧ್ವಜಾರೋಹಣ   ನೆರವೇರಿಸಿದರು.ನಂತರ
ಪೋಲಿಸರ ಗೌರವವಂದನೆ ಸ್ವೀಕರಿಸಿದರು. ಪೋಲಿಸ್ ಇಲಾಖೆಯಿಂದ ಆಕರ್ಷಕ ಪಥ ಸಂಚಲನ ನಡೆಯಿತು.ವಿಶೇಷ ಶಾಲಾ ಮಕ್ಕಳು ಪಥ ಸಂಚಲನದಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದರು.

ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ತ್ಯಾಗ ಬಲಿದಾನಗಳನ್ನು ಮಾಡಿದ ಹಿರಿಯರನ್ನು ನಾವು ಇಂದು ನೆನಪು ಮಾಡಿಕೊಳ್ಳಬೇಕು ಎಂದು  ಎಸ್ ಟಿ ಸೋಮಶೇಖರ್ ಸಂದೇಶ ನೀಡಿದರು.

ವಿವಿಧ ವಿದ್ಯಾಸಂಸ್ಥೆಗಳ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ಮೂಲಕ ಗಮನ ಸೆಳೆದರು.

ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ  ಸಶಸ್ತ್ರ ದಳದ  ಟಿ. ಸಿ.ಚನ್ನಬಸಪ್ಪ ಅವರ  ಕೆ.ಎಸ್.ಆರ್. ಪಿ. ತಂಡಕ್ಕೆ ಪ್ರಥಮ ಬಹುಮಾನ,  ಪಿ ರುದ್ರಮುನಿ ತಂಡಕ್ಕೆ ದ್ವಿತೀಯ ಬಹುಮಾನ, ಸುರೇಶ್.ಆರ್. ನಗರ ಸಶಸ್ತ್ರ ಮೀಸಲು ಪಡೆ ತಂಡಕ್ಕೆ  ತೃತಿಯ ಬಹುಮಾನ ನೀಡಲಾಯಿತು.

ನಿಶಸ್ತ್ರ ದಳ ಎನ್ ಸಿ ಸಿ ಪ್ರಥಮ ಬಹುಮಾನ,  ಅಬಕಾರಿ ತಂಡಕ್ಕೆ ದ್ವಿತೀಯ ಬಹುಮಾನ,  ಎಂಸಿಸಿ ಭೂ ದಳಕ್ಕೆ ತೃತೀಯ ಬಹುಮಾನ ನೀಡಲಾಯಿತು.

ಶಾಲಾ ವಿಭಾಗದಲ್ಲಿ  ಪಿಐಎಸ್ ತಂಡಕ್ಕೆ ಪ್ರಥಮ ಬಹುಮಾನ, ವಿದ್ಯಾವರ್ಧಕ ತಂಡಕ್ಕೆ ದ್ವಿತೀಯ ಬಹುಮಾನ,  ಸ್ಕೌಟ್ಸ್ ತಂಡಕ್ಕೆ ತೃತೀಯ ಬಹುಮಾನ ವಿತರಿಸಲಾಯಿತು.ಬ್ಯಾಂಡ್ ವಿಭಾಗಕ್ಕೆ 3 ಬಹುಮಾನವನ್ನು ವಿತರಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 5 ನೆನಪಿನ ಬಹುಮಾನವನ್ನು ವಿತರಣೆ ಮಾಡಿದರು. ವಿಶೇಷ ಶಾಲಾ ಮಕ್ಕಳಿಗೆ ಒಂದು ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.ಪರೇಡ್ ಕಮಾಂಡರ್ ಗೆ 1 ನೆನಪಿನ ಕಾಣಿಕೆಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ನರಸಿಂಹರಾಜ ಕ್ಷೇತ್ರದ ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್ , ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸುನಂದಾ ಪಾಲನೇತ್ರ, ಚಾಮರಾಜ ಕ್ಷೇತ್ರದ ಶಾಸಕರಾದ ಎಲ್. ನಾಗೇಂದ್ರ, ಜಿಲ್ಲಾಧಿಕಾರಿಗಳಾದ ಗೌತಮ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ. ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿಗಳಾದ ಡಾ. ಬಿ. ಎಸ್. ಮಂಜುನಾಥ ಸ್ವಾಮಿ,ಪೋಲಿಸ್ ಆಯುಕ್ತ ಡಾ.ಚಂದ್ರಗುಪ್ತ,ಡಿಸಿಪಿ ಪ್ರದೀಪ್ ಗುಂಟಿ,ಗೀತಾ ಪ್ರಸನ್ನ,ಎಸ್ಪಿ ಚೇತನ್,ಎಎಸ್ಪಿ ಡಾ.ನಂದಿನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *