ನಂದಿನಿ ಮೈಸೂರು
ಮಳವಳ್ಳಿಯಲ್ಲಿ ವಿಧ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ
ಗಂಧದಗುಡಿ ಫೌಂಡೇಶನ್ ನಿಂದ ಪ್ರತಿಭಟಿಸಲಾಯಿತು.
ಮೈಸೂರಿನ ಗಾಂಧಿ ವೃತ್ತದ ಬಳಿ ಜಮಾಹಿಸಿದ ಪ್ರತಿಭಟನಾಕಾರರು ಅತ್ಯಾಚಾರಿ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದೀಪಾ ಹಾಗೂ ಅರ್ಯನ್ ಮಾತನಾಡಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ವಿದ್ಯಾರ್ಥಿನಿಯನ್ನು ಟ್ಯೂಷನ್ ಗೆ ಬರುವಂತೆ ಕರೆಮಾಡಿದ ಆರೋಪಿ ಬಾಲಕಿ ಬಂದ ನಂತರ “ಚಾಕಲೇಟ್ ಕೊಡಿಸುವುದಾಗಿ, ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ.ಈಗಾಗಲೇ ಆರೋಪಿ ಪೋಲಿಸರ ವಶದಲ್ಲಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ.ಅತ್ಯಾಚಾರಿಯನ್ನು
ಗಲ್ಲಿಗೇರಿಸಬೇಕು. ನಿಮಗೆ ಗಲ್ಲಿಗೇರಿಸಲು ಆಗದಿದ್ದಲ್ಲಿ ಜನರ ಬಳಿ ತಂದು ನಿಲ್ಲಿಸಿ ನಾವೇ ಗಲ್ಲಿಗೇರಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಗಂಧದಗುಡಿ ಫೌಂಡೇಷನ್ ನ ಉಪಾಧ್ಯಕ್ಷರಾದ ಮನೋಹರ್ ಗೌಡ, ಸಂಘದ ಕಾರ್ಯದರ್ಶಿಗಳಾದ ಮಹದೇವ ಶೆಟ್ಟಿ, ಪದಾಧಿಕಾರಿಗಳಾದ ಮೇಘನ್, ಆದರ್ಶ, ರಥನ್, ನಿತಿನ್, ಚೇತನ್, ಮನುಗೋಪಾಲ್ ಸೇರಿದಂತೆ ಮಹಿಳೆಯರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.