ನಂದಿನಿ ಮೈಸೂರು
ಕೆ.ಆರ್.ಕ್ಷೇತ್ರದ ಮತದಾರರಿಗೆ ಸಂಸದ ಯದುವೀರ್ ಒಡೆಯರ್ ಕೃತಜ್ಞತೆ ಸಲ್ಲಿಕೆ
ಮೈಸೂರು: ಕೆ.ಆರ್.ಕ್ಷೇತ್ರದ ವಿವಿಧೆಡೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಚರಿಸಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಟಿ.ಕೆ. ಲೆಔಟ್, ಕುವೆಂಪುನಗರ, ವಿವೇಕಾನಂದನಗರ, ಬೆಮೆಲ್ ಕಮಾನ್, ಚಿನ್ನಗಿರಿಕೊಪ್ಪಲ್ ನಲ್ಲಿ ಸರಣಿ ಕೃತಜ್ಞತಾ ಸಭೆಗಳನ್ನು ನಡೆಸುವ ಮೂಲಕ ಮತದಾರರಿಗೆ ಧನ್ಯವಾದ ಅರ್ಪಿಸಿದರು.
ಈ ವೇಳೆ ಮಾತನಾಡಿದ ಯದುವೀರ್, ನಿಮ್ಮೆಲ್ಲರ ಸಹಕಾರದಿಂದ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಪಡೆಯಲು ಸಾಧ್ಯವಾಗಿದೆ. ಇದಕ್ಕಾಗಿ ನಿಮ್ಮೆಲ್ಲರಿಗೂ ಅಭಾರಿಯಾಗಿದ್ದು, ಕೃತಜ್ಞತೆ ಸಲ್ಲಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಿಮ್ಮ ಹಾಗೂ ನಿಮ್ಮ ಬಡಾವಣೆಯ ಯಾವುದೇ ಕುಂದು-ಕೊರತೆಗಳು, ಸಮಸ್ಯೆಗಳಿದ್ದರೆ ನನ್ನನ್ನು ನೇರವಾಗಿ ಭೇಟಿ ಮಾಡಿ. ಸದ್ಯದಲ್ಲಿಯೇ ಕಚೇರಿಯಲ್ಲಿ ಸಂಸದರ ಕಚೇರಿ ಆರಂಭವಾಗಲಿದೆ. ನಮ್ಮ ಕಚೇರಿ ಯಾವಾಗಲೂ ನಿಮಗೆ ತೆರೆದಿರುತ್ತದೆ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಮಹಾ ಪೌರ ಶಿವಕುಮಾರ್, ಮಂಡಲ ಅಧ್ಯಕ್ಷ ರಘು ಅರಸ್,ಮಾಜಿ ನಗರಪಾಲಿಕೆ ಸದಸ್ಯರಾದ ಜಗದೀಶ್,ರಮೇಶ್, ಚಂಪಕ,ಗೀತಾಶ್ರೀ ಯೋಗಾನಂದ,ಕೇಬಲ್ ರಮೇಶ್,ಶಂಕರ್,ಜಗದೀಶ್, ಜೋಗಿ ಮಂಜು,ಅಮ್ಮ ಸಂತೋಷ್, ರಾಕೇಶ್ ಗೌಡ,ರಾಜೇಶ್,ಜಯಶಂಕರ್, ನಿಶಾಂತ್, ಹೇಮಂತ್,ಗಿರೀಶ್,ಸತೀಶ್,ಮಂಜುನಾಥ್, ಮನೋಜ್,ಮುಂತಾದವರು ಇದ್ದರು..